ಕೆಜಿಎಫ್ ಕ್ಲೈಮ್ಯಾಕ್ಸ್ ಅನುಭವವನ್ನು ಫೋಟೋ ಮೂಲಕ ಹಂಚಿಕೊಂಡ ಕಾರ್ತಿಕ್
ಭಾರತೀಯ ಚಿತ್ರರಂಗದ ಬಹುನಿರೀಕ್ಷೆಯ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಪ್ರಸ್ತುತ ಹೈದರಾಬಾದ್‌ನ ರಾಮೋಜಿ ರಾವ್ ಫಿಲಂ ಸಿಟಿಯಲ್ಲಿ ಕೆಜಿಎಫ್ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಯುತ್ತಿದೆ.
Recommended Video
ನಟ ಯಶ್ ಮತ್ತು ಸಂಜಯ್ ದತ್ ನಡುವಿನ ಅಂತಿಮ ಫೈಟ್ ದೃಶ್ಯ ಚಿತ್ರೀಕರಣ ನಡೆಯುತ್ತಿದೆ. ಈ ಕುರಿತು ಸ್ವತಃ ಚಿತ್ರತಂಡ ಮಾಹಿತಿ ನೀಡಿತ್ತು. ರಾಕಿ ಭಾಯ್ ಮತ್ತು ಅಧೀರನ ಫೈಟ್ ಸೆರೆ ಹಿಡಿಯುವುದಕ್ಕೆ ವೇದಿಕೆ ಸಜ್ಜಾಗಿದೆ ಎಂದು ಫೋಟೋ ಹಂಚಿಕೊಂಡಿದ್ದರು.
ಇದೀಗ, ಕೆಜಿಎಫ್ ಕ್ಲೈಮ್ಯಾಕ್ಸ್ ಚಿತ್ರೀಕರಣ ಹೇಗೆ ನಡೆಯುತ್ತಿದೆ ಎನ್ನುವುದರ ಒಂದು ಝಲಕ್ ಸಿಕ್ಕಿದೆ. ಚಿತ್ರದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಕೆಜಿಎಫ್ ಕ್ಲೈಮ್ಯಾಕ್ಸ್ ಶೂಟಿಂಗ್ ಅನುಭವವನ್ನು ಒಂದು ಟೀ-ಶರ್ಟ್ ಮೂಲಕ ತಿಳಿಸಿದ್ದಾರೆ.

ಕೆಜಿಎಫ್ ಕ್ಲೈಮ್ಯಾಕ್ಸ್ ಸೆಟ್‌ಗೆ ಭೇಟಿ ನೀಡಿದ ಕಾರ್ತಿಕ್ ಗೌಡ ಬಿಳಿ ಬಣ್ಣದ ಟಿ-ಶರ್ಟ್ ಧರಿಸಿದ್ದರಂತೆ. ಸೆಟ್‌ಗೆ ಹೋದಾಗ ನಟ ಯಶ್ ಮತ್ತು ಸಂಜಯ್ ದತ್ ಅವರು ಪ್ರೀತಿಯಿಂದ ತಬ್ಬಿಕೊಂಡರಂತೆ. ಈ ಇಬ್ಬರು ನಟರನ್ನು ತಬ್ಬಿಕೊಂಡು ಸೆಟ್‌ನಿಂದ ಹೊರಬಂದ ಮೇಲೆ ಅವರ ಟಿ-ಶರ್ಟ್ ಪೂರ್ತಿ ಧೂಳಿನಿಂದ ತುಂಬಿಕೊಂಡಿದೆ. ಈ ಫೋಟೋ ಹಂಚಿಕೊಂಡಿದ್ದಾರೆ.
ಈ ಫೋಟೋ ಚಿತ್ರದ ಬಗ್ಗೆ ಮತ್ತಷ್ಟು ಥ್ರಿಲ್ ಹೆಚ್ಚಿಸಿಕೊಂಡಿದ್ದಾರೆ ಅಭಿಮಾನಿಗಳು. ಕೆಜಿಎಫ್ ಟೀಸರ್ ಬಿಡುಗಡೆ ಮಾಡಿ, ಅಪ್‌ಡೇಟ್ ಕೊಡಿ ಎಂದು ಒತ್ತಾಯಿಸುತ್ತಿದ್ದಾರೆ.
ಡಿಸೆಂಬರ್ ತಿಂಗಳಿನಲ್ಲಿ ಕೆಜಿಎಫ್ ಚಿತ್ರೀಕರಣ ಸಂಪೂರ್ಣವಾಗಿ ಮುಗಿಯಲಿದೆ. ಜನವರಿಯಿಂದ ಬಾಕಿ ಉಳಿದಿರುವ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯಲಿದೆ. ಸದ್ಯಕ್ಕೆ ಬಿಡುಗಡೆ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಬೇಸಿಗೆ ರಜೆಗೆ ಸಿನಿಮಾ ತೆರೆಗೆ ಬರಬಹುದು ಎಂದು ಚಿತ್ರಪ್ರೇಮಿಗಳು ನಿರೀಕ್ಷಿಸುತ್ತಿದ್ದಾರೆ.


Click it and Unblock the Notifications











