For Quick Alerts
  ALLOW NOTIFICATIONS  
  For Daily Alerts

  ಬ್ರಹ್ಮಾನಂದಂ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಂಸದೆ ಶೋಭಾ ಕರಂದ್ಲಾಜೆ

  |

  ತೆಲುಗು ಹಾಸ್ಯನಟ ಬ್ರಹ್ಮಾನಂದಂ ಅವರ ಪ್ರತಿಭೆಗೆ ಕರ್ನಾಟಕ ಸಂಸದೆ ಶೋಭಾ ಕರಂದ್ಲಾಜೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವಿಟ್ಟರ್‌ನಲ್ಲಿ ಬ್ರಹ್ಮಾನಂದಂ ಅವರ ಫೋಟೋ ಹಂಚಿಕೊಂಡು ಅವರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.

  ಹಾಸ್ಯ ದಿಗ್ಗಜ ಬ್ರಹ್ಮಾನಂದಂ ಅವರು ಹೊಸ ವರ್ಷದ ಪ್ರಯುಕ್ತ ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅವರಿಗೆ ವಿಶೇಷವಾದ ಉಡುಗೊರೆ ನೀಡಿದ್ದರು. ತಮ್ಮ ಕೈಯಾರೆ ತಾವೇ ಚಿತ್ರಿಸಿದ ಶ್ರೀವೆಂಕಟೇಶ್ವರ ಸ್ವಾಮಿಯ ಫೋಟೋವನ್ನು ಹೊಸ ವರ್ಷದ ಹಿನ್ನೆಲೆ ನೀಡಿದ್ದರು. ಬ್ರಹ್ಮಿ ಕೈಯಾರೆ ಚಿತ್ರಿಸಿದ್ದ ಫೋಟೋ ಕಂಡು ನೆಟ್ಟಿಗರು ಅಭಿಮಾನಿಗಳು ಫಿದಾ ಆಗಿದ್ದರು. ಈಗ ಸಂಸದೆ ಶೋಭಾ ಕರಂದ್ಲಾಜೆ ಸಹ ಮೆಚ್ಚಿಕೊಂಡಿದ್ದಾರೆ. ಮುಂದೆ ಓದಿ...

  ನೀವು ಎಂದಿಗೂ ನಮಗೆ ಸ್ಫೂರ್ತಿ

  ನೀವು ಎಂದಿಗೂ ನಮಗೆ ಸ್ಫೂರ್ತಿ

  ''ತೆಲುಗು ಚಲನಚಿತ್ರ ನಟ ಶ್ರೀ ಬ್ರಹ್ಮಾನಂದಂ ಅವರು ಕೈಯಿಂದ ಮಾಡಿದ ಅದ್ಭುತವಾದ ಭಾವಚಿತ್ರವನ್ನು ನಟ ಅಲ್ಲು ಅರ್ಜುನ್ ಅವರಿಗೆ ಉಡುಗೊರೆಯಾಗಿ ನೀಡಿದರು. ಭಗವಾನ್ ವೆಂಕಟೇಶ್ವರರ ಈ ಅದ್ಭುತ ಭಾವಚಿತ್ರವನ್ನು ರಚಿಸಲು ಅವರಿಗೆ 45 ದಿನಗಳ ಸತತ ಪ್ರಯತ್ನಗಳು ಬೇಕಾದವು. ಹಾಸ್ಯಬ್ರಾಹ್ಮಿ ನಿಮಗೆ ಶುಭಾಶಯಗಳು, ನಮಗೆ ಸ್ಫೂರ್ತಿ ನೀಡಲು ನೀವು ಎಂದಿಗೂ ವಿಫಲರಾಗುವುದಿಲ್ಲ'' ಎಂದು ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದಾರೆ.

  ಸುಂದರ ಉಡುಗೊರೆ ಕೊಟ್ಟ ಬ್ರಹ್ಮಾನಂದಂ: ಭಾವುಕರಾದ ಅಲ್ಲು ಅರ್ಜುನ್ಸುಂದರ ಉಡುಗೊರೆ ಕೊಟ್ಟ ಬ್ರಹ್ಮಾನಂದಂ: ಭಾವುಕರಾದ ಅಲ್ಲು ಅರ್ಜುನ್

  45 ದಿನಗಳ ಪರಿಶ್ರಮದ ಫಲ

  45 ದಿನಗಳ ಪರಿಶ್ರಮದ ಫಲ

  ಬ್ರಹ್ಮಾನಂದಂ ಅವರು ಈ ತಿರುಪತಿ ವೆಂಕಟೇಶ್ವರ ಸ್ವಾಮಿ ಅವರ ಪೆನ್ಸಿಲ್ ಸ್ಕೆಚ್ ಬಿಡಿಸಲು 45 ದಿನಗಳನ್ನು ತೆಗೆದುಕೊಂಡಿದ್ದಾರೆ. ಒಂದೂವರೆ ತಿಂಗಳ ಪರಿಶ್ರಮದ ಪ್ರತಿಫಲವಾಗಿ ಈ ಸುಂದರವಾದ ಚಿತ್ರ ಮೂಡಿದ್ದು ಎಲ್ಲರೂ ಇಷ್ಟಪಟ್ಟಿದ್ದಾರೆ.

  ಬೆಲೆಕಟ್ಟಲಾಗದ ಉಡುಗೊರೆ ಇದೆ

  ಬೆಲೆಕಟ್ಟಲಾಗದ ಉಡುಗೊರೆ ಇದೆ

  ಬ್ರಹ್ಮಾನಂದಂ ಅವರಿಂದ ಪಡೆದ ಉಡುಗೊರೆಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಅಲ್ಲು ಅರ್ಜುನ್, 'ಬ್ರಹ್ಮಿ ಅವರಿಂದ ಪಡೆದ ಬೆಲೆಕಟ್ಟಲಾಗದ ಉಡುಗೊರೆ ಇದೆ. ಬ್ರಹ್ಮಾನಂದಂ ಅವರು ಬರೆದ ಪೆನ್ಸಿಲ್ ಸ್ಕೆಚ್ ಇದು, ಇದು 45 ದಿನಗಳ ಪರಿಶ್ರಮ' ಎಂದು ಬರೆದುಕೊಂಡಿದ್ದಾರೆ.

  ಹಲವು ಸ್ಕೆಚ್ ಬಿಡಿಸಿದ ಬ್ರಹ್ಮಾನಂದ

  ಹಲವು ಸ್ಕೆಚ್ ಬಿಡಿಸಿದ ಬ್ರಹ್ಮಾನಂದ

  ಬ್ರಹ್ಮಾನಂದ ಅವರು ಈ ಹಿಂದೆಯೂ ಹಲವು ಪೆನ್ಸಿಲ್ ಸ್ಕೆಚ್ ಗಳನ್ನು ಬರೆದಿದ್ದಾರೆ. ಕೊರೊನಾ ಸಮಯದಲ್ಲಿ ಭಾರತವು ಹೇಗೆ ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದೆ ಎಂದು ಸೂಚಿಸುವ ಚಿತ್ರ ಬರೆದಿದ್ದರು. ಅದಕ್ಕೂ ಮುಂಚೆ ರಾಮ-ಆಂಜನೇಯನ ಸ್ನೇಹ ಸಾರುವ ಸುಂದರವಾದ ಚಿತ್ರ ಬರೆದಿದ್ದರು. ಈ ಚಿತ್ರ ಸಖತ್ ವೈರಲ್ ಆಗಿತ್ತು.

  English summary
  Karnataka MP Shobha Karandlaje has appreciated Brahmanandam pencil sketch.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X