For Quick Alerts
  ALLOW NOTIFICATIONS  
  For Daily Alerts

  ಜನಾಭಿಪ್ರಾಯ: ಕರ್ನಾಟಕದಲ್ಲಿ 'ಕಾಲಾ' ರಿಲೀಸ್ ಆಗ್ಬೇಕಾ-ಬೇಡವಾ.?

  By Bharath Kumar
  |
  ಕಾಲ ಸಿನಿಮಾ ದೇಶದಲ್ಲೇ ರಿಲೀಸ್ ಆಗೋದು ಡೌಟ್ ..!! | Filmibeat kannada

  ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಕಾಲಾ' ಚಿತ್ರವನ್ನ ಕರ್ನಾಟಕದಲ್ಲಿ ಬಿಡುಗಡೆ ಮಾಡುವುದಿಲ್ಲ ಎಂದು ಕನ್ನಡ ಪರ ಸಂಘಟನೆಗಳು ಎಚ್ಚರಿಕೆ ನೀಡಿವೆ.

  ಈ ಬಗ್ಗೆ ಜನರು ಏನು ಹೇಳ್ತಾರೆ, ಜನರ ಅಭಿಪ್ರಾಯವೇನು ಎಂಬುದನ್ನ ತಿಳಿಯಲು ಫಿಲ್ಮಿಬೀಟ್ ಕನ್ನಡ ತಂಡವೂ ಜನಾಭಿಮತವನ್ನ ಸಂಗ್ರಹಿಸಿದೆ. ಬೆಂಗಳೂರಿನಲ್ಲಿ ಜನರ ಬಳಿ 'ಕಾಲಾ' ಚಿತ್ರವನ್ನ ರಿಲೀಸ್ ಮಾಡ್ಬೇಕಾ ಅಥವಾ ಬೇಡವಾ ಎಂಬ ಪ್ರಶ್ನೆ ಕೇಳಿ ಉತ್ತರ ಪಡೆದುಕೊಂಡಿದೆ.

  'ಕಾಲಾ' ವಿವಾದ: ಅವರು ಮಾಡಿದ್ರೆ ಸರಿ, ನಾವ್ ಮಾಡಿದ್ರೆ ತಪ್ಪಾ.? 'ಕಾಲಾ' ವಿವಾದ: ಅವರು ಮಾಡಿದ್ರೆ ಸರಿ, ನಾವ್ ಮಾಡಿದ್ರೆ ತಪ್ಪಾ.?

  ಈ ಮೂಲಕ ನಮಗೆ ತಿಳಿದಿದ್ದೇನಂದರೇ ಎಷ್ಟು ಜನ 'ಕಾಲಾ' ಚಿತ್ರವನ್ನ ನಿ‍ಷೇಧ ಮಾಡಲು ನಿರ್ಧರಿಸಿದ್ದಾರೋ ಅಷ್ಟೇ ಜನರು ಸಿನಿಮಾ ರಿಲೀಸ್ ಮಾಡಲಿ ಎನ್ನುತ್ತಿದ್ದಾರೆ. ಹಾಗಿದ್ರೆ, 'ಕಾಲಾ' ಚಿತ್ರದ ಬಗ್ಗೆ ಜನಮತ ಏನಿದೆ ಮುಂದೆ ನೋಡೋಣ.

  ರಜನಿಕಾಂತ್ ನಮ್ಮ ಪರವಾಗಿಬೇಕಿತ್ತು

  ರಜನಿಕಾಂತ್ ನಮ್ಮ ಪರವಾಗಿಬೇಕಿತ್ತು

  ''ಸಿನಿಮಾನ ಕರ್ನಾಟಕದಲ್ಲಿ ರಿಲೀಸ್ ಮಾಡ್ಬೇಕಾ ಬೇಡವಾ ಅನ್ನೋದು 50 ಪರ್ಸೆಂಟ್ ಡೌಟ್ ನಲ್ಲಿದೆ. ಯಾಕಂದ್ರೆ, ಅವರ ಕನ್ನಡಿಗರಾಗಿ ಕರ್ನಾಟಕದ ಪರವಾಗಿ ಮಾತನಾಡಬೇಕಿತ್ತು. ಒಂದು ವೇಳೆ ರಜನಿಕಾಂತ್ ನಮ್ಮ ಪರವಾಗಿ ಮಾತನಾಡಿದ್ರೆ ಪಕ್ಕಾ ರಿಲೀಸ್ ಆಗಲು ಅವಕಾಶ ಸಿಗ್ತಿತ್ತು''.

  'ಕಾಲಾ' ವಿವಾದ ಬಗ್ಗೆ ಪ್ರಕಾಶ್ ರೈ ಕೊಟ್ಟ ಹೇಳಿಕೆ 'ಕಾಲಾ' ವಿವಾದ ಬಗ್ಗೆ ಪ್ರಕಾಶ್ ರೈ ಕೊಟ್ಟ ಹೇಳಿಕೆ

  ಸಿನಿಮಾ ರಿಲೀಸ್ ಮಾಡಲಿ

  ಸಿನಿಮಾ ರಿಲೀಸ್ ಮಾಡಲಿ

  ''ಕಾಲಾ ಕರ್ನಾಟಕದಲ್ಲಿ ರಿಲೀಸ್ ಆಗಬೇಕು. ಸಿನಿಮಾ ಬೇರೆ ರಾಜಕೀಯ ಬೇರೆ. ರಾಜಕಾರಣಿಗಳು ಯಾವ ಸಮಸ್ಯೆಯನ್ನ ನಿವಾರಣೆ ಮಾಡಲ್ಲ. ಕಾಲಾ ರಿಲೀಸ್ ಆಗಲ್ಲ ಅಂದ ಮಾತ್ರಕ್ಕೆ ರಜನಿಕಾಂತ್ ಕರ್ನಾಟಕಕ್ಕೆ ಬರದೇ ಇರಲ್ಲ, ಅವರ ಅಭಿಮಾನಿಗಳ ಸಂಖ್ಯೆ ಇಲ್ಲಿ ಕಮ್ಮಿಯಾಗಲ್ಲ. ನೀರು ಅವರಿಗೂ ಬೇಕು, ನಮಗೂ ಬೇಕು. ಅದು ಮಾತುಕತೆಯ ಮೂಲಕ ಬಗೆಹರಿಸಕೊಳ್ಳಬೇಕು''.

  ಸಿನಿಮಾ ನಟರಾಗಿದ್ರೆ ಉತ್ತಮ

  ಸಿನಿಮಾ ನಟರಾಗಿದ್ರೆ ಉತ್ತಮ

  ''ಸಿನಿಮಾ ನಟರು ಬರಿ ಸಿನಿಮಾ ಕಲಾವಿದರಾಗಿದ್ರೆ ಉತ್ತಮ. ಸುಮ್ಮನೆ ರಾಜಕೀಯಕ್ಕೆ ಬಂದು ಕಾವೇರಿ ನೀರಿನ ವಿಚಾರದ ಬಗ್ಗೆ ಮಾತನಾಡಿ, ಅದು ಬೇಕು ಇದು ಬೇಕು ಅಂದ್ರೆ ಅದು ತಪ್ಪು''.

  ಮತ್ತೊಂದು ವಿವಾದದಲ್ಲಿ 'ಕಾಲಾ': ವರ್ಲ್ಡ್ ವೈಡ್ ಬಿಡುಗಡೆಗೆ ಸಂಕಷ್ಟ.! ಮತ್ತೊಂದು ವಿವಾದದಲ್ಲಿ 'ಕಾಲಾ': ವರ್ಲ್ಡ್ ವೈಡ್ ಬಿಡುಗಡೆಗೆ ಸಂಕಷ್ಟ.!

  ಸಿನಿಮಾ ಬೇರೆ, ಕಾವೇರಿ ಬೇರೆ

  ಸಿನಿಮಾ ಬೇರೆ, ಕಾವೇರಿ ಬೇರೆ

  ''ಕಾವೇರಿ ಸಮಸ್ಯೆ ಬೇರೆ, ಸಿನಿಮಾ ವಿಭಾಗವೇ ಬೇರೆ. ಯಾಕೆ ಎರಡನ್ನ ಒಟ್ಟಿಗೆ ತೂಕ ಹಾಕಬೇಕು. ಸಿನಿಮಾವನ್ನ ರಿಲೀಸ್ ಮಾಡಲಿ''.

  ಇದರಿಂದ ರಜನಿಗೆ ನಷ್ಟವಿಲ್ಲ

  ಇದರಿಂದ ರಜನಿಗೆ ನಷ್ಟವಿಲ್ಲ

  ''ರಜನಿಕಾಂತ್ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗಬೇಕು. ಸಿನಿಮಾ ಬೇರೆ, ರಾಜಕೀಯ ಬೇರೆ. ರಜನಿ ಒಳ್ಳೆಯ ನಟ, ಅದು ಒಳ್ಳೆಯ ಸಿನಿಮಾ. ಅವರ ಸಿನಿಮಾ ನೋಡುವ ಅಭಿಮಾನಿಗಳು ಇಲ್ಲಿ ತುಂಬ ಜನ ಇದ್ದಾರೆ''.

  ಜನರು ಏನಂದ್ರು ಎಂಬುದನ್ನ ವಿಡಿಯೋದಲ್ಲಿ ನೋಡಿ

  English summary
  Karnataka people opinion on Superstar Rajinikanth's Tamil Kaala movie controversy. the movie will release on june 7th, but, movie banned in karnataka for cauvery issue.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X