'ಸರ್ದಾರ್' 2022ರಲ್ಲಿ ನೂರು ಕೋಟಿ ಕ್ಲಬ್ ಸೇರಿದ 29ನೇ ಚಿತ್ರ! ಶತಕ ಬಾರಿಸಿದ ಚಿತ್ರಗಳ ಪಟ್ಟಿ ಇಲ್ಲಿದೆ
2022 ಸಿನಿಮಾ ಕ್ಷೇತ್ರಕ್ಕೆ ಒಂದೊಳ್ಳೆ ವರ್ಷ ಎಂದೇ ಹೇಳಬಹುದು. ಏಕೆಂದರೆ ಕೊರೊನಾ ಲಾಕ್‌ಡೌನ್ ನಂತರ ಭಾರತ ಚಿತ್ರರಂಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು ಈ ವರ್ಷವೇ. ಅದರಲ್ಲಿಯೂ ವಿಶೇಷವಾಗಿ ದಕ್ಷಿಣ ಭಾರತದ ಪ್ರತಿಯೊಂದು ಚಿತ್ರರಂಗಗಳೂ ಸಹ ದೊಡ್ಡಮಟ್ಟದ ಯಶಸ್ಸು ಸಾಧಿಸಿವೆ. ವಿಶೇಷವಾಗಿ ಕನ್ನಡ ಚಿತ್ರರಂಗದ ಚಿತ್ರಗಳು ಈ ಬಾರಿ ಹೆಚ್ಚಾಗಿ ಅಬ್ಬರಿಸಿವೆ.
ಸದ್ಯ ವರ್ಷದ ಹನ್ನೊಂದನೇ ತಿಂಗಳು ನಡೆಯುತ್ತಿದ್ದು ಇಲ್ಲಿಯವರೆಗೆ ಬಿಡುಗಡೆಯಾದ ಭಾರತದ ಚಿತ್ರಗಳ ಪೈಕಿ ನೂರು ಕೋಟಿ ಕ್ಲಬ್ ಸೇರಿದ ಚಿತ್ರಗಳ ಸಂಖ್ಯೆ ಇಂದು ( ನವೆಂಬರ್ 8 ) 29ಕ್ಕೇರಿದೆ. ಹೌದು, ಈ ವರ್ಷ ಸ್ಯಾಂಡಲ್‌ವುಡ್, ಟಾಲಿವುಡ್, ಕಾಲಿವುಡ್, ಮಾಲಿವುಡ್ ಹಾಗೂ ಬಾಲಿವುಡ್ ಈ ಐದೂ ಚಿತ್ರರಂಗಗಳ ಚಿತ್ರಗಳೂ ಸಹ ನೂರು ಕೋಟಿ ಕ್ಲಬ್ ಚಿತ್ರಗಳನ್ನು ನೀಡಿವೆ.
ಅಕ್ಟೋಬರ್ 21ರಂದು ಬಿಡುಗಡೆಗೊಂಡ ಕಾರ್ತಿ ಅಭಿನಯದ ಸರ್ದಾರ್ ಚಿತ್ರ ಇಂದು ( ನವೆಂಬರ್ 8 ) ಕೋಟಿ ಕ್ಲಬ್ ಸೇರಿದ್ದು ಈ ವರ್ಷ ನೂರು ಕೋಟಿ ಕಲೆಹಾಕಿದ ಭಾರತದ 29ನೇ ಸಿನಿಮಾ ಎನಿಸಿಕೊಂಡಿದೆ, ಚಿತ್ರದ ನಿರ್ದೇಶಕ ಪಿ ಎಸ್ ಮಿಥುನ್ ಟ್ವಿಟರ್‌ನಲ್ಲಿ ನೂರು ಕೋಟಿ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಚಿತ್ರ ನೂರು ಕೋಟಿ ಕ್ಲಬ್ ಸೇರಿದೆ ಎಂಬುದನ್ನು ತಿಳಿಸಿದ್ದಾರೆ. ಹಾಗಿದ್ದರೆ ಸರ್ದಾರ್ ಸೇರಿದಂತೆ ಇಲ್ಲಿಯವರೆಗೂ ( ನವೆಂಬರ್ 8 ) ನೂರು ಕೋಟಿ ಕಲೆಕ್ಷನ್ ಮಾಡಿರುವ ಎಲ್ಲಾ 29 ಚಿತ್ರಗಳು ಯಾವುವು ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ..

ನೂರು ಕೋಟಿಗಿಂತ ಅಧಿಕ ಕಲೆಹಾಕಿದ ಎಲ್ಲಾ ಚಿತ್ರಗಳ ಪಟ್ಟಿ
1. ಕೆಜಿಎಫ್ ಚಾಪ್ಟರ್ 2 - 1250 ಕೋಟಿ
2. ಆರ್ಆರ್ಆರ್ - 1175 ಕೋಟಿ
3. ವಿಕ್ರಮ್ - 500 ಕೋಟಿ
4. ಪೊನ್ನಿಯಿನ್ ಸೆಲ್ವನ್ 1 - 482 ಕೋಟಿ ( ಇನ್ನೂ ಪ್ರದರ್ಶನಗೊಳ್ಳುತ್ತಿದೆ )
5. ಬ್ರಹ್ಮಾಸ್ತ್ರ - 431 ಕೋಟಿ
6. ದಿ ಕಾಶ್ಮೀರ್ ಫೈಲ್ಸ್ - 340.1 ಕೋಟಿ
7. ಕಾಂತಾರ - 340 ಕೋಟಿ ( ಇನ್ನೂ ಪ್ರದರ್ಶನಗೊಳ್ಳುತ್ತಿದೆ )
8. ಭೂಲ್ ಬುಲಯ್ಯಾ 2 - 266 ಕೋಟಿ
9. ಬೀಸ್ಟ್ - 243.5 ಕೋಟಿ
10. ಗಂಗೂಬಾಯಿ ಖಾತಿಯಾವಾಡಿ - 209.2 ಕೋಟಿ
11. ಸರ್ಕಾರು ವಾರಿ ಪಾಟ - 205 ಕೋಟಿ
12. ವಾಲಿಮೈ - 194.5 ಕೋಟಿ
13. ವಿಕ್ರಾಂತ್ ರೋಣ - 184.5 ಕೋಟಿ
14. ಭೀಮ್ಲಾ ನಾಯಕ್ - 180.5 ಕೋಟಿ
15. ರಾಧೆ ಶ್ಯಾಮ್ - 177.5 ಕೋಟಿ
16. ಜೇಮ್ಸ್ - 150.7 ಕೋಟಿ
17. ವಿಕ್ರಮ್ ವೇದಾ - 135.4 ಕೋಟಿ
18. ಜುಗ್ ಜುಗ್ ಜೀಯೋ - 135.2 ಕೋಟಿ
19. ಫನ್ ಅಂಡ್ ಫ್ರಸ್ರ್ಟೇಷನ್ 3 - 134 ಕೋಟಿ
20. ಲಾಲ್ ಸಿಂಗ್ ಛಡ್ಡಾ - 133.5 ಕೋಟಿ
21. ಕಾರ್ತಿಕೇಯ 2 - 118 ಕೋಟಿ
22. ಡಾನ್ - 117.7 ಕೋಟಿ
23. ತಿರುಚಿತ್ರಾಂಬಲಂ - 115 ಕೋಟಿ
24. ಈಟಿ - 110 ಕೋಟಿ
25. 777 ಚಾರ್ಲಿ - 105 ಕೋಟಿ
26. ಸೀತಾ ರಾಮಮ್ - 105 ಕೋಟಿ
27. ಗಾಡ್‌ಫಾದರ್ - 105 ಕೋಟಿ
28. ಭೀಷ್ಮ ಪರ್ವಮ್ - 100 ಕೋಟಿ
29. ಸರ್ದಾರ್ - 100 ಕೋಟಿ ( ಇನ್ನೂ ಪ್ರದರ್ಶನಗೊಳ್ಳಲಿದೆ )

ನೂರು ಕೋಟಿ ಗಳಿಸಿದ್ರೂ ನಷ್ಟ ಅನುಭವಿಸಿದ ಚಿತ್ರಗಳು
ನೂರು ಕೋಟಿ ಗಳಿಸಿಯೂ ನಷ್ಟ ಅನುಭವಿಸಿದ ಚಿತ್ರಗಳು
* ಆಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಛಡ್ಡಾ ಚಿತ್ರ 133.5 ಕೋಟಿ ಗಳಿಸಿತಾದರೂ 180 ಕೋಟಿ ಬಜೆಟ್‌ನಲ್ಲಿ ತಯಾರಾಗಿದ್ದ ಕಾರಣ ನಷ್ಟ ಅನುಭವಿಸಿತು.
* ಹಿಂದಿಯ ವಿಕ್ರಮ್ ವೇದಾ ಚಿತ್ರ 135 ಕೋಟಿ ಗಳಿಸಿತಾದರೂ 150 ಬಜೆಟ್‌ನಲ್ಲಿ ತಯಾರಾಗಿದ್ದ ಕಾರಣ ನಷ್ಟ ಅನುಭವಿಸಿತು.
* ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅಭಿನಯದ ರಾಧೆ ಶ್ಯಾಮ್ ಬಾಕ್ಸ್ ಆಫೀಸ್‌ನಲ್ಲಿ 177.5 ಕೋಟಿ ಗಳಿಸಿತಾದರೂ 300 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಕಾರಣ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿತು.

ನೂರು ಕೋಟಿ ಗಳಿಸಿದ ಕನ್ನಡ ಚಿತ್ರಗಳು
* ಕೆಜಿಎಫ್ ಚಾಪ್ಟರ್ 2 - 1250 ಕೋಟಿ
* ಕಾಂತಾರ - 340 ಕೋಟಿ
* ವಿಕ್ರಾಂತ್ ರೋಣ - 184.5 ಕೋಟಿ
* ಜೇಮ್ಸ್ - 150.7 ಕೋಟಿ
* 777 ಚಾರ್ಲಿ - 105 ಕೋಟಿ
( ಈ ಎಲ್ಲಾ ಕಲೆಕ್ಷನ್ ವರದಿ ಐಎಂಡಿಬಿ ಆಧಾರಿತವಾಗಿದೆ )


Click it and Unblock the Notifications











