ರಾಕಿಂಗ್ ಸ್ಟಾರ್ ಯಶ್ 'ಟಾಕ್ಸಿಕ್' ತಂಡ ಸೇರಿದ ಪ್ರಮೋಷನ್, ಮಾರ್ಕೆಟಿಂಗ್ ಮಾಸ್ಟರ್ ಮೈಂಡ್

ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಕೆಲಸಗಳು ಆರಂಭವಾಗಿದೆ. ಶೀಘ್ರದಲ್ಲೇ ಸಿನಿಮಾ ಪ್ರಮೋಷನ್ ಶುರುವಾಗಲಿದೆ. ಆಂಧ್ರ, ತೆಲಂಗಾಣ ಡಿಸ್ಟ್ರಿಬ್ಯೂಷನ್ ರೈಟ್ಸ್ ದಾಖಲೆ ಬೆಲೆಗೆ ಮಾರಾಟವಾಗಿದೆ. ದಿಲ್ ರಾಜು 120 ಕೋಟಿ ರೂ.ಗೂ ರೈಟ್ಸ್ ಖರೀದಿಸಿದ್ದಾರೆ.

ಒಂದು ಸಿನಿಮಾ ನಿರ್ಮಿಸುವುದು ಮಾತ್ರವಲ್ಲ, ಮಾರ್ಕೆಟಿಂಗ್, ಪ್ರಮೋಷನ್ ಕೂಡ ಅಷ್ಟೇ ಮುಖ್ಯ. 'ಟಾಕ್ಸಿಕ್' ಚಿತ್ರದ ಮಾರ್ಕೆಟಿಂಗ್, ರಿಲೀಸ್ ದೊಡ್ಡಮಟ್ಟದಲ್ಲಿ ಮಾಡಲಾಗ್ತಿದೆ. ಅದಕ್ಕಾಗಿ ಆಯಾ ವಿಚಾರಗಳಲ್ಲಿ ಪರಿಣಿತರನ್ನು ಯಶ್ ಅಖಾಡಕ್ಕೆ ಇಳಿಸುತ್ತಿದ್ದಾರೆ. ಹೀರೊ ಆಗಿ ನಟಿಸೋದು ಮಾತ್ರವಲ್ಲ ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕಿ ಗೀತು ಮೋಹನ್ ದಾಸ್ ಜೊತೆ ಸೇರಿ ಚಿತ್ರಕಥೆ ರಚಿಸಿದ್ದಾರೆ.

Karthik Gowda Joins Yash s Toxic Team as 120 Crore AP-TG Deal Sparks Massive Pan-India Buzz

ಯಾವುದೇ ಪ್ಯಾನ್ ಇಂಡಿಯಾ ಈವರೆಗೆ ಬಹುಕೋಟಿ ವೆಚ್ಚದ ಚಿತ್ರಕ್ಕಾಗಿ ಇಷ್ಟರಮಟ್ಟಿಗೆ ತಮ್ಮನ್ನು ತೊಡಗಿಸಿಕೊಂಡಿರಲಿಲ್ಲ. 'ಕೆಜಿಎಫ್‌- 2 ಬಳಿಕ ವಾಟ್ ನೆಕ್ಸ್ಟ್ ಎನ್ನುವವರಿಗೆಲ್ಲಾ ಯಶ್ ಉತ್ತರ ಕೊಡಬೇಕಿದೆ. ಅದು 'ಕೆಜಿಎಫ್' ಸರಣಿಯನ್ನು ಮರೆಸುವಂತಿರಬೇಕು. ಹಾಗಾಗಿ 'ಟಾಕ್ಸಿಕ್' ಚಿತ್ರದ ಪ್ರತಿಹಂತದಲ್ಲಿ ಯಶ್ ನಿಂತಿದ್ದಾರೆ. ತಮಗೆ ಬೇಕಾದಂತೆ ಸಿನಿಮಾ ತಿದ್ದಿ ತೀಡಿರುವುದು ಮಾತ್ರವಲ್ಲ, ಪ್ರಮೋಷನ್ ಹಾಗೂ ಬಿಡುಗಡೆ ವಿಚಾರದಲ್ಲೂ ಅಷ್ಟೇ ಕೇರ್ ತೆಗೆದುಕೊಳ್ಳುತ್ತಿದ್ದಾರೆ. ಕನ್ನಡದಲ್ಲಿ ಮಾತ್ರ ಬಿಡುಗಡೆಗೆ ಮುಂದಾಗಿದ್ದ 'ಕೆಜಿಎಫ್' ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟಕ್ಕೆ ಕೊಂಡೊಯ್ದಿದ್ದು ಇದೇ ರಾಕಿಂಗ್ ಸ್ಟಾರ್ ಎನ್ನುವುದು ಗೊತ್ತೇಯಿದೆ.

ಸದ್ಯ 'ಟಾಕ್ಸಿಕ್' ತಂಡಕ್ಕೆ ಕಾರ್ತಿಕ್ ಗೌಡ ಸೇರ್ಪಡೆಯಾಗಿದೆ. ಹೊಂಬಾಳೆ ಫಿಲ್ಮ್ಸ್ ಸಕ್ಸಸ್‌ನಲ್ಲಿ ಕಾರ್ತಿಕ್ ಗೌಡ ಪಾಲು ಇದೆ. ಆದರೆ ಬಳಿಕ ಕೆಆರ್‌ಜಿ ಸ್ಟುಡಿಯೋಸ್ ಎಂಬ ಸಂಸ್ಥೆ ಕಟ್ಟಿಕೊಂಡು ಸಿನಿಮಾ ನಿರ್ಮಾಣ, ವಿತರಣೆಗೆ ಕಾರ್ತಿಕ್ ಕೈ ಹಾಕಿದ್ದರು. ಇವತ್ತಿಗೂ ತಮ್ಮ ಬ್ಯಾನರ್‌ಗಳಲ್ಲಿ ಸದಭಿರುಚಿ ಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಜೊತೆಗೆ 'ಟಾಕ್ಸಿಕ್' ತಂಡದ ಜೊತೆಗೂ ಕೈ ಜೋಡಿಸಿದ್ದಾರೆ.

ಕಾರ್ತಿಕ್ ಗೌಡ ತಮ್ಮ ಟ್ವಿಟರ್ ಬಯೋದಲ್ಲಿ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್‌‌ ಎಂದು ಬರೆದುಕೊಂಡಿದ್ದಾರೆ. 'ಟಾಕ್ಸಿಕ್' ಚಿತ್ರದ ಆಂಧ್ರ, ತೆಲಂಗಾಣ ರೈಟ್ಸ್ ಮಾರಾಟದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. 'ಟಾಕ್ಸಿಕ್' ತಂಡ ಸೇರಿದ್ದಕ್ಕೆ ಅಭಿನಂದನೆ ತಿಳಿಸುತ್ತಿದ್ದಾರೆ. 'ಕೆಜಿಎಫ್' ಸರಣಿ ಸಿನಿಮಾಗಳ ಬ್ಯುಸಿನೆಸ್‌ನಲ್ಲಿ ಕಾರ್ತಿಕ್ ಮಹತ್ವದ ಪಾತ್ರ ವಹಿಸಿದ್ದರು. ಇದೀಗ 'ಟಾಕ್ಸಿಕ್' ಚಿತ್ರದ ಪ್ರಮೋಷನ್ಸ್, ಬ್ಯುಸಿನೆಸ್‌‌ ಪ್ಲ್ಯಾನ್‌ಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ.

2000 ಸಾವಿರ ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಮಾಡಿ 'ಟಾಕ್ಸಿಕ್' ಸಿನಿಮಾ ತೆರೆಗೆ ತರಲಾಗ್ತಿದೆ. ಅದಕ್ಕೆ ತಕ್ಕಂತೆ ಮಾರ್ಕೆಟಿಂಗ್, ಬ್ಯುಸಿನೆಸ್ ನಡೆಯಬೇಕಿದೆ. ಕಳೆದೊಂದು ವಾರದಿಂದ ಮುಂಬೈನಲ್ಲಿ ಕಾರ್ತಿಕ್ ಗೌಡ ಉಳಿದುಕೊಂಡಿದ್ದು 'ಟಾಕ್ಸಿಕ್' ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ ಎನ್ನಲಾಗ್ತಿದೆ. ಕೇರಳದಲ್ಲಿ ಸಂಗೀತಾ ಜನಚಂದ್ರನ್ ಎಂಬುವವರು 'ಟಾಕ್ಸಿಕ್' ಚಿತ್ರದ ಮಾರ್ಕೆಟಿಂಗ್ ನೋಡಿಕೊಳ್ಳುತ್ತಿದ್ದಾರೆ. ಹೀಗೆ ಘಟಾನುಘಟಿಗಳು ಚಿತ್ರದ ಪ್ರಮೋಷನ್ ಹಾಗೂ ಬಿಡುಗಡೆಗೆ ಸಾಥ್ ಕೊಡುತ್ತಿದ್ದಾರೆ.

ಮಾರ್ಚ್ 19ಕ್ಕೆ 'ಟಾಕ್ಸಿಕ್' ಸಿನಿಮಾ ತೆರೆಗೆ ಬರಲಿದೆ. ದೇಶ ವಿದೇಶಗಳಲ್ಲಿ ಏಕಕಾಲಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಹಾಲಿವುಡ್ ತಂತ್ರಜ್ಞರು, ಕಲಾವಿದರು ಚಿತ್ರಕ್ಕೆ ಕೆಲಸ ಮಾಡಿದ್ದು ವಿದೇಶಗಳಲ್ಲಿ ದೊಡ್ಡಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರನ್ನು ತಲುಪಲಿದೆ. ಯಶ್ ಜೊತೆಗೆ ನಯನತಾರಾ, ಕಿಯಾರಾ ಅದ್ವಾನಿ, ರುಕ್ಮಿಣಿ ವಸಂತ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ.

'ಧುರಂಧರ್- 2' ಎದುರು 'ಟಾಕ್ಸಿಕ್' ಸಿನಿಮಾ ಬಾಕ್ಸಾಫೀಸ್ ಕದನಕ್ಕೆ ಇಳಿಯಲಿದೆ. ಈದ್, ಯುಗಾದಿ ಹಬ್ಬದ ರಜೆ 'ಟಾಕ್ಸಿಕ್' ಚಿತ್ರದ ಗಳಿಕೆಗೆ ವರವಾಗುವ ನಿರೀಕ್ಷೆಯಿದೆ. ಸದ್ಯ ಬರೀ ಟೀಸರ್‌ನಿಂದಲೇ ಸಿನಿಮಾ ಇನ್ನಿಲ್ಲದ ಹೈಪ್ ಕ್ರಿಯೇಟ್ ಮಾಡಿದೆ. ಶೀಘ್ರದಲ್ಲೇ ಫಸ್ಟ್ ಸಾಂಗ್ ರಿಲೀಸ್ ಆಗುವ ನಿರೀಕ್ಷೆಯಿದೆ.

More from Filmibeat

Read more about: yash toxic nayanthara
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X