For Quick Alerts
  ALLOW NOTIFICATIONS  
  For Daily Alerts

  ರಕ್ಷಿತ್ ನಟನೆಯ '777 ಚಾರ್ಲಿ' ಹಕ್ಕು ಖರೀದಿಸಿದ ತಮಿಳಿನ ಖ್ಯಾತ ಸಂಸ್ಥೆ

  |

  ರಕ್ಷಿತ್ ಶೆಟ್ಟಿ ನಟಿಸಿರುವ '777 ಚಾರ್ಲಿ' ಸಿನಿಮಾದ ಬಿಡುಗಡೆಗೆ ಸದ್ದಿಲ್ಲದೇ ತಯಾರಿ ನಡೆಯುತ್ತಿದೆ. 'ಅವನೇ ಶ್ರೀಮನ್ನಾರಾಯಣ' ಚಿತ್ರದ ಬಳಿಕ ಬರುತ್ತಿರುವ ರಕ್ಷಿತ್ ಸಿನಿಮಾ ಇದಾಗಿದ್ದು, ಸಹಜವಾಗಿ ಕುತೂಹಲ ಹೆಚ್ಚಿದೆ.

  ಕೋವಿಡ್ ಪರಿಸ್ಥಿತಿ ಸರಿಹೋಗುತ್ತಿದ್ದಂತೆ '777 ಚಾರ್ಲಿ' ಸಿನಿಮಾ ಪ್ರೇಕ್ಷಕರ ಮುಂದೆ ಬರುವ ಹಾದಿಯಲ್ಲಿದೆ. ಈ ಮೊದಲೇ ತಿಳಿದಿರುವಂತೆ ಚಾರ್ಲಿ ಸಿನಿಮಾ ಕನ್ನಡ ಸೇರಿದಂತೆ ಇತರೆ ಭಾಷೆಗಳಲ್ಲಿಯೂ ತೆರೆಕಾಣಲಿದೆ. ಹಾಗಾಗಿ, ಚಿತ್ರದ ವಿತರಣೆ ಹಕ್ಕುಗಳನ್ನು ಪರಷಭಾಷೆಯ ಖ್ಯಾತ ಸಂಸ್ಥೆಗಳು ಖರೀದಿಸಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ.

  ರಕ್ಷಿತ್ ಶೆಟ್ಟಿ '777 ಚಾರ್ಲಿ'ಗೆ ಮಲಯಾಳಂ ಖ್ಯಾತ ನಟ ಪೃಥ್ವಿರಾಜ್ ಸಾಥ್ರಕ್ಷಿತ್ ಶೆಟ್ಟಿ '777 ಚಾರ್ಲಿ'ಗೆ ಮಲಯಾಳಂ ಖ್ಯಾತ ನಟ ಪೃಥ್ವಿರಾಜ್ ಸಾಥ್

  ಮಲಯಾಳಂ ಭಾಷೆಯಲ್ಲಿ 777 ಚಾರ್ಲಿ ಚಿತ್ರವನ್ನು ಪೃಥ್ವಿರಾಜ್ ಸುಕುಮಾರನ್ ಪ್ರೊಡಕ್ಷನ್ ಬಿಡುಗಡೆ ಮಾಡಲು ಮುಂದಾಗಿದೆ. ಈ ಕುರಿತು ಇತ್ತೀಚಿಗಷ್ಟೆ ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿತ್ತು.

  ಇದೀಗ, ತಮಿಳಿನಲ್ಲಿ ಸ್ಟಾರ್ ನಿರ್ದೇಶಕ ರಕ್ಷಿತ್ ಚಿತ್ರವನ್ನು ವಿತರಿಸಲು ಮುಂದಾಗಿದ್ದಾರೆ. ಪಿಜ್ಜಾ, ಪೇಟಾ, ಜಿಗರ್‌ಥಂಡಾ ಅಂತಹ ಚಿತ್ರಗಳನ್ನು ನಿರ್ದೇಶಿಸಿರುವ ಕಾರ್ತಿಕ್ ಸುಬ್ಬರಾಜು ತಮಿಳಿನಲ್ಲಿ 777 ಚಾರ್ಲಿ ಸಿನಿಮಾ ರಿಲೀಸ್ ಮಾಡಲಿದ್ದಾರೆ.

  ಕಾರ್ತಿಕ್ ಸುಬ್ಬರಾಜು ಒಡೆತನದ ಸ್ಟೋನ್ ಬೆಂಚ್ ಫಿಲಂಸ್ ಸಂಸ್ಥೆ 777 ಚಾರ್ಲಿ ಚಿತ್ರದ ತಮಿಳು ವರ್ಷನ್ ಬಿಡುಗಡೆ ಮಾಡುತ್ತಿದೆ. ಈ ಕುರಿತು ಕಾರ್ತಿಕ್ ಸುಬ್ಬರಾಜು ಸಂತಸ ವ್ಯಕ್ತಪಡಿಸಿದ್ದಾರೆ. ರಕ್ಷಿತ್ ಶೆಟ್ಟಿ ಸಹ ಟ್ವಿಟ್ಟರ್ ಮೂಲಕ ಈ ವಿಚಾರ ತಿಳಿಸಿದ್ದು, ಧನ್ಯವಾದ ಹೇಳಿದ್ದಾರೆ.

  ಡಾಕ್ಟರ್ ಜೊತೆ ಕಲಾವಿದೆ ಜಯ ಅವರ ತಮ್ಮನ ಮಗಳ ಸಂಭಾಷಣೆ !!| B Jaya Kannada Actress | Audio Leak

  ಇನ್ನುಳಿದಂತೆ ಕಿರಣ್ ರಾಜ್ ಈ ಚಿತ್ರ ನಿರ್ದೇಶಿಸಿದ್ದು, ಬಿಎಸ್ ಗುಪ್ತಾ, ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ. ಜೂನ್ 6 ರಂದು ಟ್ರೈಲರ್ ರಿಲೀಸ್ ಆಗುತ್ತಿದೆ. ಈ ಸಿನಿಮಾದ ಬಳಿಕ 'ಸಪ್ತಸಾಗರದಾಚೆ ಎಲ್ಲೊ', 'ಪುಣ್ಯಕೋಟಿ', 'ಕಿರಿಕ್ ಪಾರ್ಟಿ 2' ಮತ್ತು ತಮ್ಮದೇ ನಿರ್ದೇಶನದ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ನಟಿಸಲಿದ್ದಾರೆ.

  English summary
  Karthik subbaraj to present rakshit shetty starrer 777 charlie in tamil and prithviraj sukumaran in malayalam.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X