ಕರ್ನಾಟಕ ನಂದಿ ಫಿಲ್ಮ್ ಅವಾರ್ಡ್ಸ್ ಪ್ರದಾನ: 'ಕಾಂತಾರ' ಚಿತ್ರಕ್ಕೆ ಸಿಂಹಪಾಲು

ತೆಲುಗು ಸಿನಿಮಾಗಳಿಗೆ ಆಂಧ್ರ ಸರ್ಕಾರ ನಂದಿ ಪ್ರಶಸ್ತಿ ಹೆಸರಿನಲ್ಲಿ ರಾಜ್ಯಪ್ರಶಸ್ತಿ ನೀಡುತ್ತಾ ಬರ್ತಿದೆ. ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ಕರ್ನಾಟಕ ನಂದಿ ಚಲನಚಿತ್ರ ಪ್ರಶಸ್ತಿ ಈ ವರ್ಷದಿಂದ ಆರಂಭವಾಗಿದೆ. ಈ ಪ್ರಶಸ್ತಿ ಪ್ರದಾನ ಸಮಾರಂಭ ನಗರದ ಒರಾಯನ್ ಮಾಲ್‌ನಲ್ಲಿ ನಡೀತು.

ಕನ್ನಡದ್ದೇ ಸ್ವಂತ ಪ್ರಶಸ್ತಿ ನೀಡುವ ವೇದಿಕೆ, ಆ ಮೂಲಕ ನಮ್ಮ ಪ್ರತಿಭೆಗಳನ್ನು ನಾವೇ ಗುರುತಿಸಿ ಬೆನ್ನು ತಟ್ಟುವ ಪ್ರಯತ್ನ ಮಾಡಬೇಕಿದೆ. ಇದನ್ನೆಲ್ಲಾ ಮನಗಂಡು, ವಾಣಿಜ್ಯ ಮಂಡಳಿ ನಂದಿ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಕಳೆದ ವರ್ಷ ಬಿಡುಗಡೆಯಾದ ಸಿನಿಮಾಗಳಿಗೆ ಈ ವರ್ಷ ಕರ್ನಾಟಕ ನಂದಿ ಫಿಲ್ಮ್ ಅವಾರ್ಡ್ಸ್ ನೀಡಲಾಗಿದೆ. ಈ ಬಾರಿ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನಟ ರವಿಚಂದ್ರನ್, ರಿಷಬ್ ಶೆಟ್ಟಿ, ಧ್ರುವ ಸರ್ಜಾ ಇನ್ನೂ ಹಲವು ತಾರೆಯರು ಭಾಗಿಯಾಗಿದ್ದಾರೆ.

Karnataka Nandi film awards ceremony 2023 highlights: Complete list of winners

ಹಿರಿಯ ನಟ ಶ್ರೀನಾಥ್, ನಟಿ ಪ್ರೇಮಾ, ವಿನೋದ್ ರಾಜ್, ಅನುಪ್ರಭಾಕರ್, ಉಮಾಶ್ರೀ ಇನ್ನೂ ಹಲವು ನಟ-ನಟಿಯರು ಸಹ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದು ಮೊದಲ ನಂದಿ ಫಿಲಂ ಅವಾರ್ಡ್ ಪ್ರದಾನ ಸಮಾರಂಭವಾಗಿದ್ದು ಯಶಸ್ವಿಯಾಗಿ ನೆರವೇರಿದೆ. ವಿವಿಧ ವಿಭಾಗಗಳಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಣೆ ಮಾಡಲಾಗಿದೆ.

ಕನ್ನಡದಲ್ಲಿ ಕಳೆದ ವರ್ಷ ಬರೋಬ್ಬರಿ 202ಕ್ಕೂ ಅಧಿಕ ಸಿನಿಮಾಗಳು ಬಿಡುಗಡೆಯಾಗಿದ್ದವು. 'KGF'-2, 'ಕಾಂತಾರ', '777 ಚಾರ್ಲಿ' ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿದ್ದವು. ಇನ್ನು ಇತ್ತೀಚೆಗೆ ಸಿಎಂ ಸಿದ್ದರಾಯಯ್ಯ 'ಕರ್ನಾಟಕ ನಂದಿ ಅವಾರ್ಡ್ಸ್' ಲೋಗಾ ಅನಾವರಣ ಮಾಡಿದ್ದರು. ನಟ ಸುದೀಪ್ ಪ್ರಶಸ್ತಿಯನ್ನು ಅನಾವರಣ ಮಾಡಿ ಅರ್ಹರಿಗೆ ಪ್ರಶಸ್ತಿ ಸಿಗಲಿ ಎಂದು ಹಾರೈಸಿದ್ದರು.

ನಟ ರವಿಚಂದ್ರನ್ ಮಾತನಾಡಿ, "ನಂದಿ ಪ್ರಶಸ್ತಿ ನೀಡುತ್ತಿರುವುದು ಬಹಳ ಖುಷಿಯಾಗಿದೆ. ಪ್ರಶಸ್ತಿ ಬಹಳ ಭಾರವಾಗಿದೆ ಅದು ನನಗೆ ಖುಷಿ ಕೊಟ್ಟಿತು, ನನ್ನಂತಹ ಶಿವ ಭಕ್ತನಿಂದ ನಂದಿ ಪ್ರಶಸ್ತಿ ಕೊಡಿಸುತ್ತಿದ್ದೀರ. ಎಲ್ಲರ ಮನೆಗಳಿಗೂ ನಂದಿ ಸೇರುತ್ತದೆ ಎಂಬುದು ನನಗೆ ಖುಷಿ" ಎಂದರು. ಹಿರಿಯ ನಟ ಶ್ರೀನಾಥ್ ಅವರಿಗೆ ಜೀವನಮಾನ ಸಾಧನೆಗೆ ಲೈಫ್ ಟೈಮ್ ಅಚೀವ್‌ಮೆಂಟ್ ನಂದಿ ಅವಾರ್ಡ್ ನೀಡಿ ಗೌರವಿಸಲಾಯಿತು.

Karnataka Nandi film awards ceremony 2023 highlights: Complete list of winners

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಕಟ ಪೂರ್ವ ಅಧ್ಯಕ್ಷರಾದ ಭಾ. ಮಾ. ಹರೀಶ್, ನಿರ್ಮಾಪಕ ನಂದಳಿಕೆ ನಿತ್ಯಾನಂದ ಪ್ರಭು, ಪದ್ಮಾವತಿ ಚಂದ್ರಶೇಖರ್ ಹಾಗೂ ಅನಿತಾ ರೆಡ್ಡಿ ಈ ಪ್ರಶಸ್ತಿ ಸಂಸ್ಥಾಪರಾಗಿದ್ದು, ಭಾ.ಮಾ.ಗಿರೀಶ್, ಹರ್ಷಿತಾ, ನಂದಿತಾ ಹಾಗೂ ಆಶೋಕ್ ಡೈರೆಕ್ಟರ್ಸ್ ಗಳಾಗಿದ್ದಾರೆ.

ಈ ವರ್ಷ ನಂದಿ ಪ್ರಶಸ್ತಿ ಪಡೆದವರ ಪಟ್ಟಿ

1. ಅತ್ಯುತ್ತಮ ಚಿತ್ರ- 777 ಚಾರ್ಲಿ
2. ಅತ್ಯುತ್ತಮ ನಿರ್ದೇಶಕ- ರಿಷಬ್ ಶೆಟ್ಟಿ(ಕಾಂತಾರ)
3. ಅತ್ಯುತ್ತಮ ನಟ- ರಿಷಬ್ ಶೆಟ್ಟಿ (ಕಾಂತಾರ)
4. ಅತ್ಯುತ್ತಮ ನಟಿ-ಸಪ್ತಮಿ ಗೌಡ(ಕಾಂತಾರ)
5. ಬೆಸ್ಟ್ ಬಾಯೋಪಿಕ್ ಅವಾರ್ಡ್: ವಿಜಯಾನಂದ ಫಿಲ್ಮ್
6. ಲೆಜೆಂಡರಿ ಆಕ್ಟ್ರೆಸ್ ಅವಾರ್ಡ್: ಲೀಲಾವತಿ.
7. ಜೀವಮಾನ ಸಾಧನೆ ಪ್ರಶಸ್ತಿ-ನಟ ಶ್ರೀನಾಥ್ ಹಾಗೂ ಭಾರತಿ ವಿಷ್ಣುವರ್ಧನ್.
8. ಅತ್ಯುತ್ತಮ ಡಾಕ್ಯುಮೆಂಟರಿ ಪ್ರಶಸ್ತಿ-ಗಂಧದಗುಡಿ.
9. ಅತ್ಯುತ್ತಮ ಹೊಸ ಮುಖ ನಟ: ವಿಕ್ರಮ್ ರವಿಚಂದ್ರನ್.
10. ಅತ್ಯುತ್ತಮ ಹೊಸ ಮುಖ ನಟಿ: ರೀಷ್ಮಾ ನಾಣಯ್ಯ.
11. ಅತ್ಯುತ್ತಮ ಹಾಸ್ಯ ನಟ ರಂಗಾಯಣ ರಘು.
12. ಅತ್ಯುತ್ತಮ ಪೋಷಕ ನಟ ರೋಲ್-ವೀಣಾ ಸುಂದರ್.
13. ಬೆಸ್ಟ್ ಕ್ರಿಟಿಕ್ಸ್ ಆಕ್ಟರ್- ಸಂಚಾರಿ ವಿಜಯ್.
14. ಅತ್ಯುತ್ತಮ ಸಂಭಾಷಣೆಕಾರ- ಮಾಸ್ತಿ.

More from Filmibeat

English summary
Karnataka Nandi film awards felicitation ceremony;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X