For Quick Alerts
  ALLOW NOTIFICATIONS  
  For Daily Alerts

  ಸತೀಶ್ ನೀನಾಸಂ ಮತ್ತು ಹರಿಪ್ರಿಯಾ ಜೊತೆ 'ಪೆಟ್ರೋಮ್ಯಾಕ್ಸ್' ಹಿಡಿದ ಮತ್ತೋರ್ವ ನಟಿ

  By ಫಿಲ್ಮ್ ಡೆಸ್ಕ್
  |

  ನಟ ಸತೀಶ್ ನೀನಾಸಂ ಮತ್ತು ಹರಿಪ್ರಿಯಾ ಇಬ್ಬರು ಇತ್ತೀಚಿಗೆ ಜಗಮಗಿಸೋ ಮೈಸೂರಿನಲ್ಲಿ ಪೆಟ್ರೋಮ್ಯಾಕ್ಸ್ ಹಿಡಿದು ಓಡಾಡುತ್ತಿದ್ದರು. ಇಬ್ಬರು ಮೈಸೂರಿನಲ್ಲಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಂದ್ಹಾಗೆ ಇಬ್ಬರು ಹೊಸ ಸಿನಿಮಾ ಪೆಟ್ರೋಮ್ಯಾಕ್ಸ್ ಚಿತ್ರೀಕರಣಕ್ಕಾಗಿ ಮೈಸೂರಿನಲ್ಲಿ ಬೀಡುಬಿಟ್ಟಿದ್ದರು.

  ವಿಶೇಷ ಎಂದರೆ ಈಗಾಗಲೇ ಮೊದಲ ಹಂತದ ಚಿತ್ರೀಕರಣ ಸಹ ಮಾಡಿ ಮುಗಿಸಿದೆ ಸಿನಿಮಾತಂಡ. ಈ ನಡುವೆ ಪೆಟ್ರೋಮ್ಯಾಕ್ಸ್ ಚಿತ್ರಕ್ಕೆ ಮತ್ತೋರ್ವ ನಟಿ ಎಂಟ್ರಿ ಕೊಟ್ಟಿದ್ದಾರೆ. ಅದು ಮತ್ಯಾರು ಅಲ್ಲ ಕಾರುಣ್ಯಾ ರಾಮ್. ಹೌದು, ನಟಿ ಕಾರುಣ್ಯಾ ರಾಮ್ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಿ ತನ್ನ ಭಾಗದ ಚಿತ್ರೀಕರಣ ಮುಗಿಸಿದ್ದಾರೆ.

  ಮೈಸೂರಿನಲ್ಲಿ 'ಪೆಟ್ರೋಮ್ಯಾಕ್ಸ್' ಹಿಡಿದು ಓಡಾಡುತ್ತಿರುವ ಸತೀಶ್ ಮತ್ತು ಹರಿಪ್ರಿಯಾಮೈಸೂರಿನಲ್ಲಿ 'ಪೆಟ್ರೋಮ್ಯಾಕ್ಸ್' ಹಿಡಿದು ಓಡಾಡುತ್ತಿರುವ ಸತೀಶ್ ಮತ್ತು ಹರಿಪ್ರಿಯಾ

  ಎರಡನೇ ಹಂತದ ಚಿತ್ರೀಕರಣಕ್ಕಾಗಿ ಕಾಯುತ್ತಿದ್ದಾರೆ. ಲಾಕ್ ಡೌನ್ ಬಳಿಕ ಕಾರುಣ್ಯಾ ರಾಮ್ ಮೊದಲ ಬಾರಿಗೆ ಚಿತ್ರೀಕರಣ ಭಾಗಿಯಾಗಿದ್ದಾರೆ. ಮೂಲಗಳ ಪ್ರಕಾರ ಕಾರುಣ್ಯಾ ಸಿನಿಮಾದಲ್ಲಿ ಸಲೂನ್ ಗರ್ಲ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

  ಈ ತರಹದ ಸಿನ್ಸೆಪ್ಟ್ ಇದುವರೆಗೂ ಬಂದಿಲ್ಲ | Shivakumar | Mukhavaada Illadavanu

  ಈಗಾಗಲೇ ಅರ್ಧದಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡ ನವೆಂಬರ್ 3ನೇ ವಾರದಿಂದ ಮತ್ತೆ ಮೈಸೂರಿನಲ್ಲಿ 2ನೇ ಹಂತದ ಚಿತ್ರೀಕರಣದಲ್ಲಿ ಪ್ರಾರಂಭಿಸಲಿದೆ. ಅಂದ್ಹಾಗೆ ಪೆಟ್ರೋಮ್ಯಾಕ್ಸ್ ಚಿತ್ರಕ್ಕೆ ನೀರ್ ದೋಸೆ ಖ್ಯಾತಿಯ ವಿಜಯ್ ಪ್ರಸಾದ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  English summary
  Actress Karunya Ram playing important role in Actor Sathish Ninasam's Petromax film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X