2016 ರಾಜ್ಯ ಪ್ರಶಸ್ತಿ: 'ಅಮರಾವತಿ' ಅತ್ಯುತ್ತಮ ಚಿತ್ರ, ಅಚ್ಯುತ್ ಕುಮಾರ್ ಅತ್ಯುತ್ತಮ ನಟ

By Bharath Kumar

2016ನೇ ಸಾಲಿನ ಪ್ರತಿಷ್ಠಿತ ರಾಜ್ಯ ಚಲನಚಿತ್ರ ಪ್ರಶಸ್ತಿ ಇಂದು (ಏಪ್ರಿಲ್ 11) ಪ್ರಕಟವಾಗಿದೆ. ಅಚ್ಯುತ್ ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿ ಗಳಿಸಿದ್ದಾರೆ. 'ಬ್ಯೂಟಿಫುಲ್ ಮನಸ್ಸುಗಳು' ಚಿತ್ರದ ಅಭಿನಯಕ್ಕಾಗಿ ಶ್ರುತಿ ಹರಿಹರನ್ ಅತ್ಯುತ್ತಮ ನಟಿಯಾಗಿ ಹೊರಹೊಮ್ಮಿದ್ದಾರೆ. ಇನ್ನು 'ಅಮರಾವತಿ' ಚಿತ್ರಕ್ಕೆ ಅತ್ಯುತ್ತಮ ಪ್ರಥಮ ಚಿತ್ರ ರಾಜ್ಯ ಪ್ರಶಸ್ತಿ ಲಭಿಸಿದೆ.[2016 ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಗೆ 126 ಚಿತ್ರಗಳ ಅರ್ಜಿ ]

ಇಂದು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟಿಸಿದ್ದು, ಡಾ.ರಾಜ್ ಕುಮಾರ್ ಅವರ ಜನ್ಮ ದಿನವಾದ ಏಪ್ರಿಲ್ 24ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಆಯ್ಕೆ ಪ್ರಶಸ್ತಿಗೆ 124 ಚಿತ್ರಗಳು ಬಂದಿದ್ದವು, ಎಲ್ಲಾ ಚಿತ್ರಗಳನ್ನು ವೀಕ್ಷಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿ ಅಧ್ಯಕ್ಷೆ ಕವಿತಾ ಲಂಕೇಶ್ ಅವರು ತಿಳಿಸಿದ್ದಾರೆ.

Karnataka State Film Award 2016 Announced

ಪ್ರಶಸ್ತಿ ವಿಜೇತರ ಪಟ್ಟಿ:

* ಅತ್ಯುತ್ತಮ ನಟ - ಅಚ್ಯುತ್ ಕುಮಾರ್ (ಅಮರಾವತಿ')
* ಅತ್ಯುತ್ತಮ ನಟಿ - ಶ್ರುತಿ ಹರಿಹರನ್ (ಬ್ಯೂಟಿಫುಲ್ ಮನಸುಗಳು)
* ಪ್ರಥಮ ಅತ್ಯುತ್ತಮ ಚಿತ್ರ - ಅಮರಾವತಿ
* ದ್ವಿತೀಯ ಅತ್ಯುತ್ತಮ ಚಿತ್ರ - ರೈಲ್ವೇ ಚಿಲ್ಡ್ರನ್
* ತೃತೀಯ ಅತ್ಯುತ್ತಮ ಚಿತ್ರ - ಅಂತರ್ಜಲ
* ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ - ಮೂಡಲ ಸೀಮೆಯಲಿ
* ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ - ಕಿರಿಕ್ ಪಾರ್ಟಿ
* ಅತ್ಯುತ್ತಮ ಮಕ್ಕಳ ಚಿತ್ರ - ಜೀರ್ಜಿಂಬೆ
* ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ - ರಾಮಾ ರಾಮಾರೇ
* ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಪ್ರಶಸ್ತಿ - ಮದಿಪು (ತುಳು)
* ಅತ್ಯುತ್ತಮ ನಟ - ಅಚ್ಯುತ್ ಕುಮಾರ್ (ಅಮರಾವತಿ)
* ಅತ್ಯುತ್ತಮ ನಟಿ - ಶ್ರುತಿ ಹರಿಹರನ್ (ಬ್ಯೂಟಿಫುಲ್ ಮನಸುಗಳು)
* ಅತ್ಯುತ್ತಮ ಪೋಷಕ ನಟ - ನವೀನ್ ಡಿ.ಪಡೀಲ್ (ಕುಡ್ಲು ಕೆಫೆ)
* ಅತ್ಯುತ್ತಮ ಪೋಷಕ ನಟಿ - ಅಕ್ಷತಾ ಪಾಂಡವಪುರ (ಪಲ್ಲಟ)
* ಅತ್ಯುತ್ತಮ ಬಾಲನಟ - ಮಾಸ್ಟರ್ ಮನೋಹರ್.ಕೆ (ರೈಲ್ವೇ ಚಿಲ್ಡ್ರನ್)
* ಅತ್ಯುತ್ತಮ ಬಾಲ ನಟಿ - ಬಿ.ಬಿ.ಶ್ರೀವಾನಳ್ಳಿ,(ಜೀರ್ಜಿಂಬೆ) ಮತ್ತು ಬೇಬಿ ರೇವತಿ (ಬೇಟಿ)
* ಅತ್ಯುತ್ತಮ ಕತೆ - ನಂದಿತಾ ಯಾದವ್ (ರಾಜ ಎದೆಗೆ ಬಿದ್ದ ಅಕ್ಷರ)
* ಅತ್ಯುತ್ತಮ ಚಿತ್ರಕತೆ - ಅರವಿಂದ ಶಾಸ್ತ್ರಿ (ಕಹಿ)
* ಅತ್ಯುತ್ತಮ ಸಂಭಾಷಣೆ - ಬಿ.ಎಂ.ಗಿರಿರಾಜು (ಅಮರಾವತಿ)
* ಅತ್ಯುತ್ತಮ ಛಾಯಾಗ್ರಹಣ - ಶೇಖರ್ ಚಂದ್ರ (ಮುಂಗಾರುಮಳೆ-2)
* ಅತ್ಯುತ್ತಮ ಸಂಗೀತ ನಿರ್ದೇಶನ - ಎಂ.ಆರ್ ಚರಣ್ ರಾಜ್ (ಜೀರ್ಜಿಂಬೆ)
* ಅತ್ಯುತ್ತಮ ಗೀತ ರಚನೆ - ಕಾರ್ತಿಕ್ ಸರಗೂರು (ಜೀರ್ಜಿಂಬೆ)
* ಅತ್ಯುತ್ತಮ ಹಿನ್ನಲೆ ಗಾಯಕ - ವಿಜಯ್ ಪ್ರಕಾಶ್ (ಬ್ಯೂಟಿಫುಲ್ ಮನಸುಗಳು)
* ಅತ್ಯುತ್ತಮ ಹಿನ್ನಲೆ ಗಾಯಕಿ - ಸಂಗೀತಾ ರವಿಚಂದ್ರನಾಥ್ (ಜಲ್ಸಾ)
* ಅತ್ಯುತ್ತಮ ಸಂಕಲನ - ಸಿ ರವಿಚಂದ್ರನ್ (ಮಮ್ಮಿ)
* ಅತ್ಯುತ್ತಮ ಕಲಾ ನಿರ್ದೇಶನ - ಶಶಿಧರ ಅಡಪ (ಉಪ್ಪಿನ ಕಾಗದ)
* ವಸ್ತ್ರಾಲಂಕಾರ: ಚಿನ್ಮಯ (ಸಂತೆಯಲ್ಲಿ ನಿಂತ ಕಬೀರ)
* ಅತ್ಯುತ್ತಮ ನಿರ್ಮಾಣ ನಿರ್ವಾಹಕ - ಕೆ.ವಿ ಮಂಜಯ್ಯ (ಮುಂಗಾರು ಮಳೆ-2)

[ಪ್ರೇಕ್ಷಕನ ವಿಮರ್ಶೆ: ತಲೆ ತಗ್ಗಿಸುವಂತೆ ಮಾಡುವ 'ಅಮರಾವತಿ']

More from Filmibeat

English summary
State Film Awards 2016 were announced today (April 11th). Kannada Movie Amaravathi Wins Best Movie Award.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X