twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರಮಂದಿರಗಳು ಓಪನ್: ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ

    |

    ಅಕ್ಟೋಬರ್ 15 ರಿಂದ ದೇಶಾದ್ಯಂತ ಚಿತ್ರಮಂದಿರಗಳು ತೆರೆಯಲಿದೆ. ಕೇಂದ್ರ ಸರ್ಕಾರದ ಆದೇಶದಂತೆ ಇಂದಿನಿಂದ ಕರ್ನಾಟಕದಲ್ಲಿ ಥಿಯೇಟರ್‌ಗಳು ಕಾರ್ಯಾರಂಭ ಮಾಡಿದೆ. ಚಿತ್ರಮಂದಿರಗಳಿಗೆ ಸಂಬಂಧಿಸಿದಂತೆ ಈಗಾಗಲೇ ಕೇಂದ್ರ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ.

    ಇದೀಗ, ಕರ್ನಾಟಕ ಸರ್ಕಾರ ಸಹ ಪ್ರತ್ಯೇಕವಾಗಿ ಮಾರ್ಗಸೂಚಿ ಪ್ರಕಟಿಸಿದ್ದು, ಕೊರೊನಾ ವೈರಸ್ ತಡೆಯಲು ಸಿನಿಮಾ ಹಾಲ್‌ಗಳು ಹೇಗೆ ಕಾರ್ಯನಿರ್ವಹಿಸಬೇಕೆಂದು ಸೂಚಿಸಿದೆ. ಶೇಕಡಾ 50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ಮಾಡಿಕೊಡಬೇಕಾಗಿರುವುದರಿಂದ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಸಬೇಕಾಗಿದೆ. ಹಾಗಾದ್ರೆ, ರಾಜ್ಯ ಸರ್ಕಾರ ಪ್ರಕಟ ಮಾಡಿರುವ ಮಾರ್ಗಸೂಚಿಯಲ್ಲಿ ಏನಿದೆ? ಮುಂದೆ ಓದಿ.....

    ಚಿತ್ರಮಂದಿರ ರೀ ಓಪನ್: 24 ನಿಯಮ ಪಾಲಿಸುವಂತೆ ಕೇಂದ್ರ ಸೂಚನೆಚಿತ್ರಮಂದಿರ ರೀ ಓಪನ್: 24 ನಿಯಮ ಪಾಲಿಸುವಂತೆ ಕೇಂದ್ರ ಸೂಚನೆ

    ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ

    ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ

    * ಚಿತ್ರಮಂದಿರ ಪ್ರವೇಶಿಸುವ ಸ್ಥಳದಲ್ಲಿ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಬೇಕು. ಯಾವುದೇ ರೋಗ ಲಕ್ಷ್ಮಣಗಳು ಇಲ್ಲದ ವ್ಯಕ್ತಿಗಳನ್ನು ಮಾತ್ರ ಒಳಗೆ ಬಿಡಬೇಕು

    * ಪ್ರವೇಶದಲ್ಲಿ ಕೈ ತೊಳೆಯಲು ಹ್ಯಾಂಡ್ ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸಬೇಕು ಮತ್ತು ಇತರೆ ಸ್ಥಳಗಳಲ್ಲಿ ಇರಬೇಕು

    ಶೇಕಡಾ 50 ರಷ್ಟು ಪ್ರೇಕ್ಷಕರು

    ಶೇಕಡಾ 50 ರಷ್ಟು ಪ್ರೇಕ್ಷಕರು

    * ಚಿತ್ರಮಂದಿರ ಒಳಗೆ ಶೇಕಡಾ 50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ಕೊಡಬೇಕು.

    * ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಆಸನಗಳ ವ್ಯವಸ್ಥೆ ಮಾಡಬೇಕು

    * ಗುರುತು ಪಡಿಸಿದ ಸ್ಥಳಗಳಲ್ಲಿ ಪ್ರೇಕ್ಷಕರು ಕುಳಿತುಕೊಳ್ಳುವಂತೆ ನೋಡಿಕೊಳ್ಳಬೇಕು.

     ರಿಸ್ಕ್ ತೆಗೆದುಕೊಂಡು ಸಿನಿಮಾ ನೋಡಿ ಎಂದು ಹೇಳಲಾರೆ: ಶಿವರಾಜ್ ಕುಮಾರ್ ರಿಸ್ಕ್ ತೆಗೆದುಕೊಂಡು ಸಿನಿಮಾ ನೋಡಿ ಎಂದು ಹೇಳಲಾರೆ: ಶಿವರಾಜ್ ಕುಮಾರ್

    ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಗೆ ಆಧ್ಯತೆ ನೀಡಿ

    ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಗೆ ಆಧ್ಯತೆ ನೀಡಿ

    * ಟಿಕೆಟ್ ಖರೀದಿ ವೇಳೆ ಕಡ್ಡಾಯವಾಗಿ ಅಂತರ ಕಾಪಾಡಿಕೊಳ್ಳಬೇಕು.

    * ಡಿಜಿಟಲ್ ಟಿಕೆಟ್ ಖರೀದಿಗೆ ಹೆಚ್ಚಿನ ಆದ್ಯತೆ ನೀಡಿ ಎಂದು ಮಾರ್ಗಸೂಚಿಯಲ್ಲಿ ಸಲಹೆ ನೀಡಲಾಗಿದೆ.

    * ಚಿತ್ರಮಂದಿರದ ಒಳಗೆ, ಆರೋಗ್ಯ ಸಂಬಂಧಿತ ದೂರು ನೀಡಲು ವ್ಯವಸ್ಥೆ ಇರಬೇಕು.

    * ಪ್ರೇಕ್ಷಕರ ಆರೋಗ್ಯದ ಬಗ್ಗೆ ನಿಗಾ ವಹಿಸಿರಬೇಕು, ಚಿತ್ರಮಂದಿರವನ್ನು ಸ್ವಚ್ಛವಾಗಿಡಬೇಕು,

    * ಸಿನಿಮಾ ನಡುವೆ ವಿರಾಮದ ವೇಳೆಯಲ್ಲಿ ಸಹ ಅಂತರ ಕಾಯ್ದುಕೊಳ್ಳಬೇಕು,

    * ಟಿಕೆಟ್ ಖರೀದಿ ವೇಳೆ ವೀಕ್ಷಕರು ನಿಂತುಕೊಳ್ಳಲು ನೆಲದ ಮೇಲೆ ಮಾರ್ಕ್‌ಗಳನ್ನು ಹಾಕಬೇಕು.

    * ಪ್ರತಿಯೊಂದು ಪ್ರದರ್ಶನದ ನಂತರ ಚಿತ್ರಮಂದಿರವನ್ನು ಸ್ವಚ್ಛ ಮಾಡಬೇಕು.

    ಥಿಯೇಟರ್ ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು

    ಥಿಯೇಟರ್ ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು

    * ಚಿತ್ರಮಂದಿರ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್, ಗ್ಲೌಸ್, ಬೂಟುಗಳ ಉಪಯೋಗ ಮಾಡಬೇಕು.

    * ಚಿತ್ರಮಂದಿರದ ಒಳಗೆ ಉಗಿಯುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

    * ಚಿತ್ರಮಂದಿರದ ಒಳಗೆ ಪ್ಯಾಕೆಜ್ ಆಹಾರವನ್ನಷ್ಟೆ ಮಾರಾಟ ಮಾಡಬೇಕು. ಸಿನಿಮಾ ನಡೆಯುವ ಅವಧಿಯಲ್ಲಿ ಪ್ರೇಕ್ಷಕರಿಗೆ ಆಹಾರ ವಿತರಿಸಬಾರದು.

    * ಎಸಿ ಚಿತ್ರಮಂದಿರ ಆಗಿದ್ದರೆ ತಾಪಮಾನವನ್ನು 24-30 ಡಿಗ್ರಿ ಸೆಲ್ಸಿಯಸ್‌ ಮಾತ್ರವೇ ಇಟ್ಟಿರಬೇಕು.

    * ಮಾಸ್ಕ್ ಧರಿಸುವ ಬಗ್ಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಚಿತ್ರಮಂದಿರದ ಒಳಗೆ ಘೋಷಣೆಗಳು, ಭಿತ್ತಿ ಪತ್ರಗಳು, ಎಚ್ಚರಿಕೆ ಸಂದೇಶಗಳು ಇರಬೇಕಾಗಿವೆ.

    * ಎಲ್ಲಾ ಪ್ರೇಕ್ಷಕರ ಮೊಬೈಲ್ ಸಂಖ್ಯೆಯನ್ನು ತೆಗೆದುಕೊಳ್ಳಬೇಕು, ಕೋವಿಡ್ ನಿಯಮಗಳನ್ನು ಉಲ್ಲಂಘಿಸುವವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು,

     'ನಷ್ಟ ಸರಿತೂಗಿಸಲು ಸಿನಿಮಾ ಟಿಕೆಟ್ ಬೆಲೆ ಹೆಚ್ಚು ಮಾಡುವುದಿಲ್ಲ' 'ನಷ್ಟ ಸರಿತೂಗಿಸಲು ಸಿನಿಮಾ ಟಿಕೆಟ್ ಬೆಲೆ ಹೆಚ್ಚು ಮಾಡುವುದಿಲ್ಲ'

    English summary
    With cinema halls set to open from today, the Karnataka government has released the Standard Operating Procedure (SOP) for screening of movies.
    Thursday, October 15, 2020, 13:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X