For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್ 2' ತೆಲುಗು ರೈಟ್ಸ್ 40 ಕೋಟಿಗೆ ಸೇಲ್: ಇದು ಸುಳ್ಳು ಸುದ್ದಿ

  |

  'ಕೆಜಿಎಫ್ 2' ಸಿನಿಮಾದ ಬಗ್ಗೆ ಸುದ್ದಿಯೊಂದು ಇಂದು ಹೊರಬಂದಿತ್ತು. ಸಿನಿಮಾದ ತೆಲುಗು ರೈಟ್ಸ್ ಬರೋಬ್ಬರಿ 40 ಕೋಟಿಗೆ ಮಾರಾಟ ಆಗಿದೆ ಎಂಬುದು ಸುದ್ದಿಯಾಗಿತ್ತು.

  ಆದರೆ, ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿ ಹರಿದಾಡಿದ ಈ ಸುದ್ದಿ ಈಗ ಸುಳ್ಳು ಎಂದು ತಿಳಿದುಬಂದಿದೆ. ಸಿನಿಮಾದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇದು ಸುಳ್ಳು ಎಂದು ಕಾರ್ತಿಕ್ ಟ್ವೀಟ್ ಮಾಡಿದ್ದಾರೆ.

  ಸಂಭಾವನೆ ವಿಚಾರಕ್ಕೆ 'ಕೆಜಿಎಫ್ 2' ತಿರಸ್ಕರಿಸಿದ್ದ ಖ್ಯಾತ ನಟಿಸಂಭಾವನೆ ವಿಚಾರಕ್ಕೆ 'ಕೆಜಿಎಫ್ 2' ತಿರಸ್ಕರಿಸಿದ್ದ ಖ್ಯಾತ ನಟಿ

  'ಕೆಜಿಎಫ್ 2' ತೆಲುಗು ವರ್ಷನ್ ಗೆ 30 ಕೋಟಿ ಆಫರ್ ಬಂದಿತ್ತು. ಆದರೆ ನಿರ್ಮಾಪಕರು 40 ಕೋಟಿಗೂ ಕಮ್ಮಿ ಸೇಲ್ ಮಾಡುದಿಲ್ಲ ಎಂದು ಪಟ್ಟು ಹಿಡಿದು 40 ಕೋಟಿಗೆ ಮಾರಾಟ ಮಾಡಿದ್ದಾರೆ ಎನ್ನುವ ಗಾಳಿ ಸುದ್ದಿ ಹಬ್ಬಿತ್ತು.

  'ಕೆಜಿಎಫ್ 2' ಸಿನಿಮಾದ ಚಿತ್ರೀಕರಣ ಸದ್ಯ ನಡೆಯುತ್ತಿದೆ. ಯಶ್ ಹಾಗೂ ರವಿನಾ ಟಂಡನ್ ಭಾಗದ ದೃಶ್ಯದ ಶೂಟಿಂಗ್ ಸಾಗುತ್ತದೆ. 20 ವರ್ಷಗಳ ನಂತರ ಮತ್ತೆ ರವಿನಾ ಕಮ್ ಬ್ಯಾಕ್ ಮಾಡಿದ್ದಾರೆ. ಸಂಜಯ್ ದತ್ ಅಧೀರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

   'KGF-2': 'ರಮಿಕಾ ಸೇನ್' ಜೊತೆ ಮೊದಲ ಫೋಟೋ ಹಂಚಿಕೊಂಡ ರಾಕಿಭಾಯ್ ಹೇಳಿದ್ದೇನು? 'KGF-2': 'ರಮಿಕಾ ಸೇನ್' ಜೊತೆ ಮೊದಲ ಫೋಟೋ ಹಂಚಿಕೊಂಡ ರಾಕಿಭಾಯ್ ಹೇಳಿದ್ದೇನು?

  ಯಶ್, ಶ್ರೀನಿಧಿ ಶೆಟ್ಟಿ ಸಿನಿಮಾ ನಾಯಕ, ನಾಯಕಿ. ಪ್ರಶಾಂತ್ ನೀಲ್ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಿನಿಮಾದ ನಿರ್ಮಾಣ ಮಾಡಿದೆ.

  English summary
  Producer Karthik Gowda gave clarification about Kannada Actor Yash starrer KGF 2 telugu version right.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X