'ಸೀತಾರಾಮ ಕಲ್ಯಾಣ' ಮೆಚ್ಚಿದ ರಾಜಕೀಯ ನಾಯಕರು
Recommended Video

Seetharama Kalyana : ರಾಜಕೀಯ ಮರೆತು 'ಸೀತಾರಾಮ ಕಲ್ಯಾಣ'ದಲ್ಲಿ ಒಂದಾದ ನಾಯಕರು..! | Oneindia Kannada
ಮುಖ್ಯಮಂತ್ರಿ ಕುಮಾರಸ್ವಾಮಿ ರವರ ಪುತ್ರ ನಿಖಿಲ್ ಕುಮಾರ್ ಅಭಿನಯದ 'ಸೀತಾರಾಮ ಕಲ್ಯಾಣ' ಚಿತ್ರ ಇಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಚಿತ್ರದ ಮೊದಲ ಪ್ರದರ್ಶನ ಶುರುವಾಗಲಿದೆ.
ನಿನ್ನೆ ಸಿನಿಮಾದ ವಿಶೇಷ ಪ್ರದರ್ಶನವನ್ನು ರಾಜಕೀಯ ನಾಯಕರಿಗಾಗಿ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಜೊತೆಗೆ ಉಪ ಮುಖ್ಯಮಂತ್ರಿ ಪರಮೇಶ್ವರ್, ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಈಶ್ವರಪ್ಪ, ಸಚಿವರಾದ ಆರ್.ವಿ. ದೇಶಪಾಂಡೆ, ಕೆ.ಜೆ. ಜಾರ್ಜ್, ಜಮೀರ್ ಅಹಮದ್ ಖಾನ್ ಮುಂತಾದವರು ಭಾಗವಹಿಸಿದ್ದರು.

ನಗರದ ಓರಿಯಾನ್ ಮಾಲ್ ನಲ್ಲಿ ನಿನ್ನೆ ಸಂಜೆ ವಿಶೇಷ ಪ್ರದರ್ಶನದಲ್ಲಿ ಸೀತಾರಾಮರನ್ನು ನೋಡಿ ರಾಜಕೀಯ ನಾಯಕರು ಇಷ್ಟ ಪಟ್ಟರು. ನಿಖಿಲ್‌ನಟನೆಯನ್ನ ಹೋಗಳಿದರು.

ಅಂದಹಾಗೆ, ಇಂದು 'ಸೀತಾರಾಮ ಕಲ್ಯಾಣ' ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ರಚಿತಾ ರಾಮ್ ಸಿನಿಮಾದ ನಾಯಕಿಯಾಗಿದ್ದಾರೆ. ಎ ಹರ್ಷ ಚಿತ್ರದ ನಿರ್ದೇಶನ ಮಾಡಿದ್ದು, ಇದೊಂದು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾವಾಗಿದೆ.
More from Filmibeat
English summary
Karnataka politicians watched C M Kumaraswamy son Nikhil Kumar's 'Seetharama Kalyana' movie.


Click it and Unblock the Notifications











