For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್-2 ವಿರುದ್ಧ ಕಾನೂನು ಸಮರ: ಅರ್ಜಿ ವಜಾಗೊಳಿಸಿದ ಹೈ ಕೋರ್ಟ್

  |

  ಕೆಜಿಎಫ್ ಚಾಪ್ಟರ್ ಬಿಡುಗಡೆ ಮಾಡಲು ಅನುಮತಿ ನೀಡಬಾರದು ಎಂದು ವಿರೋಧಿಸಿ ಹುಬ್ಬಳ್ಳಿ ಮೂಲದ ವ್ಯಕ್ತಿಯೊಬ್ಬ ಹೈ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಸೋಮವಾರ ಹೈ ಕೋರ್ಟ್ ವಜಾಗೊಳಿಸಿದೆ.

  'ಮಳೆ' ಚಿತ್ರದಲ್ಲಿನ Sadhu Kokila , Prem , Amulya behind the scenes

  ರಾಕಿಂಗ್ ಸ್ಟಾರ್ ಯಶ್ ಅಭಿನಯಿಸುತ್ತಿರುವ ಚಾಪ್ಟರ್ 2 ಚಿತ್ರಕ್ಕೆ ಯಾವುದೇ ಕಂಟಕ, ವಿರೋಧ ಇರಲಿಲ್ಲ. ಆದರೆ, ಬಾಲಿವುಡ್ ನಟ ಸಂಜಯ್ ಆಗಮನದ ಬಳಿಕ ಅಪಸ್ವರ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಸಿನಿಮಾ ಬಿಡುಗಡೆ ಮಾಡಲು ಅನುಮತಿಸಬಾರದೆಂದು ನಿರ್ಮಾಪಕ ಕಮ್ ಸಮಾಜ ಸೇವಕರೊಬ್ಬರು ಕೋರ್ಟ್ ಮೊರೆ ಹೋಗಿದ್ದರು. ಅಷ್ಟಕ್ಕೂ, ಏನಿದು ಕೆಜಿಎಫ್ ವಿವಾದ? ಮುಂದೆ ಓದಿ.....

  'ಅಧೀರ'ನಿಗೆ ಸಂಕಷ್ಟ?: ಸಂಜಯ್ ದತ್ ಕನ್ನಡದಲ್ಲಿ ನಟಿಸಬಾರದು ಎಂದು ಕೋರ್ಟ್‌ಗೆ ಹೋದ ನಿರ್ಮಾಪಕ

  ಸಂಜಯ್ ದತ್ ಒಬ್ಬ ದೇಶದ್ರೋಹಿ!

  ಸಂಜಯ್ ದತ್ ಒಬ್ಬ ದೇಶದ್ರೋಹಿ!

  ಸಂಜಯ್ ದತ್ ಒಬ್ಬ ದೇಶದ್ರೋಹಿ. ಅವರು ಕರ್ನಾಟಕಕ್ಕೆ ಕಾಲಿಡಬಾರದು. ಕನ್ನಡ ಸಿನಿಮಾಗಳಲ್ಲಿ ಅವರು ನಟಿಸಬಾರದು. ಅವರನ್ನು ಈ ಚಿತ್ರದಿಂದಲೇ ಕೈ ಬಿಡಬೇಕು ಎಂದು ಆಗ್ರಹಿಸಿ ಹುಬ್ಬಳಿಯ ಎಂಜಿನಿಯರ್ ಮತ್ತು ಸಮಾಜ ಸೇವಕ ಜಿ.ಶಿವಶಂಕರ್ ಎಂಬುವವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಸೋಮವಾರ ಹೈ ಕೋರ್ಟ್ ವಜಾಗೊಳಿಸಿದೆ.

  ಜೈಲು ಶಿಕ್ಷೆ ಅನಜಭವಿಸಿದ್ದ ನಟ

  ಜೈಲು ಶಿಕ್ಷೆ ಅನಜಭವಿಸಿದ್ದ ನಟ

  ಸಂಜಯ್ ದತ್ 1993ರಲ್ಲಿ ನಡೆದ ಮುಂಬೈ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಚಾರ್ಜ್‌ಷೀಟ್‌ನಲ್ಲಿ ಅವರ ಹೆಸರಿತ್ತು. ಅಕ್ರಮವಾಗಿ ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದ ಆರೋಪದಲ್ಲಿ ಐದು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದರು. 2016ರಲ್ಲಿ ಅವರು ಜೈಲಿನಿಂದ ಬಿಡುಗಡೆಯಾಗಿದ್ದರು.

  ಕೋರ್ಟ್ ಹೇಳಿದ್ದೇನು?

  ಕೋರ್ಟ್ ಹೇಳಿದ್ದೇನು?

  ಶಿಕ್ಷೆಗೆ ಒಳಗಾದ ನಟ ಸಿನಿಮಾದಲ್ಲಿ ನಟಿಸುವುದನ್ನು ನಿಷೇಧಿಸುವ ಕಾನೂನಿನ ಬಗ್ಗೆ ಕೋರ್ಟ್‌ಗೆ ಮನವರಿಕೆ ಮಾಡಿಕೊಡಲು ಅರ್ಜಿದಾರರ ಪರ ವಕೀಲರು ಯಶಸ್ವಿಯಾಗದ ಕಾರಣ, ಜಿ.ಶಿವಶಂಕರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿನಗಿ ಅವರ ವಿಭಾಗೀಯ ಪೀಠ ತಿರಸ್ಕರಿಸಿದೆ.

  ಕೆಜಿಎಫ್ ಚಿತ್ರದಲ್ಲಿ ವಿಲನ್!

  ಕೆಜಿಎಫ್ ಚಿತ್ರದಲ್ಲಿ ವಿಲನ್!

  ಹೊಂಬಾಳೆ ಫಿಲಂಸ್ ಸಂಸ್ಥೆಯ ಅಡಿ ವಿಜಯ್ ಕಿರಗಂದೂರ್ ನಿರ್ಮಿಸುತ್ತಿರುವ ಕೆಜಿಎಫ್ ಚಾಪ್ಟರ್ 2ನಲ್ಲಿ ಸಂಜಯ್ ದತ್ ಖಳನಾಯಕನಾಗಿ ನಟಿಸುತ್ತಿದ್ದಾರೆ. ಈ ಮೂಲಕ ಕನ್ನಡದಲ್ಲಿ ಸಂಜಯ್ ದತ್ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಸಂಜು ಬಾಬು ಈ ಪಾತ್ರ ಮಾಡುತ್ತಿರುವುದರಿಂದ ಸಿನಿಮಾರಂಗದಲ್ಲಿ ನಿರೀಕ್ಷೆ ಹೆಚ್ಚಿದೆ.

  ಕ್ಯಾನ್ಸರ್ ಗೆ ತುತ್ತಾದ ನಟ

  ಕ್ಯಾನ್ಸರ್ ಗೆ ತುತ್ತಾದ ನಟ

  ಹಿಂದಿ ಚಿತ್ರರಂಗದ ಹಿರಿಯ ನಟ ಸಂಜಯ್ ದತ್ ಅವರಿಗೆ ಕ್ಯಾನ್ಸರ್ ಪತ್ತೆಯಾಗಿದೆ. ವೈದ್ಯರ ಮಾಹಿತಿ ಪ್ರಕಾರ, ಕ್ಯಾನ್ಸರ್ ನಾಲ್ಕನೇ ಹಂತದಲ್ಲಿದೆ. ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದಾರೆ. ಇನ್ನು ಯಶ್ ನಾಯಕನಾಗಿ ನಟಿಸಿರುವ ಕೆಜಿಎಫ್ ಬಾಕಿ ಉಳಿದಿರುವ ಚಿತ್ರೀಕರಣವನ್ನು ಆರಂಭಿಸಿದೆ. ವರ್ಷಾಂತ್ಯಕ್ಕೆ ತೆರೆಗೆ ಬರುವ ಯೋಜನೆ ಹಾಕಿಕೊಂಡಿತ್ತು. ಆದ್ರೆ, ಲಾಕ್‌ಡೌನ್ ಹಿನ್ನೆಲೆ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗುವ ಸಾಧ್ಯತೆ ಹೆಚ್ಚಿದೆ.

  English summary
  Karnataka HC declines to entertain PIL against release of Kannada movie KGF-2, as people are against acting of convicted Bollywood star Sanjay Dutt.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X