twitter
    For Quick Alerts
    ALLOW NOTIFICATIONS  
    For Daily Alerts

    ದಾನಿಗಳು ಕೊಟ್ಟಿದ್ದನ್ನು ನುಂಗಿದ್ರು, ನಮಗೆ ಏನೂ ಕೊಟ್ಟಿಲ್ಲ: ಸಹ ಕಲಾವಿದರು ಕಣ್ಣೀರು

    |

    ಕೊರೊನಾ ವೈರಸ್ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿದ ಸಹ ಕಲಾವಿದರಿಗೆ ಯಾರೂ ಸ್ಪಂದಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಸಿನಿ ಕಾರ್ಮಿಕರಿಗೆ, ಕಷ್ಟದಲ್ಲಿರುವ ಕಲಾವಿದರಿಗೆಂದು ದಾನಿಗಳು ಆಹಾರ ಕಿಟ್, ದಿನಸಿ ಕಿಟ್, ಹಣ ವಿತರಿಸಿದ್ದರೂ, ನಮಗೆ ಯಾರೂ ಕೊಟ್ಟಿಲ್ಲ, ಎಲ್ಲವನ್ನು ಅವರೇ ನುಂಗಿ ಹಾಕಿದ್ದಾರೆ ಎಂದು ಕರ್ನಾಟಕ ಚಲನಚಿತ್ರ ಮತ್ತು ಕಿರುತೆರೆ ಸಹ ಕಲಾವಿದರ ಸಂಘ ದೂರಿದೆ.

    Recommended Video

    June 28ಕ್ಕೆ ಪ್ರತಿಭಟನೆಗೆ ಸಜ್ಜಾಗುತ್ತಿರುವ ಕಲಾವಿದರ ಸಂಘ!! | Filmibeat Kannada

    ಈ ಹಿನ್ನೆಲೆ ಸರ್ಕಾರ, ವಾಣಿಜ್ಯ ಮಂಡಳಿ, ಕಾರ್ಮಿಕರ ಒಕ್ಕೂಟ, ನಿರ್ಮಾಪಕರ ಸಂಘದ ವಿರುದ್ಧ ಉಪವಾಸ ಸತ್ಯಾಗ್ರಹದ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ. ಜೂನ್ 28 ರಂದು ಬೆಂಗಳೂರಿನ ಆನಂದ್ ರಾವ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸಹ ಕಲಾವಿದರು ಭಾಗವಹಿಸಿ ಪ್ರತಿಭಟನೆ ಮಾಡಲಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ. ಮುಂದೆ ಓದಿ...

    ಸಿನಿ ಕಾರ್ಮಿಕರ ಒಕ್ಕೂಟಕ್ಕೆ 10 ಲಕ್ಷ ನೀಡಿದ ಸೆಂಚುರಿ ಸ್ಟಾರ್ ಶಿವಣ್ಣಸಿನಿ ಕಾರ್ಮಿಕರ ಒಕ್ಕೂಟಕ್ಕೆ 10 ಲಕ್ಷ ನೀಡಿದ ಸೆಂಚುರಿ ಸ್ಟಾರ್ ಶಿವಣ್ಣ

    ನಾಲ್ಕು ಜನ ಅಧಿಕಾರಿಗಳು ನುಂಗಿದ್ರು

    ನಾಲ್ಕು ಜನ ಅಧಿಕಾರಿಗಳು ನುಂಗಿದ್ರು

    ದಾನಿಗಳು ಬಡ ಕಾರ್ಮಿಕರಿಗಾಗಿ ಆಹಾರ ಕಿಟ್‌ಗಳು ಕೊಟ್ಟರು. ಆದರೆ, ಕಾರ್ಮಿಕ ಒಕ್ಕೂಟದ ನಾಲ್ಕು ಜನ ಅಧಿಕಾರಿಗಳು ಅದನ್ನು ತಿಂದು ಲೂಟಿ ಮಾಡುತ್ತಿದ್ದಾರೆ ಎಂದು ಕರ್ನಾಟಕ ಚಲನಚಿತ್ರ ಮತ್ತು ಕಿರುತೆರೆ ಸಹ ಕಲಾವಿದರ ಸಂಘ ದೂರಿದೆ. ಈ ಬಗ್ಗೆ ಮಾಧ್ಯಮ ಪ್ರಕಟಣೆ ಸಹ ಬಿಡುಗಡೆ ಮಾಡಿದೆ.

    ಸಹ ಕಲಾವಿದರಿಗೆ ಯಾರಿಂದಲೂ ಸಹಾಯವಾಗಿಲ್ಲ

    ಸಹ ಕಲಾವಿದರಿಗೆ ಯಾರಿಂದಲೂ ಸಹಾಯವಾಗಿಲ್ಲ

    ''ಸರ್ಕಾರದಿಂದಾಗಲಿ, ಫಿಲಂ ಚೇಂಬರ್‌ನಿಂದಾಗಲಿ, ನಿರ್ಮಾಪಕ ಸಂಘ ಹಾಗೂ ಕಾರ್ಮಿಕರ ಒಕ್ಕೂಟದಿಂದಾಗಲೀ ಸಹ ಕಲಾವಿದರಿಗೆ ಯಾವ ರೀತಿಯೂ ಸಹಾಯವಾಗಿಲ್ಲ. ದಾನಿಗಳು ನೀಡಿದ ಹಣವೂ ತಲುಪಿಲ್ಲ. ಕಾರ್ಮಿಕರ ಒಕ್ಕೂಟದಲ್ಲಿ ಚಾಹನ ಚಾಲಕರು, ಪ್ರೊಡಕ್ಷನ್ ಬಾಯ್ಸ್ ಮತ್ತು ಕಮೀಷನ್‌ಗೆ ಕೆಲಸ ಮಾಡುವ ಪ್ರೊಡಕ್ಷನ್ ಮ್ಯಾನೇಜರ್‌ಗಳ ಸಂಘ ಮಾತ್ರ ಇದೆ, ಇಳಿದ 17 ಸಂಘಗಳು ದೂರ ಉಳಿದಿದೆ'' ಎಂದು ಆಕ್ರೋಶ ಹೊರಹಾಕಿದ್ದಾರೆ.

    3 ಸಾವಿರ ಸಿನಿ ಕುಟುಂಬಗಳಿಗೆ ತಲಾ 5 ಸಾವಿರ ನೆರವು ಘೋಷಿಸಿದ ಯಶ್3 ಸಾವಿರ ಸಿನಿ ಕುಟುಂಬಗಳಿಗೆ ತಲಾ 5 ಸಾವಿರ ನೆರವು ಘೋಷಿಸಿದ ಯಶ್

    ಭಿಕ್ಷೆ ಬೇಡಿ ಆಹಾರ ತಂದು ಕೊಡುತ್ತಿದ್ದೇವೆ

    ಭಿಕ್ಷೆ ಬೇಡಿ ಆಹಾರ ತಂದು ಕೊಡುತ್ತಿದ್ದೇವೆ

    ''ನಮ್ಮ ಸಂಘದ ವತಿಯಿಂದ ನಾವುಗಳು ಭಿಕ್ಷೆ ಬೇಡಿ ಆಹಾರ ಧಾನ್ಯಗಳನ್ನು ತಂದು ಸಹ ಕಲಾವಿದರಿಗೆ ಹಂಚುತ್ತಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ. ಸಹ ಕಲಾವಿದ ಸಂಘದ ವತಿಯಿಂದ ಹುಟ್ಟುವ ಮಗುವಿನಿಂದ ವೃದ್ದರವರೆಗೂ ಎಲ್ಲಾ ಕಲಾವಿದರನ್ನು ಸಿನಿಮಾಗಳಿಗೆ ಕಳುಹಿಸುತ್ತಿದ್ದೇವೆ, ನಾವಿಲ್ಲ ಅಂದ್ರೆ ಚಿತ್ರರಂಗವಿರುವುದಿಲ್ಲ'' ಎಂದು ಬೇಸರ ವ್ಯಕ್ತಪಡಿಸಿದರು.

    ಯಶ್-ಪುನೀತ್-ಶಿವಣ್ಣ ಸಹಾಯ ಮಾಡಿದ್ದು?

    ಯಶ್-ಪುನೀತ್-ಶಿವಣ್ಣ ಸಹಾಯ ಮಾಡಿದ್ದು?

    ನಟ ಯಶ್, ಸುಮಾರು 3 ಸಾವಿರ ಕುಟುಂಗಳಿಗೆ ತಲಾ 5 ಸಾವಿರ ರೂಪಾಯಿಯಂತೆ ಬ್ಯಾಂಕ್ ಖಾತೆಗೆ ಹಣ ಜಮಾವಣೆ ಮಾಡಿಸಿದ್ದಾರೆ. ಕಾರ್ಮಿಕರ ಒಕ್ಕೂಟದ ಸಹಯೋಗದಲ್ಲಿ ಈ ಕೆಲಸ ಆಗಿದೆ. ಪುನೀತ್ ರಾಜ್ ಕುಮಾರ್ ಮತ್ತು ಶಿವರಾಜ್ ಕುಮಾರ್ ಕಾರ್ಮಿಕರ ಒಕ್ಕೂಟಕ್ಕೆ ತಲಾ 10 ಲಕ್ಷ ಹಣ ದೇಣಿಗೆ ನೀಡಿದ್ದರು. ಸಹ ಕಲಾವಿದರ ಸಂಘ ನೇರವಾಗಿ ಒಕ್ಕೂಟದ ವಿರುದ್ಧ ಆರೋಪ ಮಾಡ್ತಿದ್ದು, ಸ್ಟಾರ್ ಕಲಾವಿದರು ನೀಡಿದ ನೆರವು ಸರಿಯಾಗಿ ಬಳಕೆಯಾಗಿಲ್ಲವೇ? ಎಂಬ ಪ್ರಶ್ನೆ ಮೂಡುವುದು ಸಹಜ.

    English summary
    Karnataka film and TV Co-artists association to go Hunger strike on June 28 at bengaluru.
    Saturday, June 26, 2021, 14:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X