'ಕೆಜಿಎಫ್' ಕಾರ್ತಿಕ್ ಗೌಡ ಕಚೇರಿಯಲ್ಲಿ ಅಪರೂಪದ ಕಾರ್ಟೂನ್

ಕಾರ್ತಿಕ್ ಗೌಡ 'ಕೆಜಿಎಫ್' ಸಿನಿಮಾದ ಕಾರ್ಯಕಾರಿ ನಿರ್ಮಾಪಕ. ಅದರ ಜೊತೆಗೆ ಇತ್ತೀಚಿಗೆ ಅನೇಕ ಸಿನಿಮಾಗಳನ್ನು ಅವರು ತಮ್ಮ ಕೆ ಆರ್ ಜಿ ಸ್ಟೂಡಿಯೊ ಮೂಲಕ ವಿತರಣೆ ಮಾಡಿದ್ದಾರೆ. ಅಂದಹಾಗೆ, ಕಾರ್ತಿಕ್ ಗೌಡ ಕಚೇರಿಯಲ್ಲಿ ಇರುವ ಒಂದು ಕಾರ್ಟೂನ್ ಇದೀಗ ಆಕರ್ಷಣೆಗೆ ಕಾರಣವಾಗಿದೆ.

ಕನ್ನಡ ಚಿತ್ರರಂಗದ ದಿಗ್ಗಜರನ್ನು ಒಂದೇ ಫ್ರೇಮ್ ನಲ್ಲಿ ಕಾರ್ಟೂನ್ ಆಗಿ ಚಿತ್ರರೂಪಕ್ಕೆ ತರಲಾಗಿದೆ. ಕರಾಟೆ ಕಿಂಗ್ ಶಂಕರ್ ನಾಗ್, ಕ್ರೇಜಿಸ್ಟಾರ್ ರವಿಚಂದ್ರನ್, ನಿರ್ದೇಶಕ ರಾಜೇಂದ್ರಸಿಂಗ್ ಬಾಬು, ನಿರ್ಮಾಪಕ ದ್ವಾರಕೀಶ್, ವೀರಸ್ವಾಮಿ, ಕೆಸಿಎನ್ ಗೌಡರು, ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಹಾಗೂ ವರನಟ ಡಾ.ರಾಜಕುಮಾರ್ ಈ ಚಿತ್ರದಲ್ಲಿ ಇದ್ದಾರೆ.

Recommended Video

ಬಾಹುಬಲಿ ಪ್ರಭಾಸ್ ಅಪ್ಪಟ ಅಭಿಮಾನಿ ಮಾಡಿರೋ ಕೆಲಸ ನೋಡಿ | FIlmibeat Kannada

ಚಿತ್ರರಂಗದವನ್ನು ಮತ್ತೊಂದು ಎತ್ತರಕ್ಕೆ ತೆಗೆದುಕೊಂಡು ಹೋದ ನಟ, ನಿರ್ದೇಶಕ ಹಾಗೂ ನಿರ್ಮಾಪಕರ ಚಿತ್ರವನ್ನು ತಮ್ಮ ಕಛೇರಿಯಲ್ಲಿ ಹಾಕುವ ಮೂಲಕ ಅದರಿಂದ ಕಾರ್ತಿಕ್ ಸ್ಫೂರ್ತಿ ಪಡೆಯುತ್ತಿದ್ದಾರೆ. ಅಂದಹಾಗೆ, ಈ ಕಾರ್ಟೂನ್ ಅನ್ನು ಸತೀಶ್ ಆಚಾರ್ಯ ಬರೆದಿದ್ದಾರೆ.

Karthik Gowda Shares A Beautiful Cartoon Picture

ದಿಗ್ಗಜರ ಅಪರೂಪದ ಕಾರ್ಟೂನ್ ಅನ್ನು ಕಾರ್ತಿಕ್ ಗೌಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಸುಂದರ ಕಾರ್ಟೂನ್ ಅಭಿಮಾನಿಗಳ ಮೆಚ್ಚುಗೆ ಕಾರಣವಾಗಿದೆ.

Karthik Gowda Shares A Beautiful Cartoon Picture

'ಕೆಜಿಎಫ್' ನಂತರ ಕಾರ್ತಿಕ್ ಗೌಡ 'ದೇವಕಿ', 'ಪೈಲ್ವಾನ್' ಸೇರಿದಂತೆ ಅನೇಕ ಸಿನಿಮಾಗಳನ್ನು ವಿತರಣೆ ಮಾಡಿದ್ದಾರೆ. ಸದ್ಯ, 'ಯುವರತ್ನ' ಹಾಗೂ 'ಕೆಜಿಎಫ್ 2' ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.

More from Filmibeat

English summary
'KGF' distributor Karthik Gowda shares a beautiful cartoon picture in his twetter account.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X