For Quick Alerts
  ALLOW NOTIFICATIONS  
  For Daily Alerts

  'ನೀವು ಬಸ್ ಡ್ರೈವರ್ ಮಗನೇ, ನಮ್ಮ ಮುಷ್ಕರ ಬೆಂಬಲಿಸಿ': ಯಶ್‌ಗೆ ಪತ್ರ ಬರೆದ ಸಾರಿಗೆ ನೌಕರರು?

  |

  ಕಳೆದ ಒಂದು ವಾರದಿಂದ ಕರ್ನಾಟಕ ರಾಜ್ಯದಲ್ಲಿ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ಚಾಲಕರು ಮತ್ತು ನಿರ್ವಾಹಕರು ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನು ಮುಂದಿಟ್ಟು ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ.

  ಈ ಪ್ರತಿಭಟನೆಗೆ ನಟ ಯಶ್ ಅವರು ಬೆಂಬಲ ಕೊಡಬೇಕಾಗಿ ಸಾರಿಗೆ ನೌಕರರು ಒಕ್ಕೂಟ ಬರೆದಿದೆ ಎನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಪತ್ರದಲ್ಲಿ ಯಾವುದೇ ಸಂಘಟನೆಯ ಅಧಿಕೃತ ಮುದ್ರೆ, ಸಹಿ, ದಿನಾಂಕ ಇಲ್ಲ. ಆದರೆ, ಯಶ್ ಅವರ ತಂದೆ ಸಹ ಬಿಎಂಟಿಸಿ ನಿವೃತ್ತ ನೌಕರರಾಗಿರುವ ಕಾರಣ ಈ ಪತ್ರ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ.

  ಮುಷ್ಕರ ಮಾಡದಂತೆ ನನ್ನನ್ನು ಕೂಡಿ ಹಾಕಲಾಗಿತ್ತು; ಉಡುಪಿ KSRTC ಮೆಕ್ಯಾನಿಕ್ ಅಳಲು

  ''ಯಶ್,

  ಜನಪ್ರಿಯ ನಟರು ಹಾಗೂ ನಿವೃತ್ತ ಬಿಎಂಟಿಸಿ ಚಾಲಕರ ಪುತ್ರ.

  ಪ್ರೀತಿಯ ರಾಕಿಂಗ್ ಸ್ಟಾರ್ ಯಶ್,

  ವಿಷಯ: ಕರ್ನಾಟಕ ರಾಜ್ಯದಲ್ಲಿ ಸಾರಿಗೆ ನೌಕರರು ಕೈಗೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಕೋರಿ...

  ಯುಗಾದಿ ಹಬ್ಬದ ಶುಭಾಷಯ ಕೋರುತ್ತಾ, ಒಂದು ವಾರದಿಂದ ಕರ್ನಾಟಕದಲ್ಲಿ ಹಲವು ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಸಾರಿಗೆ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಟರವು ಸರ್ಕಾರದ ಹಠಮಾರಿ ಧೋರಣೆಯಿಂದ ತೀವ್ರ ಸ್ವರೂಪಕ್ಕೆ ತಿರುಗಿದ್ದು, ಸಾರಿಗೆ ನೌಕರರು ಕುಟುಂಬ ಸಮೇತರಾಗಿ ಬೀದಿಗಿಳಿದು ಹೋರಾಟ ಮಾಡುತ್ತಿರುವ ವಿಷಯ ನಿಮಗೆ ತಿಳಿಯದಾದುದೇನಲ್ಲ. ಹೀಗಿರುವಾಗ, ಸಾರಿಗೆ ನೌಕರ ಕುಟುಂಬದ ಹಿನ್ನೆಲೆ ಇರುವ, ಇಲ್ಲಿನ ನೌಕರರ ಪಾಡು-ಬದುಕು-ಬವಣೆಗಳ ಬಗೆಗೆ ಚಾಲಕರಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಘೋಷಿಸಿರುವ ಹಾಗೂ ನಮಗೆ ಹಿರಿಯ ಸಿಬ್ಬಂದಿಯೂ ಆಗಿದ್ದ ನಿಮ್ಮ ತಂದೆಯವರು ಅವರ ಅನುಭವವನ್ನು ನಿಮ್ಮೊಡನೆ ಹಂಚಿಕೊಂಡಿರಬಹುದು. ಪ್ರಯತ್ನ-ಪರಿಶ್ರಮ ಫಲವಾಗಿ ಚಲನಚಿತ್ರರಂಗದಲ್ಲಿ ರಾಕಿಂಗ್ ಸ್ಟಾರ್ ಆಗಿ ಜನಮಾನಸದಲ್ಲಿ ರಾರಾಜಿಸುತ್ತಿರುವ ತಾವು ಸಮಾಜ ಸೇವೆಯಲ್ಲೂ ಹಿಂದೆ ಬಿದ್ದಿಲ್ಲವೆಂಬುದು ನಮಗೆ ಹೆಮ್ಮೆಯ ವಿಷಯ. ಆದರೀಗ, ಸಾರಿಗೆ ನೌಕರರು ನಿರಂತರವಾಗಿ ತಮ್ಮ ಮೇಲಾಗುತ್ತಿರುವ ತಾರತಮ್ಯ ದೌರ್ಜನ್ಯ-ದಬ್ಬಾಳಿಕೆಗಳಿಂದ ಬೇಸತ್ತು ಹೋರಾಟಕ್ಕೆ ಕುಟುಂಬ ಸಮೇತರಾಗಿ ಬೀದಿಗಿಳಿದಿದ್ದಾರೆ. ಹೃದಯಹೀನ ಸರ್ಕಾರ ತನ್ನ ಹಠಮಾರಿ ಧೋರಣೆಯಿಂದ ಸೇವೆ ಮಾಡುವ ಕೈಗಳನ್ನು ಭಿಕ್ಷೆ ಬೇಡುವಂತೆ ಮಾಡಿದೆ. ಇದೂ ನಿಮಗೆ ತಿಳಿದಿರಬಹುದು. ಕಾನೂನಿ ಚೌಕಟ್ಟಿನಲ್ಲಿ ಮುಷ್ಕರ ಮೊರೆಹೋಗಿರುವ ನಾವು ಇಂತಹ ಸಂಕಷ್ಟದ ಸಮಯದಲ್ಲಿ ನಿಮ್ಮಿಂದ ಬೆಂಬಲ ನಿರೀಕ್ಷಿಸಬಹುದೇ? ನಿಮ್ಮ ಏಳಿಗೆನ್ನು ಹೆಮ್ಮೆಯಿಂದ ಸಂಭ್ರಮಿಸುವ ನಾವು, ನಿಮ್ಮ ಬೆಂಬಲವೂ ನಮ್ಮ ಹೋರಾಟಕ್ಕೆ ಧನಾತ್ಮಕ ಪರಿಣಾಮ ಬೀರಬಹುದೆಂಬ ನಂಬಿಕೆ ಹೊಂದಿದ್ದೇವೆ ಹಾಗೂ ನಿಮ್ಮ ಬೆಂಬಲ ನಿರೀಕ್ಷೆಯಲ್ಲಿ ಆಸೆಗಣ್ಣಿಂದ ಕಾಯುತ್ತಿರುತ್ತೇವೆ.

  Karnataka Transport Employees write letter to Yash requesting him to support bus strike

  ವಂದನೆಗಳು....

  ಇಂತಿ
  ನಿಮ್ಮ ಬೆಂಬಲದ ನಿರೀಕ್ಷೆಯಲ್ಲಿ

  ಕ ರಾ ಸಾ ನೌಕರರ ಒಕ್ಕೂಟ, ಕರ್ನಾಟಕ'' ಎಂದು ಪತ್ರದಲ್ಲಿ ಬರೆಯಲಾಗಿದೆ.

  ಸಾರಿಗೆ ಮುಷ್ಕರ ಬಿಟ್ಟು, ಮತ್ತೆ ಕೆಲಸಕ್ಕೆ ಹಾಜರಾಗಿ: ಶಿವರಾಮ್ ಹೆಬ್ಬಾರ್

  ಅಧಿಕೃತವಲ್ಲದೇ ಈ ಪತ್ರದ ಬಗ್ಗೆ ನಟ ಯಶ್ ಪ್ರತಿಕ್ರಿಯಿಸುತ್ತಾರಾ ಎಂಬ ಕುತೂಹಲ ಸಹಜವಾಗಿ ಕಾಡ್ತಿದೆ. ಇದುವರೆಗೂ ಯಾವ ಸಿನಿಮಾ ನಟರು ನೌಕರರ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿಲ್ಲ. ಇಲ್ಲಿಂದ ಸಿನಿಮಾರಂಗಕ್ಕೂ ಈ ಮುಷ್ಕರ ಬಿಸಿ ತಟ್ಟುತ್ತಾ ಎಂಬ ಪ್ರಶ್ನೆಯೂ ಕಾಡ್ತಿದೆ.

  ಅಮಿತಾಬ್ ಜೊತೆ ನಟಿಸುವ ಆಫರ್ ಬಂದಾಗ ರಶ್ಮಿಕಾ ಪೋಷಕರು ಏನ್ ಹೇಳಿದ್ರು ಗೊತ್ತಾ | Filmibeat Kannada
  English summary
  Karnataka Transport Employees write letter to Yash requesting him to support bus strike goes viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X