'ಪದ್ಮಾವತಿ'ಯನ್ನ ವಿರೋಧಿಸಿದ್ದಕ್ಕೆ ಪಾಕಿಸ್ತಾನದಿಂದ ಬೆದರಿಕೆ ಕರೆ.! ಮಾಡಿದ್ಯಾರು?
ಭಾರತದಲ್ಲಿ ನಡೆಯುತ್ತಿರುವ 'ಪದ್ಮಾವತಿ' ಚಿತ್ರದ ವಿವಾದಕ್ಕೆ ಈಗ ಪಾಕಿಸ್ತಾನದ ಹೆಸರು ಅಂಟಿಕೊಂಡಿದೆ. 'ಪದ್ಮಾವತಿ' ಚಿತ್ರ ಬಿಡುಗಡೆ ಮಾಡಬಾರದೆಂದು ವಿರೋಧಿಸುತ್ತಿರುವ ರಜಪೂತ ಕರಣಿ ಸೇನೆ ಮುಖ್ಯಸ್ಥರಿಗೆ ಪಾಕ್ ನಿಂದ ಜೀವ ಬೆದರಿಕೆ ಕರೆ ಬಂದಿದೆ ಎಂಬ ಶಾಕಿಂಗ್ ಸುದ್ದಿ ಈಗ ಹೊರ ಬಿದ್ದಿದೆ.
ಕರಾಚಿ ಮೂಲದ ವ್ಯಕ್ತಿಯೊಬ್ಬ ದೂರವಾಣಿ ಕರೆ ಮಾಡಿ ರಜಪೂತ ಕರಣಿ ಸೇನೆ ಮುಖ್ಯಸ್ಥ ಲೋಕೆಂದ್ರ ಸಿಂಗ್ ಕಲ್ವಿ ಅವರಿಗೆ ಬೆದರಿಕೆ ಹಾಕಿದ್ದಾರೆ ಎಂದು ಮತ್ತೊಬ್ಬ ಕರಣಿ ಸೇನೆ ಸದಸ್ಯ ಮಹಿಪಾಲ್ ಸಿಂಗ್ ಮಕ್ರಾನ ತಿಳಿಸಿದ್ದಾರೆ.

ಕರೆ ಮಾಡಿದ್ದ ವ್ಯಕ್ತಿ ''ಪದ್ಮಾವತಿ ಚಿತ್ರದ ವಿರುದ್ಧ ಹೋರಾಟವನ್ನ ನಿಲ್ಲಿಸಿ, ಇಲ್ಲವಾದಲ್ಲಿ 1993ರ ರೀತಿಯಲ್ಲಿ ಲೋಕೆಂದ್ರ ಸಿಂಗ್ ಕಲ್ವಿ ಅವರನ್ನ ಬಾಂಬ್ ಹಾಕಿ ಕೊಲ್ಲಬೇಕಾಗುತ್ತೆ'' ಎಂದು ಬೆದರಿಸಿದ್ದಾರಂತೆ.
ಇನ್ನು 'ಪದ್ಮಾವತಿ' ಚಿತ್ರಕ್ಕೆ ಭಯೋದ್ಪಾನೆ ಸಂಘಟನೆಗಳಿಂದ ಬಂಡವಾಳ ಬಂದಿದೆ. ದಯವಿಟ್ಟು ಇದನ್ನ ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಬೇಕೆಂದು ಮಹಿಪಾಲ್ ಸಿಂಗ್ ಮಕ್ರಾನ ಆಗ್ರಹಿಸಿದ್ದಾರೆ.
ಇದಕ್ಕು ಮುಂಚೆ 'ಪದ್ಮಾವತಿ' ಸಿನಿಮಾ ಬಿಡುಗಡೆಯಾದರೇ ದೀಪಿಕಾ ಪಡುಕೋಣೆ ಅವರ ಮೂಗು ಕತ್ತರಿಸುತ್ತೇವೆ. ಮತ್ತು ದೀಪಿಕಾ ಮತ್ತು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ತಲೆ ಕತ್ತರಿಸಿ ತಂದರೇ 5 ಕೋಟಿ ಬಹುಮಾನ ನೀಡುತ್ತೇವೆ ಎಂದು ರಜಪೂತ ಕರಣಿ ಸೇನೆ ಸದಸ್ಯರು ಬಹಿರಂಗವಾಗಿ ಹೇಳಿದ್ದರು.


Click it and Unblock the Notifications











