»   » ಚಿತ್ರ ನಿರ್ಮಾಪಕನಾಗುವತ್ತ ಸಚಿವ ಆಂಜನೇಯ ಚಿತ್ತ!

ಚಿತ್ರ ನಿರ್ಮಾಪಕನಾಗುವತ್ತ ಸಚಿವ ಆಂಜನೇಯ ಚಿತ್ತ!

Posted By: ಹರಾ
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಚಿತ್ರರಂಗಕ್ಕೂ ರಾಜಕೀಯಕ್ಕೂ ಏನೋ ಒಂಥರಾ ಅವಿನಾಭಾವ ನಂಟು. ಅಲ್ಲಿದ್ದೋರು ಇಲ್ಲಿಗೆ, ಇಲ್ಲಿದ್ದೋರು ಅಲ್ಲಿಗೆ ಹೋಗೋದು ಬರೋದು ಸಾಮಾನ್ಯ. ಆದ್ರೆ ರಾಜಕೀಯ ರಂಗದಲ್ಲೇ ಇದ್ದುಕೊಂಡು ಚಿತ್ರ ನಿರ್ಮಾಣ ಮಾಡುವ ಕನಸ್ಸು ಕಂಡವರು ಬೆರಳೆಣಿಕೆ ಮಂದಿ ಮಾತ್ರ. ಅದ್ರಲ್ಲೂ ಆದಾಯದ ಮೂಲವಾಗಿ ಚಿತ್ರರಂಗವನ್ನ ಬಳಸಿಕೊಳ್ಳುವವರೇ ಹೆಚ್ಚು.

  ಅಂತದ್ರಲ್ಲಿ, ಈ ವಿಚಾರವನ್ನು ಬದಿಗೊತ್ತಿ, ಸಮಾಜಿಕ ಕಳಕಳಿಯ ಜೊತೆ ಸಾಮಾಜಿಕ ಸ್ಥಾನಮಾನಗಳು, ಪರಿಸ್ಥಿತಿಯನ್ನು ಅರ್ಥಪೂರ್ಣವಾಗಿ ಕಟ್ಟಿಕೊಡಲು ಇಬ್ಬರು ಸಚಿವರು ಬಯಸುತ್ತಿದ್ದಾರೆ. ಅವರೇ ಸಣ್ಣ ನೀರಾವರಿ ಸಚಿವರಾದ ಶಿವರಾಜ್ ತಂಗಡಗಿ ಹಾಗೂ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ.

  H.Anjaneya1

  ಯಡಿಯೂರಪ್ಪನವರ ಆಡಳಿತ ಕಾಲಾವಧಿಯ ರಾಜಕೀಯ ಹಾಗೂ ಅಂದಿನ ಸಾಮಾಜಿಕ ಸ್ಥಿತಿಗತಿಗಳನ್ನಾಧರಿಸಿ ಚಿತ್ರ ಮಾಡ್ತೀನಿ ಅಂತ ಈ ಹಿಂದೆ ಶಿವರಾಜ್ ತಂಗಡಗಿ ಹೊರಟಿದ್ರು. ಆದ್ರೆ ಸರಿಯಾದ ಕಾಲ ಕೂಡಿಬಾರದ ಕಾರಣ ಆ ಕಲ್ಪನೆಯ ಕೂಸು ಜೀವ ಪಡೆಯಲಿಲ್ಲ. ಈಗ ಇಂತದ್ದೇ ಪ್ರಯತ್ನಕ್ಕೆ ಕೈಹಾಕಿದ್ದಾರೆ ಸಮಾಜಕಲ್ಯಾಣ ಸಚಿವ ಆಂಜನೇಯ.

  ರಾಜಕೀಯ ರಂಗದಲ್ಲಿ ತಮ್ಮದೇ ಆದ ಮ್ಯಾನರಿಸಂ ನಿಂದ ಸದ್ದು ಸುದ್ದಿ ಮಾಡಿರುವ ಆಂಜನೇಯ ಈಗ ಚಿತ್ರ ನಿರ್ಮಾಣಕ್ಕೆ ಮುಂದಾಗಿ ಅಲ್ಲೂ ಹೊಸ ಇನ್ನಿಂಗ್ಸ್ ಆರಂಭಿಸಲು ಪ್ಲಾನ್ ಮಾಡಿಕೊಂಡಿದ್ದಾರೆ. ಆ ಮೂಲಕ ತಮ್ಮ ಬಹುದಿನಗಳ ಕನಸನ್ನು ಸಾಕಾರಗೊಳಿಸಲು ಈಗವರು ನಿರ್ಧರಿಸಿದ್ದಾರೆ. [ಸಾಮೂಹಿಕ ವಿವಾಹದಲ್ಲಿ ಸಚಿವರ ಪುತ್ರಿ ಮದುವೆ!]

  H.Anjaneya2

  ಸಾಮಾಜಿಕ ಸಂದೇಶ ಸಾರುವ ಭಕ್ತಿಪ್ರಧಾನ ಚಿತ್ರವೊಂದರ ನಿರ್ಮಾಣಕ್ಕೆ ಆಂಜನೇಯ ಮುಂದಾಗಿದ್ದಾರೆ. ಹದಿನಾಲ್ಕನೇ ಶತಮಾನದ ಪಂಚಾಚಾರ್ಯರಲ್ಲಿ ಒಬ್ಬರಾದ 'ವಿಶ್ವಬಂಧು ಮರುಳ ಸಿದ್ಧರಾಜು' ರವರ ಜೀವನಕಥೆ ಆಧರಿಸಿ ಚಲನಚಿತ್ರ ನಿರ್ಮಾಣ ಮಾಡುವ ಯೋಚನೆ ಮಾಡಿದ್ದಾರೆ ಆಂಜನೇಯ.

  ಈ ಸಂಬಂಧ ಹಿರಿಯ ನಿರ್ದೇಶಕ ರೇಣುಕಾಶರ್ಮ ಜೊತೆ ಚಿತ್ರಕಥೆ ಬಗ್ಗೆ ಮಾತುಕತೆ ಕೂಡ ನಡೆಸಿದ್ದಾರಂತೆ. ಆದಷ್ಟು ಬೇಗ ಚಿತ್ರ ನಿರ್ಮಾಣ ಮಾಡುವ ಉತ್ಸಾಹದಲ್ಲಿದ್ದಾರೆ ಸಚಿವ ಸಾಹೇಬರು. ಇಲ್ಲಿಯವರೆಗೂ ಚಿತ್ರಕಥೆ ಬಗ್ಗೆ ಮಾತ್ರ ಚರ್ಚೆ ನಡೆಸಿದ್ದು ಪಾತ್ರವರ್ಗದ ಬಗ್ಗೆ ನಿರ್ಧಾರ ಮಾಡಿಲ್ಲ. ಅಂದುಕೊಂಡಿದ್ದು ಇನ್ ಟೈಂಗೆ ಆದ್ರೆ ಸಚಿವ ಆಂಜನೇಯ ಮುಂದೆ ರಾಜಕಾರಣಿ ಕಂ ನಿರ್ಮಾಪಕ ಅಂತ ಗುರುತಿಸಿಕೊಳ್ಳುವುದು ಖಚಿತ.

  English summary
  Karnataka's Minister for Social Welfare H.Anjaneya is all set to produce a kannada film based on the life of 14th Century's Panchacharya 'Vishwa Bhandhu Marula Siddharaju'. H.Anjaneya is in talks with Veteran director Renuka Sharma, regarding the script.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more