300 ಕೋಟಿ ಬಜೆಟ್ ಸಿನಿಮಾದಲ್ಲಿ ಸುದೀಪ್ : ಕ್ರಿಕೆಟರ್ ಆಗ್ತಾರೆ ಕಿಚ್ಚ

ಸುದೀಪ್ ಒಳ್ಳೆಯ ನಟ ಮಾತ್ರವಲ್ಲ ಒಳ್ಳೆಯ ಕ್ರಿಕೆಟರ್. ಇದನ್ನು ಈಗಾಗಲೇ ಅವರು ಸಾಕಷ್ಟು ಬಾರಿ ಸಾಬೀತು ಮಾಡಿದ್ದಾರೆ. ಇಷ್ಟು ದಿನ ಮೈದಾನದಲ್ಲಿ ಕ್ರಿಕೆಟ್ ಆಡಿದ್ದ ಸುದೀಪ್ ಈಗ ಪರದೆ ಮೇಲೆ ಕ್ರಿಕೆಟ್ ಆಡಲು ಸಿದ್ಧವಾಗುತ್ತಿದ್ದಾರೆ.

Recommended Video

Pailwaan movie : 'ಪೈಲ್ವಾನ್' ಸಿನಿಮಾ ವೀಕ್ಷಿಸುವ ಆಸೆ ವ್ಯಕ್ತಪಡಿಸಿದ ಸಲ್ಮಾನ್ ಖಾನ್ | FILMIBEAT KANNADA

ಸಿ ಸಿ ಎಲ್ ಕಪ್ ಗೆದ್ದು, ಲಾರ್ಡ್ ಮೈದಾನದಲ್ಲೂ ಕ್ರಿಕೆಟ್ ಆಡಿದ ಸುದೀಪ್, ಇದೀಗ ಕ್ರಿಕೆಟ್ ಬಗ್ಗೆಯೇ ಸಿನಿಮಾ ಮಾಡುತ್ತಿದ್ದಾರೆ. 'ಪೈಲ್ವಾನ್' ಸಿನಿಮಾದ ಮೂಲಕ ಕುಸ್ತಿ ಪಟುವಾಗಿ ಕಾಣಿಸಿಕೊಂಡ ರನ್ನ ಮುಂದೆ ಕ್ರಿಕೆಟ್ ಆಟಗಾರ ಆಗಲಿದ್ದಾರೆ.

ಮತ್ತೊಂದು ವಿಶೇಷ ಏನೆಂದರೆ, ಸುದೀಪ್ ಅವರ ಈ ಸಿನಿಮಾ ಬರೋಬ್ಬರಿ 300 ಕೋಟಿ ಬಜೆಟ್ ನಲ್ಲಿ ನಿರ್ಮಾಣ ಆಗಲಿದೆ. ಅಂದಹಾಗೆ, ಇಂತಹ ದೊಡ್ಡ ಸಿನಿಮಾಗೆ ಹಣ ಹಾಕುವ ನಿರ್ಮಾಪಕರು ಯಾರು ಎನ್ನುವ ವಿಷಯ ಕೂಡ ಬಹಿರಂಗವಾಗಿದೆ.

ಕಾರ್ತಿಕ್ ಗೌಡ ನಿರ್ಮಾಣ

ಕಾರ್ತಿಕ್ ಗೌಡ ನಿರ್ಮಾಣ

'ಕೆಜಿಎಫ್' ಸಿನಿಮಾ ಖ್ಯಾತಿಯ ಕಾರ್ತಿಕ್ ಗೌಡ ಇದೀಗ 'ಪೈಲ್ವಾನ್' ಚಿತ್ರದ ವಿತರಣೆ ಮಾಡುತ್ತಿದ್ದಾರೆ. ಸುದೀಪ್ ಚಿತ್ರದ ಹಂಚಿಕೆಯ ಜೊತೆಗೆ ಅವರಿಗಾಗಿ ಮುಂದೆ ಒಂದು ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ದೊಡ್ಡ ಬಂಡವಾಳವನ್ನು ಕಿಚ್ಚನ ಸಿನಿಮಾಗೆ ಹಾಕುತ್ತಿದ್ದಾರೆ. ಈ ಸಿನಿಮಾದ ಬಜೆಟ್ 200 - 300 ಕೋಟಿ ಆಗಿರಲಿದೆಯಂತೆ.

ಇದು ಕನ್ನಡದ ಅತಿ ದೊಡ್ಡ ಬಜೆಟ್

ಇದು ಕನ್ನಡದ ಅತಿ ದೊಡ್ಡ ಬಜೆಟ್

200 - 300 ಕೋಟಿ ಬಜೆಟ್ ನಲ್ಲಿ ಸಿನಿಮಾವನ್ನು ನಿರ್ಮಾಣ ಮಾಡುವ ತಯಾರಿ ನಡೆದಿದೆ. 300 ಕೋಟಿಯಲ್ಲಿ ಚಿತ್ರ ನಿರ್ಮಾಣ ಆದ್ರೆ, ಕನ್ನಡದಲ್ಲಿ ಒಂದು ದಾಖಲೆ ಆಗಲಿದೆ. ಈವರೆಗೆ 'ಕೆಜಿಎಫ್' ಅತಿ ಹೆಚ್ಚು ಬಜೆಟ್ ನಲ್ಲಿ ತಯಾರಾದ ಸಿನಿಮಾ ಆಗಿದ್ದು, ಮುಂದೆ 300 ಕೋಟಿಯ ಸಿನಿಮಾ ಬಂದರೆ, ಈ ಚಿತ್ರ ಹೊಸ ದಾಖಲೆ ಆಗಲಿದೆ.

ಕ್ರಿಕೆಟರ್ ಪಾತ್ರದಲ್ಲಿ ಕಿಚ್ಚ ಸುದೀಪ್

ಕ್ರಿಕೆಟರ್ ಪಾತ್ರದಲ್ಲಿ ಕಿಚ್ಚ ಸುದೀಪ್

ಬಜೆಟ್ ಜೊತೆಗೆ ಸುದೀಪ್ ಮಾಡುತ್ತಿರುವ ಪಾತ್ರದ ಮೇಲೆಯೂ ನಿರೀಕ್ಷೆ ಹುಟ್ಟಿಕೊಂಡಿದೆ. ಮೊದಲ ಬಾರಿಗೆ ಕ್ರಿಕೆಟ್ ಆಟಗಾರನ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೆ ನೋಡಿದರೆ, ಕನ್ನಡದಲ್ಲಿ ಕ್ರಿಕೆಟ್ ಬಗ್ಗೆ ಬಂದ ಸಿನಿಮಾಗಳು ತೀರ ಕಡಿಮೆ. ಸದ್ಯ ತೆಲುಗಿನಲ್ಲಿ ಕ್ರಿಕೆಟ್ ಬಗ್ಗೆ ಬಂದ 'ಜರ್ಸಿ', ಹಿಂದಿಯಲ್ಲಿಯೂ ರಿಮೇಕ್ ಆಗುತ್ತಿದೆ.

ಸಿನಿಮಾದ ಬಗ್ಗೆ ಸುಳಿವು ನೀಡಿದ ಸುದೀಪ್

ಸಿನಿಮಾದ ಬಗ್ಗೆ ಸುಳಿವು ನೀಡಿದ ಸುದೀಪ್

ನಿನ್ನೆ (ಸಪ್ಟೆಂಬರ್ 10) 'ಪೈಲ್ವಾನ್' ಸಿನಿಮಾ ಪ್ರಿ ರಿಲೀಸ್ ಕಾರ್ಯಕ್ರಮ ನಡೆಯಿತು. ಈ ವೇಳೆ ಸುದೀಪ್ ಗೆ ''ಕ್ರಿಕೆಟ್ ಬಗ್ಗೆ ಸಿನಿಮಾ ಮಾಡುತ್ತೀರಾ?'' ಎನ್ನುವ ಪ್ರಶ್ನೆ ಬಂತು. ಆಗ ಸುದೀಪ್ ತಾವೇ ಈ ಬಿಗ್ ಬಜೆಟ್ ಚಿತ್ರದ ಬಗ್ಗೆ ಸುಳಿವು ನೀಡಿದರು. ಕಾರ್ತಿಕ್ ಗೌಡರನ್ನು ತೋರಿಸಿ, ಇವರು ಹೇಳಿದಾಗ ಸಿನಿಮಾ ಶುರು ಆಗುತ್ತದೆ ಎಂದರು.

More from Filmibeat

English summary
Producer Karthik Gowda will be producing a 300 crore movie to Sudeep. The movie will be based on cricket.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X