twitter
    For Quick Alerts
    ALLOW NOTIFICATIONS  
    For Daily Alerts

    ರಶ್ಮಿಕಾ ಸಿನಿಮಾಗಳನ್ನು ಬ್ಯಾನ್ ಮಾಡಿ - ಫಿಲ್ಮ್ ಚೆಂಬರ್ ಗೆ ದೂರು ನೀಡಿದ ಕನ್ನಡ ಪರ ಸಂಘಟನೆ

    |

    Recommended Video

    ರಶ್ಮಿಕಾ ಸಿನಿಮಾಗಳನ್ನು ಬ್ಯಾನ್ ಮಾಡಿ - ಫಿಲ್ಮ್ ಚೆಂಬರ್ ಗೆ ದೂರು ನೀಡಿದ ಕನ್ನಡ ಪರ ಸಂಘಟನೆ

    ಸ್ಯಾಂಡಲ್ ವುಡ್ ನ ಕಿರಿಕ್ ಸುಂದರಿ ರಶ್ಮಿಕಾ ಮಂದಣ್ಣ ಅವರ ಹೇಳಿಕೆ ಇತ್ತೀಚಿಗೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಡಿಯರ್ ಕಾಮ್ರೇಡ್ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಸಿನಿಮಾ ವಿಚಾರಕ್ಕಿಂತ ಹೆಚ್ಚಾಗಿ ವಿವಾದಗಳ ಮೂಲಕವೆ ಸುದ್ದಿಯಾಗುತ್ತಿದ್ದಾರೆ.

    ಇತ್ತೀಚಿಗೆ ರಶ್ಮಿಕಾ ಅವರು ವೆಬ್ ಪೋರ್ಟಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಕನ್ನಡ ಮಾತನಾಡಲು ಬರಲ್ಲ, ಕನ್ನಡ ತುಂಬ ಕಷ್ಟ ಎಂದು ಹೇಳದ್ದ ರಶ್ಮಿಕಾ ವಿರುದ್ಧ ಕನ್ನಡ ಚಿತ್ರಾಭಿಮಾನಿಗಳು ರೊಚ್ಚಿಗೆದಿದ್ದಾರೆ. ರಶ್ಮಿಕಾ ವಿರುದ್ಧ ತರಹೇವಾರಿ ಕಮೆಂಟ್ಸ್ ಗಳನ್ನು ಮಾಡಿ, ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕಾರನ್ನು ಹಿಗ್ಗಾಮುಗ್ಗ ಥಳಿಸುತ್ತಿದ್ದಾರೆ.

    "ಕನ್ನಡ ತುಂಬ ಕಷ್ಟ, ಸರಿಯಾಗಿ ಮಾತನಾಡಲು ಬರಲ್ಲ" ಎಂದ ರಶ್ಮಿಕಾ

    ಇದರ ನಡುವೆ ಈಗ ಕಿರಿಕ್ ಸುಂದರಿಯನ್ನು ಸ್ಯಾಂಡಲ್ ವುಡ್ ನಿಂದ ಬ್ಯಾನ್ ಮಾಡಬೇಕು ಎಂದು ಕನ್ನಡ ಪರ ಸಂಘಟನೆ ಆಗ್ರಹಿಸಿದೆ. ಕನ್ನಡ ಮಾತನಾಡಲು ಬರಲ್ಲ, ತುಂಬ ಕಷ್ಟ ಎಂದು ಹೇಳಿ ಕನ್ನಡಕ್ಕೆ ಅವಮಾನ ಮಾಡಿದ್ದಾರೆ ಎಂದು ರಶ್ಮಿಕಾ ವಿರುದ್ಧ ಗರಂ ಆಗಿದ್ದಾರೆ.

    ರಶ್ಮಿಕಾ ವಿರುದ್ಧ ಕರ್ನಾಟಕ ಸಂಘಟನೆ ಆಕ್ರೋಶ

    ರಶ್ಮಿಕಾ ವಿರುದ್ಧ ಕರ್ನಾಟಕ ಸಂಘಟನೆ ಆಕ್ರೋಶ

    ರಶ್ಮಿಕಾ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರ ನೀಡಿದ್ದಾರೆ ಕರ್ನಾಟಕ ಸಂಘಟನೆಯ ಅಧ್ಯಕ್ಷ ನಾಗೇಶ್. ಕನ್ನಡ ಎಂದರೆ ಕಷ್ಟ ಎಂದು ಹೇಳಿಕೆ ನೀಡಿ ಕನ್ನಡಿಗರನ್ನು ಕೆರಳಿಸುವಂತೆ ಮಾಡಿದ್ದಲ್ಲದೆ, ಕನ್ನಡಕ್ಕೆ ಅಗೌರವ ನೀಡಿದ್ದಂತೆ ಹಾಗಾಗಿ ಅವರ ಸಿನಿಮಾಗಳು ಕರ್ನಾಟಕದಲ್ಲಿ ರಿಲೀಸ್ ಆಗಬಾರದು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿದ್ದಾರೆ ಕರ್ನಾಟಕ ಸಂಘಟನೆಯ ಅಧ್ಯಕ್ಷ ನಾಗೇಶ್.

    ರಶ್ಮಿಕಾ ಸಿನಿಮಾ ರಿಲೀಸ್ ಆದ್ರೆ ಪ್ರತಿಭಟನೆ

    ರಶ್ಮಿಕಾ ಸಿನಿಮಾ ರಿಲೀಸ್ ಆದ್ರೆ ಪ್ರತಿಭಟನೆ

    ರಶ್ಮಿಕಾ ಮಂದಣ್ಣ ಸಿನಿಮಾಗಳು ಮುಂದೆ ಕರ್ನಾಟಕದಲ್ಲಿ ರಿಲೀಸ್ ಆದ್ರೆ ಕರ್ನಾಟಕ ಸಂಘಟನೆಗಳ ಒಕ್ಕೂಟ ಚಿತ್ರ ತಡೆಹಿಡಿದು ಪ್ರತಿಭಟನೆ ಮಾಡಿ ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದೆ. ಹಾಗಾಗಿ ರಶ್ಮಿಕಾ ಸಿನಿಮಾ ರಿಲೀಸ್ ಆಗದಂತೆ ತಡೆಹಿಡಿಯಬೇಕೆಂದು ಫಿಲ್ಮ್ ಚೇಂಬರ್ ಗೆ ಮನವಿ ಮಾಡಿಕೊಂಡಿದ್ದಾರೆ.

    ಸಾಯಿ ಪಲ್ಲವಿ 'ಡಿಯರ್ ಕಾಮ್ರೇಡ್' ಸಿನಿಮಾ ರಿಜೆಕ್ಟ್ ಮಾಡಲು ಇದೇ ಕಾರಣಸಾಯಿ ಪಲ್ಲವಿ 'ಡಿಯರ್ ಕಾಮ್ರೇಡ್' ಸಿನಿಮಾ ರಿಜೆಕ್ಟ್ ಮಾಡಲು ಇದೇ ಕಾರಣ

    ರಶ್ಮಿಕಾ ತವರಿನಲ್ಲಿ ಪ್ರತಿಭಟನೆ

    ರಶ್ಮಿಕಾ ತವರಿನಲ್ಲಿ ಪ್ರತಿಭಟನೆ

    ರಶ್ಮಿಕಾ ಹೇಳಿಕೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸಂಘದ ಕಾರ್ಯಕರ್ತರು ಮಡಿಕೇರಿ ತಾಲೂಕಿನ ಪೆರಾಜೆಯಲ್ಲಿ ಪ್ರತಿಭಟನೆ ನಡೆಸಿದೆ. ರಶ್ಮಿಕಾ ವಿರುದ್ಧ ಅಸಮಾಧಾನ ಹೊರಹಾಕಿದ ಕಾರ್ಯಕರ್ತರು ಕನ್ನಡ ಕಲಿಯದಿದ್ದರೆ ನಾವು ವರ್ಣಮಾಲೆ ಕಲಿಸುತ್ತೇವೆ ಎಂದು ರಶ್ಮಿಕಾ ಮಂದಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    'ಡಿಯರ್ ಕಾಮ್ರೇಡ್'ನಲ್ಲಿ ರಶ್ಮಿಕಾಗೆ ಕಷ್ಟ ಆಗಿದ್ದು 5 ರಿಂದ 10 ನಿಮಿಷದ ಈ ದೃಶ್ಯ'ಡಿಯರ್ ಕಾಮ್ರೇಡ್'ನಲ್ಲಿ ರಶ್ಮಿಕಾಗೆ ಕಷ್ಟ ಆಗಿದ್ದು 5 ರಿಂದ 10 ನಿಮಿಷದ ಈ ದೃಶ್ಯ

    ಕನ್ನಡದ ಬಗ್ಗೆ ರಶ್ಮಿಕಾ ಹೇಳಿಕೆ

    ಕನ್ನಡದ ಬಗ್ಗೆ ರಶ್ಮಿಕಾ ಹೇಳಿಕೆ

    ರಶ್ಮಿಕಾ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಸಂದರ್ಶಕ "ಕನ್ನಡ ತುಂಬ ಸುಲಭ ಅಲ್ಲವಾ ನಿಮಗೆ" ಎಂದು ಕೇಳಿದಕ್ಕೆ ರಶ್ಮಿಕಾ "ಕನ್ನಡ ತುಂಬ ಕಷ್ಟ, ಮಾತನಾಡಲು ಸರಿಯಾಗಿ ಬರಲ್ಲ" ಎಂದು ಹೇಳಿದ್ದಾರೆ. "ಕನ್ನಡ ಮಾತ್ರವಲ್ಲ ಯಾವ ಭಾಷೆಯನ್ನು ಸರಿಯಾಗಿ ಮಾತನಾಡಲು ಬರಲ್ಲ" ಎಂದು ತಮಿಳಿನಲ್ಲಿ ಹೇಳಿದ್ದಾರೆ. ವರ್ಷದಲ್ಲೆ ತೆಲುಗು ಮತ್ತು ತಮಿಳು ಮಾತನಾಡಲು ಕಲಿತ ರಶ್ಮಿಕಾ ಕರ್ನಾಟಕದಲ್ಲೆ ಹುಟ್ಟಿಬೆಳೆದರು ಕನ್ನಡ ಬರಲ್ವಾ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    English summary
    Karnataka sanghatane complaint against Rashmika Mandanna to Film chamber. Kannada Sanghatane demands banning of Rashmika Mandanna films in Karnataka.
    Monday, July 22, 2019, 17:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X