twitter
    For Quick Alerts
    ALLOW NOTIFICATIONS  
    For Daily Alerts

    ಧಾರಾವಾಹಿ ಪ್ರಿಯರಿಗೆ ಸಿಹಿ ಸುದ್ದಿ: ಚಿತ್ರೀಕರಣಕ್ಕೆ ಸಿಎಂ ಅನುಮತಿ

    |

    ಕೊರೊನಾ ಲಾಕ್ ಡೌನ್ ನಿಂದಾಗಿ ಚಿತ್ರರಂಗದ ಸಂಪೂರ್ಣ ಚಟುವಟಿಗೆ ಸ್ಥಗಿತವಾಗಿತ್ತು. ಲಾಕ್ ಡೌನ್ ನಿಂದ ನಿಂತು ಹೋಗಿದ್ದ ಧಾರಾವಾಹಿ ಚಿತ್ರೀಕರಣ ಮಾಡಲು ಸರ್ಕಾರ ಅನುಮತಿ ನೀಡಿದೆ. ಈ ಬಗ್ಗೆ ಇತ್ತೀಚಿಗೆ ನಟಿ ಮತ್ತು ರಾಜಕಾರಣಿ ತಾರಾ ನೇತೃತ್ವದಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ, ಚಿತ್ರೀಕರಣಕ್ಕೆ ಅನುಮತಿ ನೀಡುವಂತೆ ಮನವಿ ಮಾಡಿಕೊಂಡಿದ್ದರು.

    Recommended Video

    ಯೋಧನ ಬೆಂಬಲಕ್ಕೆ ನಿಂತ ಆರ್ಯವರ್ಧನ್ ಮಾಡಿದ್ದೇನು ಗೊತ್ತಾ..?

    ಚಿತ್ರೀಕರಣ ಪ್ರಾರಂಭಿಸುವ ಬಗ್ಗೆ ಇಂದು ನಿರ್ಧಾರ ತೆಗೆದುಕೊಂಡ ಸರ್ಕಾರ ಕೇವಲ ಧಾರಾವಾಹಿ ಶೂಟಿಂಗ್ ಗೆ ಮಾತ್ರ ಅನುಮತಿ ನೀಡಿರುವುದಾಗಿ ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ. ಹಂತ ಹಂತವಾಗಿ ಲಾಕ್ ಡೌನ್ ತೆಗೆಯಲು ನಿರ್ಧರಿಸಿರುವ ಸರ್ಕಾರ, ಎಣ್ಣೆ ಅಂಗಡಿ ತೆರೆಯಲು ಅನುಮತಿ ನೀಡಿದ ಬೆನ್ನಲೆ ಈಗ ಧಾರಾವಾಹಿ ಚಿತ್ರೀಕರಣಕ್ಕೂ ಅನುಮತಿ ನೀಡಿದೆ. ಮುಂದೆ ಓದಿ..

    ಸಿನಿಮಾ-ಧಾರಾವಾಹಿ ಚಿತ್ರೀಕರಣ ಆರಂಭ: ನಿರ್ಧಾರ ಪ್ರಕಟಿಸಲಿರುವ ಸರ್ಕಾರಸಿನಿಮಾ-ಧಾರಾವಾಹಿ ಚಿತ್ರೀಕರಣ ಆರಂಭ: ನಿರ್ಧಾರ ಪ್ರಕಟಿಸಲಿರುವ ಸರ್ಕಾರ

    ಸಾವಿರಾರು ಕಾರ್ಮಿಕರು ಕಿರುತೆರೆಯನ್ನೇ ನಂಬಿಕೊಂಡಿದ್ದಾರೆ

    ಸಾವಿರಾರು ಕಾರ್ಮಿಕರು ಕಿರುತೆರೆಯನ್ನೇ ನಂಬಿಕೊಂಡಿದ್ದಾರೆ

    ರಾಜ್ಯದಲ್ಲಿ ಸಾವಿರಾರು ಕಾರ್ಮಿಕರು ಕಿರುತೆರೆ ಮೇಲೆ ಅವಲಂಬಿತರಾಗಿದ್ದಾರೆ. ಲಾಕ್ ಡೌನ್ ನಿಂದ ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಕಿರುತೆರೆ ಚಿತ್ರೀಕರಣಕ್ಕೆ ಸಿಎಂ ಅನುಮತಿ ನೀಡಿದ್ದಾರೆ. ಜೊತೆಗೆ ಕೆಲವು ಷರತ್ತುಗಳನ್ನು ವಿದಿಸಿದೆ.

    ಒಳಾಂಗಣ ಚಿತ್ರೀಕರಣಕ್ಕೆ ಮಾತ್ರ ಅನುಮತಿ

    ಒಳಾಂಗಣ ಚಿತ್ರೀಕರಣಕ್ಕೆ ಮಾತ್ರ ಅನುಮತಿ

    ಧಾರಾವಾಹಿ ಚಿತ್ರೀಕರಣಕ್ಕೆ ಅನುಮತಿ ನೀಡಿದೆ ಆದರೂ ಕೇವಲ ಒಳಾಂಗಣ ಚಿತ್ರೀಕರಣ ಮಾಡಲು ಮಾತ್ರ ಅನುಮತಿ ನೀಡಿದ್ದಾರೆ. ಮನೆಯೊಳಗೆ ಚಿತ್ರೀಕರಣ ಮಾಡಬೇಕು. ಜೊತೆಗೆ ಎಲ್ಲ ಮುನ್ನಚ್ಟರಿಗೆ ಕ್ರಮಗಳನ್ನು ತೆಗೆದುಕೊಂಡು ಶೂಟಿಂಗ್ ಮಾಡಬೇಕು ಸೂಚಿಸಿದೆ.

    ರಿಯಾಲಿಟಿ ಶೋ ಚಿತ್ರೀಕರಣಕ್ಕೆ ಅನುಮತಿ ಇಲ್ಲ

    ರಿಯಾಲಿಟಿ ಶೋ ಚಿತ್ರೀಕರಣಕ್ಕೆ ಅನುಮತಿ ಇಲ್ಲ

    ಧಾರಾವಾಹಿ ಚಿತ್ರೀಕರಣಕ್ಕೆ ಮಾತ್ರ ಸರ್ಕಾರ ಅನುಮತಿ ನೀಡಿದೆ. ಧಾರಾವಾಹಿ ಚಿತ್ರೀಕರಣ ಮಾಡಿದ್ರು, ಹೊರಾಂಗಣ ಚಿತ್ರೀಕರಣಕ್ಕೆ ಅನುಮತಿ ಇಲ್ಲ. ಇನ್ನೂ ರಿಯಾಲಿಟಿ ಶೋ ಮತ್ತು ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ಇಲ್ಲ.

    ಸಿಎಂಗೆ ಮನವಿ ಸಲ್ಲಿಸಲಾಗಿತ್ತು

    ಸಿಎಂಗೆ ಮನವಿ ಸಲ್ಲಿಸಲಾಗಿತ್ತು

    ಕನ್ನಡದಲ್ಲಿ ಸರಿ ಸುಮಾರು 120 ಧಾರಾವಾಹಿಗಳು ಹಲವು ರಿಯಾಲಿಟಿ ಶೋಗಳ ಚಿತ್ರೀಕರಣ ನಡೆಯುತ್ತಿದ್ದು, 20,000 ತಂತ್ರಜ್ಞರು, ಕಲಾವಿದರು ಕಿರುತೆರೆಯನ್ನೆ ನಂಬಿಕೊಂಡಿದ್ದಾರೆ. ಅವರ ಜೀವನಕ್ಕೆ ಕಷ್ಟವಾಗುತ್ತಿದೆ ಎಂದು ತಾರಾ ನೇತೃತ್ವದ ಆಯೋಗ ಸಿಎಂ ಭೇಟಿಯಾಗಿ ಮನವಿ ಸಲ್ಲಿಸಿದ್ದರು. ಈ ಬಗ್ಗೆ ಇಂದು ನಿರ್ಧಾರ ತೆಗೆದುಕೊಂಡ ಸರ್ಕಾರ ಧಾರಾವಾಹಿ ಚಿತ್ರೀಕರಣಕ್ಕೆ ಮಾತ್ರ ಅನುಮತಿ ನೀಡಿದೆ.

    ಹಳೆಯ ಎಪಿಸೋಡ್ ಗಳ ಪ್ರಸಾರ

    ಹಳೆಯ ಎಪಿಸೋಡ್ ಗಳ ಪ್ರಸಾರ

    ಧಾರಾವಾಹಿ ಚಿತ್ರೀಕರಣ ಬಂದ್ ಆಗಿದ್ದ ಕಾರಣ, ಮನರಂಜನಾ ವಾಹಿನಿಗಳು ಧಾರಾವಾಹಿಗಳ ಹಳೆಯ ಎಪಿಸೋಡ್ ಗಳನ್ನೇ ಪ್ರಸಾರ ಮಾಡುತ್ತಿದ್ದವು. ಇನ್ನೂ ಈಗಾಗಲೆ ನಿಂತು ಹೋದ ಖ್ಯಾತ ಧಾರಾವಾಹಿಗಳನ್ನು ಮರು ಪ್ರಸಾರ ಮಾಡುತ್ತಿದ್ದಾರೆ. ಚಂದನ ವಾಹಿನಿ ರಾಮಾಯಣ, ಮಹಾಭಾರತದಂತಹ ಪೌರಣಿಕ ಧಾರಾವಾಹಿಗಳನ್ನು ಮರು ಪ್ರಸಾರ ಮಾಡುತ್ತಿದೆ.

    English summary
    Karnataka Government ordered to start serial Shooting.
    Tuesday, May 5, 2020, 16:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X