twitter
    For Quick Alerts
    ALLOW NOTIFICATIONS  
    For Daily Alerts

    ಡಬ್ಬಿಂಗ್ ಸಿನಿಮಾವನ್ನು ಒಪ್ಪಿಕೊಂಡ ಕರವೇ ಉಪಾಧ್ಯಕ್ಷ

    By Naveen
    |

    ಡಬ್ಬಿಂಗ್ ಎನ್ನುವುದು ಕನ್ನಡದಲ್ಲಿ ಆಗಾಗ ಸುದ್ದಿ ಆಗುತ್ತಲೇ ಇರುತ್ತದೆ. ಈಗ ಮತ್ತೊಂದು ಡಬ್ಬಿಂಗ್ ಸಿನಿಮಾ ಬಿಡುಗಡೆಯಾಗುತ್ತಿದೆ. 'ಕಮಾಂಡೋ' ಚಿತ್ರ ಇದೇ ತಿಂಗಳ 31 ರಂದು ರಿಲೀಸ್ ಆಗುತ್ತಿದೆ.

    ಇದೀಗ ಡಬ್ಬಿಂಗ್ ಸಿನಿಮಾಗೆ ಕರ್ನಾಟಕ ರಕ್ಷಣಾ ವೇದಿಕೆಯ ಬೆಂಬಲ ಸಿಕ್ಕಿದೆ. ಕರವೇ ಉಪಾಧ್ಯಕ್ಷ ಅಂಜನ ಗೌಡ 'ಕಮಾಂಡೋ' ಚಿತ್ರಕ್ಕೆ ತಮ್ಮ ಸಾಥ್ ನೀಡಿದ್ದಾರೆ. 'ಕಮಾಂಡೋ' ಸಿನಿಮಾ ತಮಿಳಿನ ನಟ ಅಜಿತ್ ಅಭಿನಯದ 'ವಿವೇಗಂ' ಸಿನಿಮಾದ ಕನ್ನಡ ರೂಪಾವಾಗಿದೆ.

    ಕನ್ನಡದಲ್ಲಿ 'ಕಮಾಂಡೋ' ಆಗಿ ಬರ್ತಿದೆ ತಮಿಳಿನ 'ವಿವೇಗಂ'.! ಕನ್ನಡದಲ್ಲಿ 'ಕಮಾಂಡೋ' ಆಗಿ ಬರ್ತಿದೆ ತಮಿಳಿನ 'ವಿವೇಗಂ'.!

    ಅಂದಹಾಗೆ, ಇತ್ತೀಚಿಗಷ್ಟೆ 'ಕಮಾಂಡೋ' ಸಿನಿಮಾದ ಆಡಿಯೋ ಬಿಡುಗಡೆಯ ಕಾರ್ಯಕ್ರಮ ನಡೆಯಿತು. ಈ ವೇಳೆ ಈ ಚಿತ್ರಕ್ಕೆ ತಮ್ಮ ಸಮ್ಮತಿ ಇದೆ ಎಂದು ಕರವೇ ಉಪಾಧ್ಯಕ್ಷ ಅಂಜನ ಗೌಡ ತಿಳಿಸಿದ್ದಾರೆ. ಮುಂದೆ ಓದಿ....

    ಪರಭಾಷೆಯ ಸಿನಿಮಾಗಳು ಡಬ್ಬಿಂಗ್ ಆಗಿ ಬರಲಿ

    ಪರಭಾಷೆಯ ಸಿನಿಮಾಗಳು ಡಬ್ಬಿಂಗ್ ಆಗಿ ಬರಲಿ

    ''ಕನ್ನಡ ಭಾಷೆ ಉಳಿಯಬೇಕು ಎಂಬ ದೃಷ್ಟಿಯಿಂದ ಈ ಸಿನಿಮಾವನ್ನು ಒಪ್ಪಿಕೊಂಡಿದ್ದೇವೆ. ಡಬ್ಬಿಂಗ್ ಸಿನಿಮಾದಿಂದ ಕನ್ನಡ ಉಳಿಯುತ್ತದೆ. ಇವತ್ತು ಕರ್ನಾಟಕದಲ್ಲಿ ತೆಲುಗು, ತಮಿಳು, ಹಿಂದಿ ಸಿನಿಮಾಗಳನ್ನು ಇನ್ನೂರು ಮುನ್ನೂರು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಾರೆ. ಕನ್ನಡದ ಸಣ್ಣ ಚಿತ್ರಗಳನ್ನು ರಿಲೀಸ್ ಮಾಡುವುದಕ್ಕೆ ಚಿತ್ರಮಂದಿರಗಳು ಸಿಗುತ್ತಿಲ್ಲ. ಪರಭಾಷೆಯ ಸಿನಿಮಾಗಳು ಬರಲಿ. ಆದರೆ ಅವು ಡಬ್ಬಿಂಗ್ ಆಗಿ ಬರಲಿ.'' - ಅಂಜನ ಗೌಡ, ಕರವೇ ಉಪಾಧ್ಯಕ್ಷ.

    ಕೆಲ ಕನ್ನಡಿಗರಿಗೆ ಕೆಲಸ ಸಿಗುವುದಿಲ್ಲ

    ಕೆಲ ಕನ್ನಡಿಗರಿಗೆ ಕೆಲಸ ಸಿಗುವುದಿಲ್ಲ

    ''ಡಬ್ಬಿಂಗ್ ನಿಂದ ಸಿನಿಮಾವನ್ನು ನಂಬಿಕೊಂಡ ಕೆಲ ಕನ್ನಡಿಗರಿಗೆ ಕೆಲಸ ಸಿಗುವುದಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ಆ ರೀತಿ ಶೇಕಡ ಹತ್ತು, ಹದಿನೈದು ರಷ್ಟು ಜನರಿಗೆ ಆಗಬಹುದು. ಎಷ್ಟೊ ಕಂಪನಿಗಳು ಮುಚ್ಚಿದಾಗಲೂ ಕನ್ನಡಿಗರು ಕೆಲಸ ಕಳೆದುಕೊಂಡಿದ್ದಾರೆ. ಹಾಗಾಗಿ ಕೆಲಸ ಸಿಗಲಿಲ್ಲ ಅಂದರೆ ಬೇರೆ ಕೆಲಸ ನೋಡಿಕೊಳ್ಳಲು ಅವಕಾಶ ಇವೆ.'' - ಅಂಜನ ಗೌಡ, ಕರವೇ ಉಪಾಧ್ಯಕ್ಷ.

    'ಕಮಾಂಡೊ' ಹಾಡುಗಳು ಬರ್ತಿವೆ, ಕೇಳಲು ಸಿದ್ಧರಾಗಿ 'ಕಮಾಂಡೊ' ಹಾಡುಗಳು ಬರ್ತಿವೆ, ಕೇಳಲು ಸಿದ್ಧರಾಗಿ

    ಡಬ್ಬಿಂಗ್ ಗಿಂತ ರಿಮೇಕ್ ಮಾಡುವುದು ಅನ್ಯಾಯ

    ಡಬ್ಬಿಂಗ್ ಗಿಂತ ರಿಮೇಕ್ ಮಾಡುವುದು ಅನ್ಯಾಯ

    ''ಡಬ್ಬಿಂಗ್ ಬಂದರೆ ಎಲ್ಲರಿಗೂ ಕೆಲಸ ಹೋಗುತ್ತದೆ ಎಂದು ಅಲ್ಲ. ಡಬ್ಬಿಂಗ್ ನಿಂದ ಡಬ್ ಮಾಡುವವರಿಗೆ, ಹಾಡು ಹಾಡುವವರಿಗೆ ಸೇರಿದಂತೆ ಅನೇಕರಿಗೆ ಕೆಲಸ ಸಿಗುತ್ತದೆ. ಡಬ್ಬಿಂಗ್ ಗಿಂತ ರಿಮೇಕ್ ಮಾಡುವುದು ಅನ್ಯಾಯ. ಅದು ಕನ್ನಡ ವಿರೋಧಿ ತನ. ಎಷ್ಟೋ ಜನ ಸಾಹಿತಿಗಳ ಕಥೆಗಳು ಕನ್ನಡದಲ್ಲಿ ಇವೆ. ಅದನ್ನು ಬಿಟ್ಟು ರಿಮೇಕ್ ಯಾಕೆ ಮಾಡಬೇಕು.'' - ಅಂಜನ ಗೌಡ, ಕರವೇ ಉಪಾಧ್ಯಕ್ಷ.

    ಡಬ್ಬಿಂಗ್ ಬಂದರೂ ಸಿನಿಮಾಗಳು ಓಡುತ್ತವೆ

    ಡಬ್ಬಿಂಗ್ ಬಂದರೂ ಸಿನಿಮಾಗಳು ಓಡುತ್ತವೆ

    ''ದೊಡ್ಡ ದೊಡ್ಡ ನಟರ ಸಿನಿಮಾವನ್ನು ಕನ್ನಡಿಗರು ಯಾವತ್ತು ತಿರಸ್ಕಾರ ಮಾಡಿಲ್ಲ. ಹಾಗಾಗಿ ಡಬ್ಬಿಂಗ್ ಬಂದರೂ ಅವರ ಸಿನಿಮಾಗಳು ಓಡುತ್ತವೆ. ತಮಿಳುನಾಡಿನಲ್ಲಿ ಡಬ್ಬಿಂಗ್ ಇದೆ. ಹಾಗಿದ್ದರೂ ಅಲ್ಲಿ ಸಿನಿಮಾ ಓಡುತ್ತಿವೆ ತಾನೇ. ಮಲೆಯಾಳಂ ಸಿನಿಮಾಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದೆ ಎಂದರೆ ಅದಕ್ಕೆ ಒಂದು ಕಾರಣ ಡಬ್ಬಿಂಗ್.'' - ಅಂಜನ ಗೌಡ, ಕರವೇ ಉಪಾಧ್ಯಕ್ಷ.

    ಕನ್ನಡದ ಸಿನಿಮಾಗಳು ಡಬ್ ಆಗಿವೆ

    ಕನ್ನಡದ ಸಿನಿಮಾಗಳು ಡಬ್ ಆಗಿವೆ

    ''ಕನ್ನಡದ ಸಿನಿಮಾಗಳು ಬೇರೆ ಭಾಷೆಗೆ ಡಬ್ ಆಗಿವೆ. ಸ್ಟಾರ್ ನಟರ ಸಿನಿಮಾಗಳು ಹಿಂದಿಗೆ ಡಬ್ ಆಗಿದ್ದು, ಲಕ್ಷಾಂತರ ಜನ ಅದನ್ನು ನೋಡಿದ್ದಾರೆ. ನಮ್ಮ ಸಿನಿಮಾಗಳು ಮಾತ್ರ ಬೇರೆ ಭಾಷೆಗೆ ಡಬ್ ಆಗಬೇಕು, ಬೇರೆ ಭಾಷೆ ಚಿತ್ರ ನಮ್ಮ ಭಾಷೆಗೆ ಡಬ್ ಆಗಬಾರದು ಎನ್ನುವುದು ಸರಿಯೇ.'' - ಅಂಜನ ಗೌಡ, ಕರವೇ ಉಪಾಧ್ಯಕ್ಷ.

    ದುಡ್ಡು ತೆಗೆದುಕೊಂಡಿಲ್ಲ

    ದುಡ್ಡು ತೆಗೆದುಕೊಂಡಿಲ್ಲ

    ''ನಾವು ಡಬ್ಬಿಂಗ್ ಸಿನಿಮಾದ ಪರ ಮಾತನಾಡುತ್ತಿರುವುದಕ್ಕೆ ಯಾವುದೇ ದುಡ್ಡು ಪಡೆದಿಲ್ಲ. ಕನ್ನಡಕ್ಕೆ ಡಬ್ಬಿಂಗ್ ಬೇಕಾಗಿದೆ. ಹಣ ಪಡೆಯದೆ ಡಬ್ಬಿಂಗ್ ಅನ್ನು ಒಪ್ಪಿಕೊಂಡಿದ್ದೇವೆ. ಡಬ್ಬಿಂಗ್ ನಿಂದ ಕನ್ನಡ ಉಳಿಯುತ್ತಿದೆ. ಹರಿವು ಕ್ರಿಯೇಷನ್ಸ್ ಕನ್ನಡದವರದ್ದು.'' - ಅಂಜನ ಗೌಡ, ಕರವೇ ಉಪಾಧ್ಯಕ್ಷ.

    English summary
    Karnataka Rakshana Vedike vice president Anjana Gowda spoke about 'Commando' movie. 'Commando' is a dubbing version of vivegam movie.
    Thursday, August 23, 2018, 14:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X