twitter
    For Quick Alerts
    ALLOW NOTIFICATIONS  
    For Daily Alerts

    ಕರ್ನಾಟಕದಲ್ಲೂ 'ಮೋದಿ' ಚಿತ್ರ ಬಿಡುಗಡೆಗೆ ಗ್ರೀನ್ ಸಿಗ್ನಲ್

    |

    ದೆಹಲಿ ಹೈಕೋರ್ಟ್ ಇತ್ತೀಚಿಗಷ್ಟೆ 'ಪಿಎಂ ನರೇಂದ್ರ ಮೋದಿ' ಚಿತ್ರದ ಬಿಡುಗಡೆಗೆ ಗ್ರೀನ್ ಸಿಗ್ನಲ್ ನೀಡಿತ್ತು. ಲೋಕಸಭೆ ಚುನಾವಣೆ ನಡೆಯುತ್ತಿರುವುದರಿಂದ ಈ ಸಂದರ್ಭದಲ್ಲಿ ಮೋದಿ ಸಿನಿಮಾ ರಿಲೀಸ್ ಮಾಡಲು ಅವಕಾಶ ನೀಡಬಾರದು ಎಂದು ವಕೀಲರೊಬ್ಬರು ದೆಹಲಿ ಹೈಕೋರ್ಟ್ ನಲ್ಲಿ ಪಿಐಎಲ್ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಮಾಡಿದ್ದ ಕೋರ್ಟ್ ಈ ಅರ್ಜಿಯನ್ನ ತಿರಸ್ಕರಿಸಿ, ಸಿನಿಮಾ ರಿಲೀಸ್ ಮಾಡಬಹುದು ಎಂಬ ಸೂಚನೆ ನೀಡಿತ್ತು.

    ಇದೀಗ, ಕರ್ನಾಟಕದಲ್ಲೂ ಮೋದಿ ಚಿತ್ರದ ಬಿಡುಗಡೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ರಮೇಶ್ ಎಂಬ ವಕೀಲರು ಕರ್ನಾಟಕ ಹೈಕೋರ್ಟ್ ನಲ್ಲಿ 'ಪಿಎಂ ನರೇಂದ್ರಮೋದಿ' ಸಿನಿಮಾ ರಿಲೀಸ್ ಮಾಡಲು ಅವಕಾಶ ಕೊಡಬಾರದೆಂದು ಮನವಿ ಮಾಡಿದ್ದರು. 'ಚುನಾವಣೆ ವೇಳೆ ಬಯೋಪಿಕ್ ರಿಲೀಸ್ ಮಾಡುವುದು, ಮೋದಿ ಅವರ ವರ್ಚಸ್ಸು ಹೆಚ್ಚಿಸಿಕೊಳ್ಳಲು, ಇದರಿಂದ ಪ್ರಚಾರ ಸಿಗುತ್ತೆ' ಎಂದು ದೂರಿದ್ದರು.

    'ಪಿಎಂ ಮೋದಿ' ಸಿನಿಮಾ ಬಿಡುಗಡೆಗೆ ದೆಹಲಿ ಹೈ ಕೋರ್ಟ್ ಗ್ರೀನ್ ಸಿಗ್ನಲ್'ಪಿಎಂ ಮೋದಿ' ಸಿನಿಮಾ ಬಿಡುಗಡೆಗೆ ದೆಹಲಿ ಹೈ ಕೋರ್ಟ್ ಗ್ರೀನ್ ಸಿಗ್ನಲ್

    ಆದ್ರೆ, ಹೈಕೋರ್ಟ್ ಈ ಮನವಿಯನ್ನ ರಿಜೆಕ್ಟ್ ಮಾಡಿದೆ. 'ಸಿನಿಮಾಗೆ ಸಂಬಂಧಪಟ್ಟಂತೆ ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳಬಹುದು' ಎಂದು ಹೇಳಿ ಪ್ರಕರಣ ಕೈಬಿಟ್ಟಿದೆ.

    Karnataka High Court dismissed petition against PM Narendra Modi movie

    ಮೋದಿ ಚಿತ್ರದ ಹಿಂದೆಯೇ ಬರ್ತಿವೆ ಮತ್ತಷ್ಟು ರಾಜಕಾರಣಿಗಳ ಬಯೋಪಿಕ್ಮೋದಿ ಚಿತ್ರದ ಹಿಂದೆಯೇ ಬರ್ತಿವೆ ಮತ್ತಷ್ಟು ರಾಜಕಾರಣಿಗಳ ಬಯೋಪಿಕ್

    ಅಲ್ಲಿಗೆ, ಮೋದಿ ಬಯೋಪಿಕ್ ಸಿನಿಮಾ ಈ ಹಿಂದೆ ನಿರ್ಧರಿಸಿದಂತೆ ಏಪ್ರಿಲ್ 5ನೇ ತಾರೀಖು ದೇಶಾದ್ಯಂತ ಬಿಡುಗಡೆಯಾಗಲಿದೆ. ವಿವೇಕ್ ಒಬೆರಾಯ್ ಮೋದಿ ಪಾತ್ರದಲ್ಲಿ ನಟಿಸಿದ್ದು, ಒಮಂಗ್ ಕುಮಾರ್ ನಿರ್ದೇಶನ ಮಾಡಿದ್ದಾರೆ.

    English summary
    High Court of Karnataka dismissed the petition against the release of the film PM Narendra Modi. Advocate Ramesh Naik L had alleged the biopic was election propaganda for modi.
    Wednesday, April 3, 2019, 15:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X