»   » 'ಲೈವ್ ಶೋ'ನಲ್ಲಿ 'ಪದ್ಮಾವತಿ' ವಿರುದ್ಧ ಖಡ್ಗ ಹೊರ ತೆಗೆದ ರಜಪೂತ

'ಲೈವ್ ಶೋ'ನಲ್ಲಿ 'ಪದ್ಮಾವತಿ' ವಿರುದ್ಧ ಖಡ್ಗ ಹೊರ ತೆಗೆದ ರಜಪೂತ

Posted By:
Subscribe to Filmibeat Kannada

'ಪದ್ಮಾವತಿ' ಚಿತ್ರದ ವಿರುದ್ಧ ದೇಶಾದ್ಯಂತ ರಜಪೂತ ಕರಣಿ ಸೇನೆ ಸದಸ್ಯರು ಹೋರಾಟ, ಪ್ರತಿಭಟನೆ ನಡೆಸುತ್ತಿದ್ದಾರೆ. ದಿನದಿಂದ ದಿನಕ್ಕೆ ರಜಪೂತರ ಆಕ್ರೋಶ ವಿಕೋಪಕ್ಕೆ ಹೋಗುತ್ತಿದ್ದು, ಭಯ ಹುಟ್ಟಿಸುವಂತಹ ಹೇಳಿಕೆಗಳು ನೀಡುತ್ತಿದ್ದಾರೆ.

ಈ ಮಧ್ಯೆ ಗುಜರಾತಿನ ರಜಪೂತ ಕರಣಿ ಸೇನೆ ಸದಸ್ಯರೊಬ್ಬ ಟಿವಿಯ ಲೈವ್ ಕಾರ್ಯಕ್ರಮದಲ್ಲಿ ತಮ್ಮ ಖಡ್ಗ ಹೊರ ತೆಗೆದು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ.

'ಪದ್ಮಾವತಿ' ವಿವಾದಕ್ಕೆ ಟ್ವಿಸ್ಟ್: ರಿಲೀಸ್ ದಿನಾಂಕ ಮುಂದಕ್ಕೆ ಹೋಯ್ತು.!

Karni Sena spokesperson pulled out a sword in live tv show

'ಪದ್ಮಾವತಿ' ಚಿತ್ರವನ್ನ ವಿರೋಧಿಸುತ್ತಿರುವುದೇಕೆ? ಎಂಬ ವಿಷ್ಯಕ್ಕೆ ಸಂಬಂಧಿಸಿದಂತೆ ಸುದ್ದಿ ವಾಹಿನಿಯಲ್ಲಿ ಚರ್ಚೆ ನಡೆಸಲಾಗುತ್ತಿತ್ತು. ಕಾರ್ಯಕ್ರಮದ ಮಧ್ಯೆ ರಜಪೂತ ವ್ಯಕ್ತಿ ತಾನು ತಂದಿದ್ದ ಖಡ್ಗ ಹೊರ ತೆಗೆದು ದೀಪಿಕಾ ಪಡುಕೋಣೆಯ ವಿರುದ್ಧ ಕಿಡಿ ಕಾರಿದರು. ಈ ನಡವಳಿಕೆಯನ್ನ ಪ್ರಶ್ನಿಸಿದ ನಿರೂಪಕ ನಂತರ ಖಡ್ಗವನ್ನ ಕೆಳಗೆ ಇಡಲು ಸೂಚಿಸಿ ಕಾರ್ಯಕ್ರಮ ಮುನ್ನಡೆಸಿದರು.

ದೀಪಿಕಾ ಪಡುಕೋಣೆ ತಲೆ ಕತ್ತರಿಸಿದ್ರೆ 5 ಕೋಟಿ ಬಹುಮಾನ

Karni Sena spokesperson pulled out a sword in live tv show

ಒಂದು ಕಡೆ 'ಪದ್ಮಾವತಿ' ಸಿನಿಮಾ ಅಭಿನಯಸಿದ್ದು ಹೆಮ್ಮೆ ಎಂದು ದೀಪಿಕಾ ಹೇಳುತ್ತಿದ್ದರೇ, ಮತ್ತೊಂದೆಡೆ ರಜಪೂತರು ದೀಪಿಕಾ ತಲೆಗೆ 5 ಕೋಟಿ ಬೆಲೆ ಕಟ್ಟಿದ್ದಾರೆ. ಈ ಎಲ್ಲ ಬೆಳವಣಿಗೆಗಳನ್ನ ಅರಿತ ಪೊಲೀಸರು ದೀಪಿಕಾ ಮತ್ತು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಗೆ ಭದ್ರತೆ ನೀಡಿದ್ದಾರೆ.

English summary
On Friday, one of the spokespersons of the Karni Sena, present in the private news channel studio, pulled out a sword and brandished it on live television. ಖಾಸಗಿ ಟಿವಿಯ ಲೈವ್ ಕಾರ್ಯಕ್ರಮದಲ್ಲಿ ರಜಪೂತ ಕರಣಿ ಸದಸ್ಯ ಖಡ್ಗ ಹೊರ ತೆಗೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada