twitter
    For Quick Alerts
    ALLOW NOTIFICATIONS  
    For Daily Alerts

    ಪ್ರಭಾಸ್ ಸಿನಿಮಾ ಬಹಿಷ್ಕರಿಸಲು ಆಗ್ರಹ: ಕನ್ನಡಿಗರ ಅಸಮಾಧಾನಕ್ಕೆ ಕಾರಣವೇನು?

    |

    ಪ್ರಭಾಸ್ ನಟನೆಯ 'ಬಾಹುಬಲಿ' ಕನ್ನಡ ಕಿರುತೆರೆಯಲ್ಲಿ ನಮ್ಮ ಭಾಷೆಯಲ್ಲಿಯೇ ಪ್ರಸಾರಾಗಲಿದೆ ಎಂಬ ಸುದ್ದಿಗೆ ಅನೇಕರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. 'ಬಾಹುಬಲಿ'ಯ ಎರಡೂ ಭಾಗಗಳು ಬಿಡುಗಡೆಯಾಗುವ ಮುನ್ನ ಅನೇಕರು ಕನ್ನಡಕ್ಕೆ ಡಬ್ಬಿಂಗ್ ಆಗಿ ನಮ್ಮ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದ್ದರು. ನಮ್ಮ ರಾಜ್ಯದಲ್ಲಿ ನಮ್ಮದೇ ಭಾಷೆಯಲ್ಲಿ ಸಿನಿಮಾ ನೋಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದರು.

    Recommended Video

    RockLine Venkatesh Hospitalized,ಆಸ್ಪತ್ರೆಗೆ ದಾಖಲಾದ ರಾಕ್ ಲೈನ್ ವೆಂಕಟೇಶ್ | Filmibeat Kannada

    ಆದರೆ ಅವರ ಹೋರಾಟ ಸಫಲವಾಗಿರಲಿಲ್ಲ. ಕರ್ನಾಟಕದ ಚಿತ್ರಮಂದಿರಗಳಲ್ಲಿ ತೆಲುಗು ಮತ್ತು ತಮಿಳು ಭಾಷೆಗಳಲ್ಲಿ 'ಬಾಹುಬಲಿ' ಬಿಡುಗಡೆಯಾಗಿತ್ತು. ಕನ್ನಡದ ಚಿತ್ರಗಳು ಪ್ರದರ್ಶನವಾಗಬೇಕಿದ್ದ ಕೇಂದ್ರಗಳಲ್ಲಿ ತೆಲುಗು ಭಾಷೆಯಲ್ಲಿಯೇ ಸಿನಿಮಾ ಪ್ರದರ್ಶನವಾಗಿತ್ತು. ಈಗ ಸತತ ಪ್ರಯತ್ನದ ಬಳಿಕ 'ಬಾಹುಬಲಿ'ಯ ಮೊದಲ ಭಾಗ ಕನ್ನಡಕ್ಕೆ ಡಬ್ ಆಗಿದ್ದು, ಶೀಘ್ರದಲ್ಲಿಯೇ ಕಿರುತೆರೆಯಲ್ಲಿ ಪ್ರಸಾರವಾಗಲಿದೆ ಎಂಬ ಮಾಹಿತಿ ಬಂದಿದೆ. ಆ ಸಂತಸದ ಸಂಗತಿ ಮಧ್ಯೆಯೇ ಪ್ರಭಾಸ್ ವಿರುದ್ಧ ಡಬ್ಬಿಂಗ್ ಪರ ಹೋರಾಟಗಾರರಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಮುಂದೆ ಓದಿ...

    ಅಭಿಮಾನಿಗಳಿಗೆ ಸಂತಸದ ಸುದ್ದಿ ನೀಡಿದ ಪ್ರಭಾಸ್: ಜುಲೈ 10ರಂದು ಫಸ್ಟ್ ಲುಕ್ ರಿಲೀಸ್ಅಭಿಮಾನಿಗಳಿಗೆ ಸಂತಸದ ಸುದ್ದಿ ನೀಡಿದ ಪ್ರಭಾಸ್: ಜುಲೈ 10ರಂದು ಫಸ್ಟ್ ಲುಕ್ ರಿಲೀಸ್

    ಫಸ್ಟ್ ಲುಕ್ ಬಿಡುಗಡೆಗೆ ಸಿದ್ಧತೆ

    ಫಸ್ಟ್ ಲುಕ್ ಬಿಡುಗಡೆಗೆ ಸಿದ್ಧತೆ

    ರಾಧಾ ಕೃಷ್ಣ ಕುಮಾರ್ ನಿರ್ದೇಶನದಲ್ಲಿ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ನಟಿಸುತ್ತಿರುವ ಹೊಸ ಚಿತ್ರದ ಫಸ್ಟ್ ಲುಕ್ ಮತ್ತು ಶೀರ್ಷಿಕೆ ಜುಲೈ 10ರಂದು ಅನಾವರಣಗೊಳ್ಳುತ್ತಿದೆ. ಸದ್ಯಕ್ಕೆ 'ಪ್ರಭಾಸ್ 20' ಎಂಬ ತಾತ್ಕಾಲಿಕ ಶೀರ್ಷಿಕೆಯಲ್ಲಿ ಸಿದ್ಧವಾಗುತ್ತಿರುವ ಚಿತ್ರ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ.

    ಸಾಹೋ ವೇಳೆ ಭರವಸೆ ನೀಡಿದ್ದ ಪ್ರಭಾಸ್

    ಸಾಹೋ ವೇಳೆ ಭರವಸೆ ನೀಡಿದ್ದ ಪ್ರಭಾಸ್

    ಪ್ರಭಾಸ್ ನಟನೆಯ ಹಿಂದಿನ ಚಿತ್ರ 'ಸಾಹೋ' ಕೂಡ ಕನ್ನಡಕ್ಕೆ ಡಬ್ ಆಗಿರಲಿಲ್ಲ. ಆಡಿಯೋ ಬಿಡುಗಡೆ ಸಂದರ್ಭದಲ್ಲಿ ಅದರ ಕುರಿತು ಪ್ರಭಾಸ್ ಅವರನ್ನು ಪ್ರಶ್ನಿಸಲಾಗಿತ್ತು. 'ನಿಮಗೆ ಕನ್ನಡದಲ್ಲಿ ಬಹಳ ಅಭಿಮಾನಿಗಳಿದ್ದಾರೆ. ನಿಮ್ಮ ಸಿನಿಮಾ ಅಲ್ಲಿ ಚೆನ್ನಾಗಿ ಓಡುತ್ತದೆ. ಆದರೆ ಈ ಚಿತ್ರ ಏಕೆ ಕನ್ನಡದಲ್ಲಿ ಬಿಡುಗಡೆಯಾಗುತ್ತಿಲ್ಲ?' ಎಂದು ಪ್ರಶ್ನಿಸಿದ್ದರು. ಅದಕ್ಕೆ ಪ್ರಭಾಸ್, 'ಕನ್ನಡದಲ್ಲಿ ಇತ್ತೀಚೆಗಷ್ಟೇ ಡಬ್ಬಿಂಗ್ ಶುರುವಾಗಿದೆ. ಮುಂದಿನ ಸಿನಿಮಾದಿಂದ ಕನ್ನಡಕ್ಕೆ ಡಬ್ ಮಾಡುತ್ತೇವೆ' ಎಂಬ ಭರವಸೆ ನೀಡಿದ್ದರು. ಆದರೆ ಅದೀಗ ಹುಸಿಯಾಗಿದೆ.

    ಕನ್ನಡದಲ್ಲಿಯೇ ಪ್ರಸಾರವಾಗಲಿದೆ ಸೂಪರ್ ಹಿಟ್ ಚಿತ್ರ 'ಬಾಹುಬಲಿ'
    ಕನ್ನಡದಲ್ಲಿಲ್ಲ 'ಪ್ರಭಾಸ್20'

    ಕನ್ನಡದಲ್ಲಿಲ್ಲ 'ಪ್ರಭಾಸ್20'

    ಪ್ರಭಾಸ್ ವಿರುದ್ಧ ಕನ್ನಡಿಗರಲ್ಲಿ ಆಕ್ರೋಶ ಉಂಟಾಗಲು ಇದೇ ಕಾರಣ. ಮುಂದಿನ ಚಿತ್ರದಲ್ಲಿ ಕನ್ನಡ ವರ್ಷನ್ ಇರಲಿದೆ ಎಂದು ಹೇಳಿದ್ದ ಅವರು 'ಪ್ರಭಾಸ್20' ಚಿತ್ರವನ್ನು ಕನ್ನಡದಲ್ಲಿ ತೆರೆಗೆ ತರುತ್ತಿಲ್ಲ. ತೆಲುಗು ಚಿತ್ರಗಳಿಗೆ ಕನ್ನಡದ ಚಿತ್ರಮಂದಿರಗಳು ಯಾವಾಗಲೂ ಸುಲಭವಾಗಿ ದಕ್ಕುತ್ತವೆ. ಅದಕ್ಕಾಗಿ ಕನ್ನಡದ ಅನೇಕ ಚಿತ್ರಗಳು ಬಲಿಯಾಗುತ್ತವೆ. ಹೀಗಾಗಿ ಈ ಚಿತ್ರಮಂದಿರಗಳಲ್ಲಿ ತೆಲುಗಿನ ಬದಲು ಕನ್ನಡದಲ್ಲಿಯೇ ಡಬ್ ಆಗಿ ಚಿತ್ರಗಳು ಪ್ರದರ್ಶನಗೊಳ್ಳಲಿ ಎನ್ನುವುದು ಡಬ್ಬಿಂಗ್ ಪರವಾದಿಗಳ ಬೇಡಿಕೆ. ಆದರೆ ಈ ಬೇಡಿಕೆಗೆ ಈ ಬಾರಿಯೂ ಪ್ರಭಾಸ್ ಕಿಮ್ಮತ್ತು ನೀಡಿಲ್ಲ.

    ಬಾಯ್ಕಾಟ್ ಪ್ರಭಾಸ್

    ಬಾಯ್ಕಾಟ್ ಪ್ರಭಾಸ್

    ಇದರಿಂದ ಕೋಪಗೊಂಡಿರುವ ಅನೇಕರು ಪ್ರಭಾಸ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ. 'ಬಾಯ್ಕಾಟ್ ಪ್ರಭಾಸ್ 20' ಎಂದು ಅಭಿಯಾನ ಆರಂಭಿಸಿದ್ದಾರೆ. ಕನ್ನಡ ಭಾಷೆಯಡೆಗೆ ನಿರ್ಲಕ್ಷ್ಯ ಮಾಡುತ್ತಿರುವ ಪ್ರಭಾಸ್‌ಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದ್ದಾರೆ.

    ಕನ್ನಡದ ಬಗ್ಗೆ ದ್ವೇಷವೇಕೆ?

    ಕನ್ನಡದ ಬಗ್ಗೆ ದ್ವೇಷವೇಕೆ?

    ತೆಲುಗು ಚಿತ್ರಗಳಿಗೆ ತೆಲಂಗಾಣ ಮತ್ತು ಆಂಧ್ರಪ್ರದೇಶ ಬಿಟ್ಟರೆ ಅತಿ ಹೆಚ್ಚು ಅಭಿಮಾನಿಗಳು ಇರುವುದು ಕರ್ನಾಟಕದಲ್ಲಿ. ಅಲ್ಲದೆ ಚಿತ್ರಮಂದಿರಗಳೂ ಸಿಗುತ್ತವೆ. ಅತಿ ಹೆಚ್ಚಿನ ಗಳಿಕೆಯೂ ಆಗುತ್ತದೆ. ಅವರಿಗೆ ಬಿಜಿನೆಸ್ ಮಾಡಲು ಕರ್ನಾಟಕ ಬೇಕು. ಆದರೆ ಕನ್ನಡ ಬೇಡ. ಈ ಚಿತ್ರ ಕನ್ನಡದಲ್ಲಿ ಏಕೆ ಬಿಡುಗಡೆಯಾಗುತ್ತಿಲ್ಲ? ಕನ್ನಡ ಭಾಷೆಯೆಡೆಗೆ ಪ್ರಭಾಸ್ ಏಕೆ ದ್ವೇಷ ಕಾರುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

    ಕರ್ನಾಟಕದಲ್ಲಿ ಬಿಡುಗಡೆಯೇ ಬೇಡ

    ಕರ್ನಾಟಕದಲ್ಲಿ ಬಿಡುಗಡೆಯೇ ಬೇಡ

    ಕೆಲವರು ಇದಕ್ಕಾಗಿ ಸಹಿ ಸಂಗ್ರಹ ಅಭಿಯಾನವನ್ನೂ ಆರಂಭಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಕನ್ನಡ ಹೊರತುಪಡಿಸಿ ಬೇರೆ ಎಲ್ಲ ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ. ಇದು ಕನ್ನಡವನ್ನು ನಿರ್ಲಕ್ಷಿಸಿರುವ ಸಾಕ್ಷಿ. ಇಷ್ಟೊಂದು ಅಭಿಮಾನಿಗಳಿದ್ದರೂ ಪ್ರಭಾಸ್ ಕನ್ನಡದಲ್ಲಿ ಸಿನಿಮಾ ಮಾಡದೆ ಇರುವುದು ಸರಿಯಲ್ಲ. ಕನ್ನಡಕ್ಕೆ ಡಬ್ ಆಗದೆ ಹೋದರೆ ಆ ಚಿತ್ರ ಕರ್ನಾಟಕದಲ್ಲಿ ತೆರೆ ಕಾಣುವುದು ಸಹ ಬೇಡ ಎಂದು ಹೇಳಿದ್ದಾರೆ.

    English summary
    Boycott Prabhas 20 is trending on Twitter as people urging to release Kannada dubbing version of Prabhas 20 movie.
    Thursday, July 9, 2020, 13:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X