ಸಿನಿಮಾ ಟಿಕೆಟ್ ದರ 200 ರೂ. ನಿಯಮ ಜಾರಿ; ಎಲ್ಲೆಲ್ಲಿ ದರ ಬದಲಾವಣೆಯಾಗಿದೆ? ಸಿಹಿಸುದ್ದಿ ಏನು?

ಚಿತ್ರಮಂದಿರಗಳಲ್ಲಿ ಟಿಕೆಟ್ ದರ ಕಮ್ಮಿ ಮಾಡಬೇಕು ಎನ್ನುವುದು ಪ್ರೇಕ್ಷಕರ ಮನವಿ ಆಗಿತ್ತು. ಮುಖ್ಯವಾಗಿ ಮಲ್ಟಿಪ್ಲೆಕ್ಸ್‌ಗಳಲ್ಲಿ ದುಬಾರಿ ಟಿಕೆಟ್ ದರ ತೆತ್ತು ಪ್ರೇಕ್ಷಕರು ಸುಸ್ತಾಗಿದ್ದರು. ಅಂತೂ ನಿನ್ನೆ (ಸೆಪ್ಟೆಂಬರ್ 12)ಸರ್ಕಾರ ಗಟ್ಟಿ ನಿರ್ಧಾರ ಕೈಗೊಂಡು ಟಿಕೆಟ್ 200 ರೂ. ನಿಗದಿ ಮಾಡಿ ಆದೇಶ ಹೊರಡಿಸಿದೆ. ಇಂದಿನಿಂದಲೇ ಈ ನಿಯಮ ಜಾರಿಗೆ ಬಂದಿದೆ.

ಟ್ಯಾಕ್ಸ್ ಸೇರಿ ಟಿಕೆಟ್ ದರ 236 ರೂ. ನಿಗದಿಯಾಗಿದೆ. ಗೋಲ್ಡ್ ಕ್ಲಾಸ್ ಬಿಟ್ಟು ಸಾಮಾನ್ಯ ಮಲ್ಟಿಪ್ಲೆಕ್ಸ್‌ಗಳಲ್ಲಿ ಈಗಾಗಲೇ ಟಿಕೆಟ್ ದರ ಕಮ್ಮಿಯಾಗಿದೆ. ಬುಕ್‌ಮೈ ಶೋನಲ್ಲಿ ಗಮನಿಸಿದರೆ ಟಿಕೆಟ್ ದರ ಕಡಿತಗೊಳಿಸಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ವಿಶೇಷ ಅಂದ್ರೆ ಗೋಲ್ಡ್ ಕ್ಲಾಸ್ ಬಿಟ್ಟು ಸಾಮಾನ್ಯ ಚಿತ್ರಮಂದಿರಗಳಲ್ಲಿ ಇರುವ ಎಲ್ಲಾ ಸೀಟ್‌ಗಳನ್ನು 236 ರೂ.ಗೆ ಬುಕ್ ಮಾಡಬಹುದು. ನಾರ್ಮಲ್ ರೋ(Normal Row), ಪ್ರೀಮಿಯಮ್ ರೋ(Premiam Row), ಕ್ಲಾಸಿಕ್ ರೋ (Classic Row) ಅಷ್ಟೇ ರೆಕ್ಲೈನರ್ ಸೀಟ್‌ಗಳ ಟಿಕೆಟ್ ದರ ಕೂಡ 236 ರೂ.ಗೆ ಇಳಿದಿದೆ.

Karnataka Govt Orders Ticket Price Cut Multiplex Seats Now 236 with Tax

ಬೇಡಿಕೆಗೆ ತಕ್ಕಂತೆ ಚಿತ್ರಮಂದಿರಗಳಲ್ಲಿ ಟಿಕೆಟ್ ದರ ಇಳಿಸಲಾಗುತ್ತದೆ. ಕೆಲ ಸಿಂಗಲ್ ಸ್ಕ್ರೀನ್‌ ಚಿತ್ರಮಂದಿರಗಳಲ್ಲಿ 150 ರೂ.ಗೆ ಟಿಕೆಟ್ ದರ. ಮೊದಲಿನಿಂದಲೂ ಸಿಂಗಲ್ ಸ್ಕ್ರೀನ್‌ ಚಿತ್ರಮಂದಿರಗಳಲ್ಲಿ ಟಿಕೆಟ್ ದರ 100 ರೂ, 150 ರೂ, ಇರುತ್ತಿತ್ತು. ಆದರೆ ದೊಡ್ಡ ಸಿನಿಮಾಗಳು ಬಂದಾಗ ಆರಂಭದ ಒಂದೆರಡು ದಿನ 500 ರೂ, 800 ರೂ,ಗೆ ಟಿಕೆಟ್ ದರ ಹೆಚ್ಚಿಸಲಾಗುತ್ತಿತ್ತು. ಅದಕ್ಕೆಲ್ಲಾ ಈಗ ಕಡಿವಾಣ ಬಿದ್ದಂತಾಗಿದೆ.

75 ಸೀಟ್‌ಗಳಿರುವ ಪ್ರೀಮಿಯಮ್ ಸ್ಕ್ರೀನ್ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ದರ 236 ರೂ.ಗಿಂತ ಹೆಚ್ಚಾಗಿದೆ. ಕೆಲವರು ಜಿಎಸ್‌ಟಿ ಬಗ್ಗೆಯೂ ಬೇಸರ ವ್ಯಕ್ತಪಡಿಸುತ್ತಿದ್ದಾರೆ. 200 ರೂ. ಎಂದು ಹೇಳಿ ಈಗ 236 ರೂ. ಮಾಡಿರುವುದು ಯಾವ ನ್ಯಾಯ ಎಂದು ಕೇಳುತ್ತಿದ್ದಾರೆ. ಟ್ಯಾಕ್ಸ್ ವಿಚಾರವನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕಿದೆ. 236 ರೂ. ರೆಕ್ಲೈನರ್ ಸೀಟ್‌ ಸೀಟ್‌ಗಳು ಸಿಗುತ್ತಿರುವುದು ಕೆಲವರ ಸಂತಸಕ್ಕೆ ಕಾರಣವಾಗಿದೆ.

Karnataka Govt Orders Ticket Price Cut Multiplex Seats Now 236 with Tax

ಟಿಕೆಟ್ ದರ ಕಮ್ಮಿ ಆಗಿರುವುದರಿಂದ ಮುಂದೆ ಸಿನಿಮಾ ನೋಡುವ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಬಹುದು. ಅದೇ ರೀತಿ ಸಿನಿಮಾಗಳ ಕಲೆಕ್ಷನ್ ಕಮ್ಮಿ ಆಗಬಹುದು ಎನ್ನುವ ಲೆಕ್ಕಾಚಾರವೂ ಶುರುವಾಗಿದೆ. ಇತ್ತೀಚೆಗೆ ತೆರೆಗೆ ಬಂದಿದ್ದ ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ಇದೇ ರೀತಿ ಭಾರೀ ಲಾಭ ಮಾಡಿತ್ತು. ಟಿಕೆಟ್ ದರ ಹೆಚ್ಚಿಸಿಕೊಂಡು ಮೊದಲ 3 ದಿನದಲ್ಲೇ ಭರ್ಜರಿ ಕಲೆಕ್ಷನ್ ಆಗುವಂತೆ ಮಾಡಿದ್ದರು. ದೊಡ್ಡ ಸಿನಿಮಾಗಳು ಬಂದಾಗ ಟಿಕೆಟ್ ದರ ಹೆಚ್ಚಿಸಿ ಕೆಲ ಥಿಯೇಟರ್ ಮಾಲೀಕರು, ವಿತರಕರು, ಚಿತ್ರ ನಿರ್ಮಾಪಕರು ಲಾಭ ಮಾಡುತ್ತಿದ್ದರು. ಅದಕ್ಕೆ ಕಡಿವಾಣ ಬಿದ್ದಂತಾಗಿದೆ ಎನ್ನುವ ಚರ್ಚೆಯೂ ನಡೀತಿದೆ.

ಬುಕ್‌ಮೈ ಶೋನಲ್ಲಿ ಒಂದು ಟಿಕೆಟ್ ಬುಕ್ ಮಾಡಲು 35.40 ರೂ. ಪಾವತಿಸಬೇಕು. ಆ ಲೆಕ್ಕದಲ್ಲಿ 236 ರೂ. ಟಿಕೆಟ್‌ಗೆ 271.40 ರೂ. ಕೊಟ್ಟು ಟಿಕೆಟ್ ಬುಕ್ ಮಾಡಿಕೊಳ್ಳಬಹುದಾಗಿದೆ. ತಮಿಳುನಾಡಿನ ಮಲ್ಟಿಪ್ಲೆಕ್ಸ್‌ಗಳಿಗೆ ಹೋಲಿಸಿದರೆ ಈಗ ಕೂಡ ಕರ್ನಾಟಕದಲ್ಲಿ ಸಿನಿಮಾ ಟಿಕೆಟ್ ದರ ಹೆಚ್ಚಾಗಿಯೇ ಇದೆ. ಆಂಧ್ರ, ತೆಲಂಗಾಣದಲ್ಲಿ ದೊಡ್ಡ ಸಿನಿಮಾಗಳು ಬಂದಾಗ ಸರ್ಕಾರಕ್ಕೆ ಮನವಿ ಮಾಡಿ ಟಿಕೆಟ್ ದರ ಹೆಚ್ಚಿಸಿಕೊಳ್ಳಯವ ರೂಢಿ ಕೂಡ ಇದೆ. ಮುಂದೆ ಕರ್ನಾಟಕದಲ್ಲಿ ಕೂಡ ಇದು ಶುರುವಾಗುತ್ತಾ ಕಾದು ನೋಡಬೇಕಿದೆ.

ಹಿಂದಿನ ಬಾರಿ ಮುಖ್ಯಮಂತ್ರಿ ಆಗಿದ್ದಾಗಲೇ ಸಿದ್ಧರಾಮಯ್ಯ ಸಿನಿಮಾ ಟಿಕೆಟ್ ದರ ಹೆಚ್ಚಳಕ್ಕೆ ಕಡಿವಾಣ ಹಾಕುವುದಾಗಿ ಹೇಳಿದ್ದರು. ಇತ್ತೀಚೆಗೆ ಸರ್ಕಾರದಿಂದ ಈ ಬಗ್ಗೆ ಕರಡು ಅಧಿಸೂಚನೆ ಹೊರಡಿಸಲಾಗುತ್ತು. ಆಕ್ಷೇಪಣೆ ಇದ್ದರೆ ಸಲ್ಲಿಸಲು ಹೇಳಲಾಗಿತ್ತು. ಸಾಕಷ್ಟು ಮಂದಿ ಆಕ್ಷೇಪಣೆ ಸಲ್ಲಿಸಿದ್ದರು. ಆದರೂ ಸರ್ಕಾರ ನಿಯಮ ಜಾರಿಗೆ ತಂದಿದೆ.

More from Filmibeat

English summary
Cinema Ticket Prices Slashed in Karnataka: ₹200 Cap, ₹236 in Multiplexes Including Tax
Read more about: theater sandalwood politics
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X