ನೆದರ್ಲೆಂಡ್ ಚಿತ್ರೋತ್ಸವ: ಅತ್ಯುತ್ತಮ ನಟ ವಿಭಾಗದಲ್ಲಿ ಜೆಕೆ ನಾಮನಿರ್ದೇಶನ
ಬಿಗ್ ಬಾಸ್ ಶೋ ಬಳಿಕ ಹೊಸ ರೀತಿಯ ಪಾತ್ರಗಳನ್ನ, ಹೊಸ ರೀತಿಯ ಸಿನಿಮಾಗಳಲ್ಲಿ ನಟಿಸುತ್ತಿರುವ ನಟ ಕಾರ್ತಿಕ್ ಜಯರಾಂ ಸದ್ಯ ವರ್ಕೌಟ್, ಕ್ರಿಕೆಟ್ ಜೊತೆಗೆ ಜೊತೆಗೆ ನಟನೆ ಕೂಡ ಮುಂದುವರಿಸಿದ್ದಾರೆ.
ಇದೀಗ, ಜೆಕೆ ಅಭಿನಯದ ಚಿತ್ರವೊಂದರು ನೆದರ್ಲೆಂಡ್ ಚಿತ್ರೋತ್ಸವದಲ್ಲಿ ಭಾಗಿಯಾಗಿದ್ದು, ಅತ್ಯುತ್ತಮ ನಟ ವಿಭಾಗದಲ್ಲಿ ಕಾರ್ತಿಕ್ ಜಯರಾಂ ನಾಮನಿರ್ದೇಶನವಾಗಿದ್ದಾರೆ. ಈ ಸಂತಸದ ಸುದ್ದಿಯನ್ನ ಸ್ವತಃ ಜೆಕೆ ಅವರೆ ಹಂಚಿಕೊಂಡಿದ್ದಾರೆ.
ಹೌದು, ನ್ಯೂ ವಿಶನ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ (new vision international film festival) ನಲ್ಲಿ ಜೆಕೆ ಅಭಿನಯದ ಪುಟ 109 ಸಿನಿಮಾ ನಾಮಿನೇಟ್ ಆಗಿದೆ. ಅತ್ಯುತ್ತಮ ನಟ ವಿಭಾಗದಲ್ಲಿ ಜೆಕೆ ನಾಮಿನೇಟ್ ಆಗಿದ್ದಾರೆ.

2019ನೇ ಸಾಲಿನ ನ್ಯೂ ವಿಶನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸೆಪ್ಟಂಬರ್ 26ರಂದು ನಡೆಯಲಿದ್ದು, ಅಂದು ಜೆಕೆ ಅವರ ಸಿನಿಮಾ ಫಲಿತಾಂಶ ಹೊರಬೀಳಲಿದೆ. ಕನ್ನಡ ನಟನೊಬ್ಬ ವಿದೇಶಿ ಚಿತ್ರೋತ್ಸವದಲ್ಲಿ ಗಮನ ಸೆಳೆದಿದ್ದು, ಪ್ರಶಸ್ತಿ ಗೆದ್ದರೇ ನಿಜಕ್ಕೂ ಇದೊಂದು ಸಂಭ್ರಮವೂ ಆಗಲಿದೆ.
ಪುಟ 109 ಸಿನಿಮಾ ಬಗ್ಗೆ
ಕಳೆದ ಸೆಪ್ಟಂಬರ್ 28ರಂದು ಬಿಡುಗಡೆಯಾಗಿದ್ದ ಪುಟ 109, ಕ್ರೈಂ ಅಧಾರಿತ ಥ್ರಿಲ್ಲಿಂಗ್ ಚಿತ್ರ ಇದಾಗಿದ್ದು, ದಯಾಳ್ ಪದ್ಮನಾಭನ್ ನಿರ್ದೇಶನ ಮಾಡಿದ್ದಾರೆ. ಜೆಕೆ, ನವೀನ್ ಕೃಷ್ಣ, ವೈಷ್ಣವಿ ಚಂದ್ರನ್, ಅನುಪಮಾ ಗೌಡ ನಟಿಸಿದ್ದರು. ಗಣೇಶ್ ನಾರಾಯಣ್ ಸಂಗೀತ ನೀಡಿದ್ದರು. ಪಿ ಎಚ್ ಕೆ ದಾಸ್ ಛಾಯಾಗ್ರಹಣ ಚಿತ್ರಕ್ಕಿತ್ತು.


Click it and Unblock the Notifications











