ಐರಾವನ್ ಸಿನಿಮಾ ಆರಂಭಿಸಿದ ನಟ ಕಾರ್ತಿಕ್ ಜಯರಾಂ
ಕಿರುತೆರೆ ಸೂಪರ್ ಸ್ಟಾರ್ ಕಾರ್ತಿಕ್ ಜಯರಾಂ ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಲಾಕ್‌ಡೌನ್ ಬಳಿಕ ಮತ್ತೆ ಶೂಟಿಂಗ್‌ಗೆ ಹಿಂತಿರುಗಿರುವ ಜೆಕೆ ಅಧಿಕೃತವಾಗಿ ಹೊಸ ಚಿತ್ರ ಶುರು ಮಾಡಿದ್ದಾರೆ.
ನವೆಂಬರ್ 8 ರಂದು (ಭಾನುವಾರ) ಗವಿಪುರದ ಕಾಲಬೈರವೇಶ್ವರ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿದೆ. ಚಿತ್ರದ ಮೊದಲ ದೃಶ್ಯಕ್ಕೆ ನಿರಂತರ ಗಣೇಶ್ ಅವರು ಕ್ಲಾಪ್ ಮಾಡಿದ್ದಾರೆ.
ಜೆಕೆ ನಟಿಸುತ್ತಿರುವ ಹೊಸ ಸಿನಿಮಾದ ಹೆಸರು ಐರಾವನ್. ನಿರಂತರ ಗಣೇಶ್ ಅವರು ನಿರಂತರ ಪ್ರೊಡಕ್ಷನ್‌ನಲ್ಲಿ ಈ ಚಿತ್ರ ನಿರ್ಮಿಸುತ್ತಿದ್ದು, ರಾಮ್ಸ್ ರಂಗಾ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ.

ಸಸ್ಪೆನ್ಸ್ ಥ್ರಿಲ್ಲಿಂಗ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಪ್ರದೀಪ್ ವರ್ಮಾ ಸಂಗೀತ ನೀಡುತ್ತಿದ್ದಾರೆ. ದೇವೇಂದ್ರ ಛಾಯಾಗ್ರಹಣ ಇದೆ. ಕೆ.ಎಂ.ಪ್ರಕಾಶ್ ಸಂಕಲನ ಒಳಗೊಂಡಿದೆ.
ಕಾರ್ತಿಕ್ ಜಯರಾಂ ಜೊತೆ ವಿವೇಕ್, ಅದ್ವಿತಿ ಶೆಟ್ಟಿ, ಅವಿನಾಶ್, ಕೃಷ್ಣ ಹೆಬ್ಬಾರ್ ಮುಂತಾದವರ ಪ್ರಮುಖ ತಾರಾಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Recommended Video
ದುಬಾರಿ ಯಾಗಿ ಬರಲಿದ್ದಾರೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ | Dhruva Sarja | Nanda kishore | Chandan Shetty
More from Filmibeat
English summary
Kannada actor, bigg boss kannada ex contestant Karthik Jayaram started his new project Iraavan.


Click it and Unblock the Notifications











