For Quick Alerts
  ALLOW NOTIFICATIONS  
  For Daily Alerts

  ಕರ್ನಾಟಕ ಲಾಕ್‌ಡೌನ್: ಚಿತ್ರಮಂದಿರ, ಚಿತ್ರೀಕರಣದ ಮೇಲಿನ ನಿರ್ಬಂಧ ಮುಂದುವರಿಕೆ

  |

  ರಾಜ್ಯ ಸರ್ಕಾರ ಹೊರಡಿಸಿರುವ ಹೊಸ ಲಾಕ್‌ಡೌನ್ ಆದೇಶದಂತೆ ಇನ್ನೂ ಎರಡು ವಾರಗಳ ಕಾಲ ಚಿತ್ರಮಂದಿರಗಳು ಹಾಗೂ ಸಿನಿಮಾ, ಧಾರಾವಾಹಿ ಚಿತ್ರೀಕರಣಗಳ ಮೇಲೆ ಹೇರಿದ್ದ ನಿರ್ಬಂಧ ಮುಂದುವರೆಯಲಿದೆ.

  ಪ್ರಬಲವಾಗುತ್ತಲೇ ಸಾಗುತ್ತಿರುವ ಕೊರೊನಾ ಎರಡನೇಗೆ ತಡೆಯೊಡ್ಡಲು ಏಪ್ರಿಲ್ 27ರಿಂದ ಎರಡು ವಾರಗಳ ಕಠಿಣ ಕರ್ಫ್ಯೂ ಹೇರಲಾಗಿತ್ತು. ಇಂದು ರಾಜ್ಯ ಸರ್ಕಾರವು ರಾಜ್ಯದಾದ್ಯಂತ ಲಾಕ್‌ಡೌನ್ ಹೇರಿ ಆದೇಶ ಹೊರಡಿಸಿದೆ.

  ಚಿತ್ರಮಂದಿರಗಳನ್ನು ಸಂಪೂರ್ಣ ಬಂದ್ ಮಾಡುವಂತೆ ಏಪ್ರಿಲ್ 20 ರಂದೇ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಆ ನಂತರ ಏಪ್ರಿಲ್ 27 ರಂದು ಹೊರಡಿಸಿದ್ದ ಕರ್ಫ್ಯೂ ಆದೇಶದಲ್ಲಿ ಚಿತ್ರೀಕರಣದ ಮೇಲೆ ನಿರ್ಬಂಧ ಹೇರಲಾಯಿತು. ಇದೀಗ ಹೊಸದಾಗಿ ಹೊರಡಿಸಲಾಗಿರುವ ಲಾಕ್‌ಡೌನ್ ಆದೇಶದ ಪ್ರಕಾರ ಮೇ 26 ರವರೆಗೆ ನಿರ್ಬಂಧ ಮುಂದುವರೆಯಲಿದೆ.

  ಕಳೆದ ಕರ್ಪ್ಯೂ ಅವಧಿಯಲ್ಲಿ ಕೆಲವು ರಿಯಾಲಿಟಿ ಶೋಗಳ ಚಿತ್ರೀಕರಣ ನಡೆದಿತ್ತು. ಕೆಲವು ಹಿಂದಿ ರಿಯಾಲಿಟಿ ಶೋಗಳ ಚಿತ್ರೀಕರಣವನ್ನು ಸಹ ಬೆಂಗಳೂರಿನಲ್ಲಿ ಮಾಡಲಾಗಿತ್ತು. ಆದರೆ ಈ ಬಾರಿ ಸರ್ಕಾರವು ಕಡ್ಡಾಯವಾಗಿ ಚಿತ್ರೀಕರಣಕ್ಕೆ ನಿರ್ಬಂಧ ಹೇರಿದೆ.

  ಹಿರಿಯ ನಟ, ರಂಗಭೂಮಿ ಕಲಾವಿದ Shankhanada Aravind ಕೊವಿಡ್ ನಿಂದ ಸಾವು | Filmibeat Kannada

  ಕೊರೊನಾ ಪ್ರಕರಣಗಳು ಕಡಿಮೆ ಆದಲ್ಲಿ ಮೇ 26 ರ ನಂತರ ಚಿತ್ರೀಕರಣಕ್ಕೆ ಅವಕಾಶ ನೀಡುವ ಸಾಧ್ಯತೆ ಇದೆ. ಚಿತ್ರಮಂದಿರಗಳು ಪುನಃ ತೆರೆಯಲು ಕನಿಷ್ಟ ಎರಡು ತಿಂಗಳಾದರೂ ಕಾಯಬೇಕಾಗಬಹುದು.

  English summary
  Karnataka state government orders lock down in state. Movie and serial shooting is prohibited. Theaters were closed.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X