twitter
    For Quick Alerts
    ALLOW NOTIFICATIONS  
    For Daily Alerts

    ರಾಜ್ಯದಲ್ಲಿ ಓಮಿಕ್ರಾನ್ ಉಲ್ಬಣ: ಥಿಯೇಟರ್‌ಗೆ ಶೇ 50ರಷ್ಟು ಆಸನ ವ್ಯವಸ್ಥೆ ಆದೇಶ

    |

    ಕರ್ನಾಟಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿಢೀರನೇ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಸುಮಾರು 3 ಸಾವಿರ 48ಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ತಗುಲಿದೆ. ಒಮಿಕ್ರಾನ್, ಕೊವಿಡ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇಂದು ಇಂದು (ಜನವರಿ 4) ಸಚಿವರು, ತಜ್ಞರು, ಅಧಿಕಾರಿಗಳ ಜೊತೆ ಕೊವಿಡ್ ನಿಯಂತ್ರಣ ಕ್ರಮಗಳ ಬಗ್ಗೆ ಮಹತ್ವದ ಸಭೆ ನಡೆಸಲಾಗಿದೆ. ಸಿ ಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಲವು ಮಹತ್ವದ ನಿರ್ಯಣಗಳನ್ನು ತೆಗೆದುಕೊಳ್ಳಲಾಗಿದೆ.

    ಓಮಿಕ್ರಾನ್ ಹೆಚ್ಚಳ ಹಾಗೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳದಿಂದ ಮೂರನೇ ಅಲೆಯಲ್ಲಿ ಭೀತಿಯಲ್ಲಿ ಕರ್ನಾಟಕ ಸರ್ಕಾರವಿದೆ. ಹೀಗಾಗಿ ರಾಜ್ಯ ಸರ್ಕಾರ ಕಠಿಣ ರೂಲ್ಸ್ ಅನ್ನು ಜಾರಿಗೆ ತಂದಿದೆ. ಈ ಮೂಲಕ ಈಗ ತಾನೇ ಚೇತರಿಸಿಕೊಳ್ಳುತ್ತಿದ್ದ ಕನ್ನಡ ಚಿತ್ರರಂಗಕ್ಕೆ ಮತ್ತೆ ಸಂಕಷ್ಟ ಎದುರಾಗಿದೆ. ಜನವರಿ ತಿಂಗಳಲ್ಲಿ ಬಿಡುಗಡೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದ ಸಿನಿಮಾಗಳಿಗೆ ಮತ್ತೆ ಗೊಂದಲ ಉಂಟಾಗಿದೆ.

    ಥಿಯೇಟರ್‌ಗಳಿಗೆ ಶೇ.50ರಷ್ಟು ನಿರ್ಬಂಧ

    ಥಿಯೇಟರ್‌ಗಳಿಗೆ ಶೇ.50ರಷ್ಟು ನಿರ್ಬಂಧ

    ರಾಜ್ಯ ಸರ್ಕಾರ ಹಾಗೂ ತಜ್ಞರ ಸಮಿತಿ ನಡೆಸಿದ ಸಭೆಯಲ್ಲಿ ಕಠಿಣ ನಿಯಮವನ್ನು ಜಾರಿಗೆಗೊಳಿಸಲಾಗಿದೆ. ನಾಳೆ (ಜನವರಿ 5) ರ ರಾತ್ರಿ 10 ಗಂಟೆಯಿಂದ ರಾಜ್ಯಕ್ಕೆ ಹೊಸ ರೂಲ್ಸ್ ಜಾರಿಯಾಗಿದೆ. ಈ ಹೊಸ ಮಾರ್ಗಸೂಚಿಯ ಪ್ರಕಾರ ಜನ ಜಂಗುಳಿ ಸೇರುವ ಸ್ಥಳಗಳಲ್ಲಿ, ಅಂದರೆ ಮಾಲ್, ಥಿಯೇಟರ್‌ಗಳಲ್ಲಿ ಶೇ. 50 ರಷ್ಟು ಜನರು ಸೇರಲು ಅನುಮತಿ ನೀಡಲಾಗಿದೆ. ಹೀಗಾಗಿ ಥಿಯೇಟರ್‌ಗೆ ಶೇ. 50 ರಷ್ಟು ಆಸನ ವ್ಯವಸ್ಥೆಗೆ ಆದೇಶ ನೀಡಲಾಗಿದೆ. ಹೀಗಾಗಿ ಕನ್ನಡ ಚಿತ್ರರಂಗಕ್ಕೆ ಮತ್ತೆ ಸಂಕಷ್ಟ ಎದುರಾಗಲಿದೆ.

    2 ವಾರ ಬಿಗ್ ಸಿನಿಮಾ ರಿಲೀಸ್ ಇಲ್ಲ

    2 ವಾರ ಬಿಗ್ ಸಿನಿಮಾ ರಿಲೀಸ್ ಇಲ್ಲ

    ಜನವರಿ ತಿಂಗಳಲ್ಲಿ ಮುಂದಿನ ಎರಡು ವಾರ ಕನ್ನಡದ ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಇದು ಸಿನಿಮಾ ಮಂದಿಯಲ್ಲಿ ಕೊಂಚ ನಿರಾಳತೆಯನ್ನು ತಂದಿದೆ. ಒಂದು ವೇಳೆ ಎರಡು ವಾರಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದೆ ಹೋದರೆ, ಕನ್ನಡ ಚಿತ್ರರಂಗಕ್ಕೆ ಮತ್ತಷ್ಟು ಸಂಕಷ್ಟ ಎದುರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಈಗ ತಾನೇ ಚೇತರಿಸಿಕೊಳ್ಳುತ್ತಿದ್ದ ಕನ್ನಡ ಚಿತ್ರರಂಗಕ್ಕೆ ಮತ್ತೆ ನಷ್ಟ ಭೀತಿಯಲ್ಲಿದೆ.

    ಕನ್ನಡ ಸಿನಿಮಾಗಳಿಗೆ ಆತಂಕ

    ಕನ್ನಡ ಸಿನಿಮಾಗಳಿಗೆ ಆತಂಕ

    ಈಗಾಗಲೇ ಕರ್ನಾಟಕದಲ್ಲಿ ಕನ್ನಡದ ಐದಾರು ಸಿನಿಮಾಗಳು ಬಿಡುಗಡೆಯಾಗಿವೆ. ಡಾಲಿ ಧನಂಜಯ್ ನಟನೆಯ 'ಬಡವ ರಾಸ್ಕಲ್' ಸಿನಿಮಾ ಥಿಯೇಟರ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಡಿಸೆಂಬರ್ 31, 2021ರಂದು 'ಲವ್ ಯು ರಚ್ಚು', 'ಅರ್ಜುನ್ ಗೌಡ' ಹಾಗೂ 'ಹುಟ್ಟುಹಬ್ಬದ ಶುಭಾಶಯಗಳು' ಸಿನಿಮಾ ಬಿಡುಗಡೆಯಾಗಿವೆ. ಸಿನಿಮಾ ರಿಲೀಸ್ ಆದ ಕೇವಲ ಐದು ದಿನಗಳ ಅಂತರದಲ್ಲಿ ಈ ಎಲ್ಲಾ ಸಿನಿಮಾಗಳಿಗೆ ಸಂಕಷ್ಟ ಎದುರಾಗಿದೆ.

    ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಜಾರಿ

    ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಜಾರಿ

    ಈಗಾಗಲೇ ಜನವರಿ 7ರವರೆಗೆ ನೈಟ್ ಕರ್ಫ್ಯೂ ಜಾರಿಗೆ ಮಾಡಲಾಗಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯ ವರೆಗೆ ನೈಟ್ ಕರ್ಫ್ಯೂ ಜಾರಿಗೆಯಲ್ಲಿದೆ. ಇದನ್ನು ಮುಂದಿನ ದಿನಗಳಲ್ಲಿ ವಿಸ್ತರಿಸುವ ಸಾಧ್ಯತೆ ಹೆಚ್ಚಿರುವುದರಿಂದ ಸಿನಿಮಾದ ನೈಟ್ ಶೋ ಮೇಲೆ ನಿಂತಿದೆ. ಇನ್ನು ವೀಕೆಂಡ್ ಕರ್ಫ್ಯೂ ಕೂಡ ಜಾರಿಗೆ ತಂದಿರುವುದರಿಂದ ಶನಿವಾರ, ಭಾನುವಾರದ ಗಳಿಕೆ ಮೇಲೆ ಏಟು ಬೀಳುತ್ತಿದೆ. ಹೀಗಾಗಿ ಕನ್ನಡ ಚಿತ್ರರಂಗದ ಮುಂದಿನ ಭವಿಷ್ಯ ಆತಂಕದಲ್ಲಿದೆ.

    English summary
    The Karnataka Government implemented 50 percent seat capacity hike of omicron. Next two weeks karnataka theater will follow 50 percent rules.
    Tuesday, January 4, 2022, 22:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X