'ಚಂಬಲ್' ತಡೆಗೆ ಹೈಕೋರ್ಟ್ ನಿರಾಕರಣೆ : ನಾಳೆ ಸಿನಿಮಾ ಬಿಡುಗಡೆ
ಐ ಪಿ ಎಸ್ ಅಧಿಕಾರಿ ಡಿ ಕೆ ರವಿ ಅವರಿಗೆ ಸಂಬಂಧಿಸಿದ ಕಥೆ ಹೊಂದಿದೆ ಎನ್ನುವ ಕಾರಣಕ್ಕೆ 'ಚಂಬಲ್' ಸಿನಿಮಾದ ಬಿಡುಗಡೆಗೆ ವಿಘ್ನ ಎದುರಾಗಿತ್ತು. ಚಿತ್ರ ರಿಲೀಸ್ ಆಗಬಾರದು ಎಂದು ಡಿಕೆ ರವಿ ತಾಯಿ ಹೈಕೋರ್ಟ್ ಮೇರೆ ಹೋಗಿದ್ದರು. ಆದರೆ, 'ಚಂಬಲ್' ಬಿಡುಗಡೆಯ ತಡೆಗೆ ಹೈಕೋರ್ಟ್ ನಿರಾಕರಿಸಿದೆ.
ನಾಳೆ ಸಿನಿಮಾ ಬಿಡುಗಡೆ ಮಾಡಲು ಕೋರ್ಟ್ ಅವಕಾಶ ನೀಡಿದೆ. ಶನಿವಾರದವರೆಗೆ ಸಿನಿಮಾ ಪ್ರದರ್ಶನ ಮಾಡಬಹುದಾಗಿದೆ. ಆದರೆ, ಸೋಮವಾರ ಚಿತ್ರವನ್ನು ವೀಕ್ಷಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದಂತೆ. ಇತ್ತ ಸಿನಿಮಾ ಬಿಡುಗಡೆಗೆ ತಡೆ ನೀಡಿಲ್ಲ ಎಂದು ಡಿ ಕೆ ರವಿ ತಾಯಿ ಇಂದು ಕೋರ್ಟ್ ಮುಂದೆಯೇ ಬೇಸರ ವ್ಯಕ್ತ ಪಡಿಸಿದ್ದಾರೆ.
ಇತ್ತ ಫೇಸ್ ಬುಕ್ ಲೈವ್ ಬಂದಿದ್ದ ನಟ ನೀನಾಸಂ ಸತೀಶ್ ಸಿನಿಮಾಗೆ ಯಾವ ಸಮಯದಲ್ಲಿ ಏನು ಬೇಕಾದರೂ ಆಗಬಹುದು. ಆದರೆ, ನಾವು ಈ ಚಿತ್ರವನ್ನು ಒಳ್ಳೆಯ ಉದ್ದೇಶದಿಂದ ಮಾಡಿದ್ದೇವೆ. ಡಿ ಕೆ ರವಿ ಅವರಿಗೆ ಸಂಬಂಧಪಟ್ಟ ಕೆಲವು ದೃಶ್ಯಗಳು ಚಿತ್ರದಲ್ಲಿವೆ. ಆ ರೀತಿಯ ಒಬ್ಬ ಅಧಿಕಾರಿ ಅನೇಕರಿಗೆ ಸ್ಪೂರ್ತಿ ಆಗಲಿ ಅಂತ ಈ ಚಿತ್ರ ಮಾಡಿದ್ದೇವೆ. ಎಲ್ಲರೂ ಸಿನಿಮಾ ನೋಡಿ. ಬೆಂಬಲಿಸಿ ಎಂದಿದ್ದಾರೆ ಸತೀಶ್.

ನಾಳೆ 'ಚಂಬಲ್' ಸಿನಿಮಾ ಗಾಂಧಿನಗರದ ಮೂವಿಲ್ಯಾಂಡ್ ಚಿತ್ರಮಂದಿರ ಸೇರಿದಂತೆ ರಾಜ್ಯಾದಂತ್ಯ ಬಿಡುಗಡೆಯಾಗುತ್ತಿದೆ. ಜೇಕಬ್ ವರ್ಗೀಸ್ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ಸತೀಶ್ ನೀನಾಸಂ, ಪವನ್ ಕುಮಾರ್, ಕಿಶೋರ್ ಹಾಗೂ ಸೋನುಗೌಡ ತಾರಬಳಗದಲ್ಲಿ ಇದ್ದಾರೆ.


Click it and Unblock the Notifications











