twitter
    For Quick Alerts
    ALLOW NOTIFICATIONS  
    For Daily Alerts

    ಹಿರಿಯ ನಟ ಸುದರ್ಶನ್ ಅವರಿಗೆ ಕನ್ನಡ ಚಿತ್ರರಂಗ ನೀಡುವ ಗೌರವ ಇದೇನಾ.?

    By Naveen
    |

    Recommended Video

    udarshan, Veteran Kannada Actor Demise : Kannada Film Industry insults | Filmibeat Kannada

    ಕನ್ನಡ ಚಿತ್ರರಂಗದ ಪ್ರತಿಭಾವಂತ ಕಲಾವಿದ 'ವಿಜಯನಗರದ ವೀರಪುತ್ರ' ಖ್ಯಾತಿಯ ಹಿರಿಯ ನಟ ಸುದರ್ಶನ್ ಇಂದು ವಿಧಿವಶರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸುದರ್ಶನ್ ಅವರು ಬೆಂಗಳೂರಿನ ತಿಲಕ್ ನಗರದಲ್ಲಿರುವ ಸಾಗರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

    'ವಿಜಯನಗರದ ವೀರಪುತ್ರ' ಖ್ಯಾತಿಯ ನಟ ಆರ್.ಎನ್.ಸುದರ್ಶನ್ ಇನ್ನಿಲ್ಲ'ವಿಜಯನಗರದ ವೀರಪುತ್ರ' ಖ್ಯಾತಿಯ ನಟ ಆರ್.ಎನ್.ಸುದರ್ಶನ್ ಇನ್ನಿಲ್ಲ

    60 ವರ್ಷಗಳಿಂದ ಸಿನಿಮಾರಂಗದಲ್ಲಿ ಸೇವೆ ಸಲ್ಲಿಸಿದ್ದ ಈ ನಟನ ಸಾವಿಗೆ ಕನ್ನಡ ಚಿತ್ರರಂಗ ವರ್ತಿಸಿದ್ದ ರೀತಿ ನಿಜಕ್ಕೂ ಬೇಸರವನ್ನು ತರಿಸಿದೆ. ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಇದ್ದ ಸುದರ್ಶನ್ ಅವರನ್ನು ನೋಡುವುದಕ್ಕೆ ಚಿತ್ರರಂಗದ ಯಾವುದೇ ವ್ಯಕ್ತಿಗಳು ಹೋಗಿರಲಿಲ್ಲ. ಅವರ ಕೊನೆಯ ದಿನಗಳಲ್ಲಿ ಯಾರೂ ಕೂಡ ಅವರ ಸಹಾಯಕ್ಕೆ ಬಂದಿರಲಿಲ್ಲ.

    Karnataka govt and Film Chamber's negligence towards departed Kannada actor Sudarshan

    ಇನ್ನೊಂದು ಕಡೆ ಸುದರ್ಶನ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡುವುದಕ್ಕೂ ಸರ್ಕಾರ ಮತ್ತು ಚಿತ್ರರಂಗ ಹಿಂದೆ ಮುಂದೆ ನೋಡಿತ್ತು ಎನ್ನಲಾಗಿದೆ.

    ಹಿರಿಯ ನಟ ಶಿವರಾಂ ಕೂಡ ಈ ಬಗ್ಗೆ ಮಾತನಾಡಿ ''ಸುದರ್ಶನ್ ಅವರ ಅಂತಿಮ ದರ್ಶನಕ್ಕೆ ತೊಂದರೆ ಉಂಟಾಗಿದೆ. ರವೀಂದ್ರ ಕಲಾ ಕ್ಷೇತ್ರದಲ್ಲಿ ಜಾಗ ನೀಡಿ ಅಂತ ಕೇಳಿದರೆ ಸರ್ಕಾರ ಮತ್ತು ಫಿಲ್ಮ್ ಛೇಂಬರ್ ನಿಂದ ಸರಿಯಾಗಿ ಉತ್ತರ ಬರುತ್ತಿಲ್ಲ'' ಎಂದು ತಮ್ಮ ಅಸಮಾಧಾನವನ್ನು ವ್ಯಕ್ತ ಪಡಿಸಿದ್ದರು.

    Karnataka govt and Film Chamber's negligence towards departed Kannada actor Sudarshan

    ಬಳಿಕ ರವೀಂದ್ರ ಕಲಾ ಕ್ಷೇತ್ರದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.

    ಸದ್ಯ ಸಾಮಾಜಿಕ ಜಾಲತಾಣದಲ್ಲಿಯೂ ಈ ಬಗ್ಗೆ ಅನೇಕರು ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ.

    English summary
    It was alleged that Karnataka govt and Film Chamber didn't make any arrangements at Ravindra Kalakshetra for the public to pay last respect to the departed Kannada actor Sudarshan of 'Vijayanagarada Veeraputra'. Even also did not show much interest.
    Friday, September 8, 2017, 18:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X