ನೆಚ್ಚಿನ ನಟನ ಮದುವೆಯಾಗಲು ಅಭಿಮಾನಿ ಕೊಟ್ಟಳು 20 ಕೋಟಿ ಆಫರ್!

ಸಿನಿಮಾ ನಟರು ಎಂದಮೇಲೆ ಅವರಿಗೆ ತಮ್ಮದೇ ಆದ ಅಭಿಮಾನಿ ಬಳಗ ಇದ್ದೇ ಇರುತ್ತೆ. ಅದರಲ್ಲೂ ಕೆಲವರಿಗೆ ಹುಚ್ಚು ಅಭಿಮಾನಿಗಳು ಇರುತ್ತಾರೆ. ಸಿನಿಮಾ ನೋಡಿ ನಾಯಕರನ್ನು ಮೆಚ್ಚಿಕೊಳ್ಳುವ ಅಭಿಮಾನಿಗಳು ಅವರನ್ನು ತೆರೆಹಿಂದೆ ಒಮ್ಮೆ ನೋಡಿದರೆ ಸಾಕು, ಭೇಟಿ ಮಾಡಿದರೆ ಸಾಕು ಎಂದು ಕಾಯುತ್ತಿರುತ್ತಾರೆ.

ಅಂತೆಯೇ ಬಾಲಿವುಡ್‌ ಹೀರೋಗಳಿಗೂ ಹುಚ್ಚು ಅಭಿಮಾನಿಗಳು ಇದ್ದಾರೆ. ಬಾಲಿವುಡ್‌ನಲ್ಲಿ ಯಾವುದೇ ಹೊಸ ನಟರು ಬಂದರೂ ಕೂಡ ಆದಷ್ಟು ಬೇಗ ಫೇಮಸ್ ಆಗಿ ಬಿಡುತ್ತಾರೆ. ವೇಗವಾಗಿ ಅವರಿಗೆ ಅಭಿಮಾನಿ ಬಳಗ ಹುಟ್ಟಿಕೊಳ್ಳುತ್ತದೆ. ಅಂತೆಯೇ ಬಾಲಿವುಡ್‌ನಲ್ಲಿ ಮಿಂಚುತ್ತಿರುವ ನಟ ಕಾರ್ತಿಕ್ ಆರ್ಯನಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಅದರಲ್ಲೂ ಕಾರ್ತಿಕ್‌‌ಗೆ ಮಹಿಳಾ ಅಭಿಮಾನಿಗಳೇ ಹೆಚ್ಚು.

ಕಾರ್ತಿಕ್ ಮಹಿಳಾ ಅಭಿಮಾನಿ ಒಬ್ಬಳೂ ಕಾರ್ತಿಕ್ ಅವರನ್ನು ಮದುವೆ ಆಗುವಂತೆ ಕೇಳಿದ್ದಾರೆ. ಕೇವಲ ಮದುವೆ ಆಗು ಎಂದಿಲ್ಲ, ಬದಲಿಗೆ '20 ಕೋಟಿ ಹಣ ಕೊಡ್ತಿನಿ ನನ್ನನ್ನು ಮದುವೆ ಆಗಿ' ಎಂದಿದ್ದಾರೆ. ಈ ರೀತಿಯಾಗಿ ಕಾರ್ತಿಕ್ ಆರ್ಯ ಸಾಮಾಜಿಕ ಜಾಲತಾಣದ ಪೋಸ್ಟ್‌ಗೆ ಕಮೆಂಟ್ ಮಾಡಿದ್ದಾರೆ.

ಇತ್ತೀಚೆಗೆ ನಟ ಕಾರ್ತಿಕ್ ತಮ್ಮ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಅಪ್ಲೋಡ್ ಮಾಡಿದ್ದರು. ಪುಟ್ಟ ಬಾಲಕಿಯ ಜೊತೆಗೆ ಹಾಸ್ಯ ಭರಿತ ವಿಡಿಯೋ ಮಾಡಿ ಹಂಚಿಕೊಂಡಿದ್ದರು. ಇದೇ ವಿಡಿಯೋಗೆ ಅಭಿಮಾನಿಯೊಬ್ಬರು ಮದುವೆ ಆಗುವಂತೆ ಕಮೆಂಟ್ ಮಾಡಿ 20 ಕೋಟಿ ಆಫರ್ ಕೊಟ್ಟಿದ್ದಾರೆ. ಇದಕ್ಕೆ ಅಲ್ಲೇ ಉತ್ತರ ನೀಡಿರುವ ಕಾರ್ತಿಕ್ ಆರ್ಯನ್ 'ಹಾಗಿದ್ದರೆ ಬಿಡ್ಡಿಂಗ್ ಶುರು ಮಾಡೋಣವಾ?' ಎಂದು ಬರೆದುಕೊಂಡಿದ್ದಾರೆ.

Kartik Aaryan Got 20 Crore Offer From A Fan To Marry Her

ಕಾರ್ತಿಕ್ ಆರ್ಯನಿಗೆ ಹುಡುಗಿಯರೇ ಹೆಚ್ಚು ಅಭಿಮಾನಿಗಳು. ಈ ಯಂಗ್ ಹೀರೋ ಹೊರಗಡೆ ಹೋದರೆ ಸಾಕು ಮಹಿಳಾ ಅಭಿಮಾನಿಗಳು ಅವರನ್ನು ಮುತ್ತಿಕೊಳ್ಳುತ್ತಾರೆ. ಅಷ್ಟೇ ಯಾಕೆ ಇತ್ತೀಚೆಗೆ ಕಾರ್ತಿಕ್ ಮನೆ ಮುಂದೆ ಹೋಗಿ ಇಬ್ಬರು ಹುಡುಗಿಯರು ನಟನ ಹೆಸರು ಕರೆದು ರಂಪ ಮಾಡಿದ್ದರು. ಬಳಿಕ ಮನೆಯಿಂದ ಹೊರ ಬಂದು ಅಭಿಮಾನಿಗಳ ಜೊತೆಗೆ ಫೋಟೋ ತೆಗೆಸಿಕೊಂಡಿದ್ದರು ಕಾರ್ತಿಕ್.

ಇನ್ನು ನಟ ಕಾರ್ತಿಕ್ ಆರ್ಯ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ, ಸಾಲು ಸಾಲು ಸಿನಿಮಾಗಳಲ್ಲಿ ಕಾರ್ತಿಕ್ ಬ್ಯುಸಿಯಾಗಿದ್ದಾರೆ. ಭೂಲ್ ಭುಲಯ್ಯ ಚಿತ್ರ ರಿಲೀಸ್‌ಗೆ ರೆಡಿಯಾಗಿದ್ದು, ಫ್ರೆಡ್ಡಿ ಮತ್ತು ಶೆಹ್ಜಾದ ಚಿತ್ರಗಳು ನಿರ್ಮಾಣ ಹಂತದಲ್ಲಿ ಇವೆ.

More from Filmibeat

English summary
Bollywood Actor Kartik Aaryan Got 20 Crore Offer From Fan To Marry Her
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X