For Quick Alerts
  ALLOW NOTIFICATIONS  
  For Daily Alerts

  2018ನೇ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: ರಾಘಣ್ಣ ಅತ್ಯುತ್ತಮ ನಟ, ಮೇಘನಾ ರಾಜ್ ಉತ್ತಮ ನಟಿ

  |

  2018ನೇ ರಾಜ್ಯ ಚಲನಚಿತ್ರವ ಪ್ರಶಸ್ತಿ ಪ್ರಕಟವಾಗಿದ್ದು, ರಾಘವೇಂದ್ರ ರಾಜ್ ಕುಮಾರ್ ಗೆ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ ಲಭಿಸಿದೆ. 'ಅಮ್ಮನೆ ಮನೆ' ಸಿನಿಮಾದ ನಟನೆಗಾಗಿ ರಾಘಣ್ಣಗೆ ಮತ್ತು ಇರುವುದೆಲ್ಲವ ಬಿಟ್ಟು ಚಿತ್ರದ ನಟನೆಗಾಗಿ ಮೇಘನಾ ರಾಜ್ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ಘೋಷಣೆಯಾಗಿದೆ.

  ದಯಾಳ್ ಪದ್ಮನಾಭನ್ ನಿರ್ದೇಶನ 'ಆ ಕರಾಳ ರಾತ್ರಿ' ಚಿತ್ರ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದುಕೊಂಡಿದೆ. ಇನ್ನುಳಿದಂತೆ ಜೀವಮಾನ ಸಾಧನೆಗಾಗಿ ಹಿರಿಯ ನಟ ಶ್ರೀನಿವಾಸ ಮೂರ್ತಿ ಅವರಿಗೆ ಡಾ ರಾಜ್ ಕುಮಾರ್ ಪ್ರಶಸ್ತಿ, ಪಿ. ಶೇಷಾದ್ರಿ ಅವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಬಿ ಎಸ್ ಬಸವರಾಜು ಅವರಿಗೆ ವಿಷ್ಣುವರ್ಧನ ಪ್ರಶಸ್ತಿ ಘೋಷಣೆಯಾಗಿದೆ.

  ಮೊದಲನೆ ಅತ್ಯುತ್ತಮ ಚಿತ್ರ ಪ್ರಶಸ್ತಿ-"ಆ ಕರಾಳ ರಾತ್ರಿ"

  ಎರಡನೆ ಅತ್ಯುತ್ತಮ ಚಿತ್ರ-ರಾಮನ ಸವಾರಿ
  ಮೂರನೆ ಅತ್ಯುತ್ತಮ ಚಿತ್ರ-ಒಂದಲ್ಲಾ ಎರಡಲ್ಲಾ
  ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ-ಸಂತಕವಿ ಕನಕದಾಸರ ರಾಮಧಾನ್ಯ
  ಅತ್ಯುತ್ತಮ ಮನರಂಜನಾಚಿತ್ರ-ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು.
  ಅತ್ಯುತ್ತಮ ಮಕ್ಕಳ ಚಿತ್ರ-ಹೂವುಬಳ್ಳಿ
  ನಿರ್ದೇಶಕರ ಪ್ರಥಮ ನಿರ್ದೆಶನದ ಅತ್ಯುತ್ತಮ ಚಿತ್ರ-ಬೆಳಕಿನ‌ಕನ್ನಡಿ
  ಅತ್ಯುತ್ತಮ‌ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ-ದೇಯಿ ಬೈದೇತಿ(ತುಳು)
  ಅತ್ಯುತ್ತಮ ನಟಿ-ಮೇಘನಾರಾಜ್ (ಇರುವುದೆಲ್ಲವ ಬಿಟ್ಟು)
  ಅತ್ಯುತ್ತಮ ಪೋಷಕ ನಟ-ಬಾಲಾಜಿ ಮನೋಹರ್(ಚೂರಿಕಟ್ಟೆ)
  ಅತ್ಯುತ್ತಮ ಪೋಷಕ ನಟಿ-ವೀಣಾ ಸುಂದರ್(ಆಕರಾಳ ರಾತ್ರಿ)
  ಅತ್ಯುತ್ತಮ ಕಥೆ-,ಹರೀಶ್ ಎಸ್(ನಾಯಿಗೆರೆ)
  ಅತ್ಯುತ್ತಮ‌ ಚಿತ್ರಕಥೆ- ಪಿ.ಶೇಷಾದ್ರಿ(ಮೂಕಜ್ಜಿಯ ಕನಸು)
  ಅತ್ಯುತ್ತಮ ಸಂಭಾಷಣೆ-ಶಿರೀಷಾ ಜೋಷಿ(ಸಾವಿತ್ರಿಬಾಯಿ ಪುಲೆ)
  ಅತ್ಯುತ್ತಮ ಛಾಯಾಗ್ರಹಣ-,ನವೀನ್ ಕುಮಾರ್ ಐ (ಅಮ್ಮಚ್ಚಿಯೆಂಬ ನೆನಪು)
  ಅತ್ಯುತ್ತಮ ಸಂಗೀತ ನಿರ್ದೇಶನ-ರವಿಬಸ್ರೂರ್(ಕೆಜಿಎಫ್)
  ಅತ್ಯುತ್ತಮ ಸಂಕಲನ-,ಸುರೇಶ್ ಆರ್ಮುಗಂ(,ತ್ರಾಟಕ)
  ಅತ್ಯುತ್ತಮ ಬಾಲನಟ-ಮಾಸ್ಟರ್ ಆರೆನ್ (ರಾಮನ ಸವಾರಿ)
  ಅತ್ಯುತ್ತಮ ಬಾಲನಟಿ-ಬೇಬಿ ಸಿಂಚನಾ.(ಅಂದವಾದ)
  ಅತ್ಯುತ್ತಮ ಕಲಾ ನಿರ್ದೇಶನ-ಶಿವಕುಮಾರ್ ಜೆ(ಕೆಜಿಎಫ್)
  ಅತ್ಯುತ್ ಗೀತರಚನೆ-ಬರಗೂರು
  ರಾಮಚಂದ್ರಪ್ಪ(ಬಯಲಾಟದ ಭೀಮಣ್ಣ)
  ಅತ್ಯುತ್ತಮ ಹಿನ್ನೆಲೆ ಗಾಯಕ-ಸಿದ್ದಾರ್ಥ ಬೆಳ್ಮುಣ್ಣು(ಸಂತಕವಿ ಕನಕದಾಸರ ರಾಮಧಾನ್ಯ)
  ಅತ್ಯುತ್ತಮ ಹಿನ್ನೆಲೆ ಗಾಯಕಿ-ಕಲಾವತಿ ದಯಾನಂದ(ದೇಯಿ ಬೈದೇತಿ)
  ತೀರ್ಪುಗಾರರ ವಿಶೇಷ ಪ್ರಶಸ್ತಿ-ಅನಂತರಾಯಪ್ಪ(ಸಮಾನತೆಯ ಕಡೆಗೆ)
  ಅತ್ಯುತ್ತಮ ನಿರ್ಮಾಣ
  ನಿರ್ವಾಹಕ-ವಿ.ಥಾಮಸ್(ಅಬ್ಬೆ ತುಮಕೂರು ಸಿದ್ದಪುರುಷ ವಿಶ್ವಾರಾಧ್ಯರು)

  ಹಿರಿಯ ನಟ ಶ್ರೀನಿವಾಸ ಮೂರ್ತಿ - ಡಾ ರಾಜ್ ಕುಮಾರ್
  ಪಿ. ಶೇಷಾದ್ರಿ - ಪುಟ್ಟಣ್ಣ ಕಣಗಾಲ್ ಪ್ರಶಸ್ತಿ
  ಬಿ ಎಸ್ ಬಸವರಾಜು - ವಿಷ್ಣುವರ್ಧನ ಪ್ರಶಸ್ತಿ

  English summary
  2018th Year Karnataka State Film Awards Announced. raghavendra rajkumar best actor, meghana raj best actress.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X