ಮಹಾಕುಂಭ ಮೇಳದಲ್ಲಿ ಕಾರುಣ್ಯ ರಾಮ್, ಭಕ್ತರು ತಿಂದು ಬಿಟ್ಟಿದ್ದ ತಟ್ಟೆ ಎತ್ತಿದ್ದ ವಜ್ರಕಾಯ ಚೆಲುವೆ..!

ಮಹಾಕುಂಭ ಮೇಳಕ್ಕೆ ದಿನನಿತ್ಯ ಹಲವಾರು ಜನ ಬರುತ್ತಿದ್ದಾರೆ. ಪ್ರಯಾಗ್ ರಾಜ್‌ಕ್ಕೆ ಭೇಟಿ ನೀಡಿ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು ನಮ್ಮ ಜನ್ಮ ಪಾವನವಾಯ್ತು ಎಂದು ಸಾರ್ಥಕ ಭಾವದೊಂದಿಗೆ ಮರಳಿ ಮನೆ ಕಡೆ ಮುಖ ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಇಲ್ಲಿಯವರೆಗೆ ಸುಮಾರು 50 ಕೋಟಿಗೂ ಅಧಿಕ ಭಕ್ತರು ಮಹಾಕುಂಭ ಮೇಳದ ಆಧ್ಯಾತ್ಮ ಅನುಭವನ್ನು ಅನುಭವಿಸಿದ್ದಾರೆ. ಪ್ರಯಾಗ್ ರಾಜ್‌ಗೆ ಭೇಟಿ ನೀಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇನ್ನು, ಈ ಮಹಾಕುಂಭ ಮೇಳದ ವಿಶೇ‍ಷ ಅಂದರೆ ಈ ಬಾರಿ ಪುಣ್ಯಸ್ನಾನ ಕೇವಲ ಜನಸಾಮಾನ್ಯರಷ್ಟೇ ಮಾಡುತ್ತಿಲ್ಲ. ಚಿತ್ರರಂಗದಲ್ಲಿ ಬದುಕು ಕಟ್ಟಿಕೊಂಡಿರುವ ಅನೇಕರು ಪುಣ್ಯ ಸ್ನಾನ ಮಾಡುತ್ತಿದ್ದಾರೆ. ತಮ್ಮ ಅನುಭವವನ್ನು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಇದಕ್ಕೆ ಕನ್ನಡ ಚಿತ್ರರಂಗದ ಚೆಲುವೆ ಕಾರುಣ್ಯ ರಾಮ್ ಸದ್ಯದ ಉದಾಹರಣೆ.

Karunya Ram takes a holy dip at Maha Kumbh 2025 and picks up a plate left by devotees

ಹೌದು, ಬೆಳ್ಳಿತೆರೆ, ಕಿರುತೆರೆ, ರಿಯಾಲಿಟಿ ಶೋ ಹೀಗೆ ಎಲ್ಲದರಲ್ಲಿಯೂ ತಮ್ಮ ಚಾಪು ಮೂಡಿಸಿರುವ ಸುಂದರಿ ಕಾರುಣ್ಯ ರಾಮ್ ಮೊನ್ನೆ ಮೊನ್ನೆ ಮಹಾಕುಂಭ ಮೇಳದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. ಇಷ್ಟೇ ಅಲ್ಲ ಕಾಶಿಯಲ್ಲಿ ಸೇವೆಯನ್ನು ಮಾಡಿದ್ದಾರೆ.

ಕನ್ನಡದ ನಟಿ ಕಾರುಣ್ಯ ರಾಮ್ ಅವರಿಗೆ ದೇವರ ಮೇಲೆ ಅಪಾರ ಭಕ್ತಿ ಇದೆ. ಹೀಗಾಗಿ ಆಗಾಗ ಪುಣ್ಯಕ್ಷೇತ್ರಗಳಿಗೆ ತೆರಳಿ ಪ್ರಾರ್ಥನೆ ಮಾಡುತ್ತಾ ಇರುತ್ತಾರೆ. ಈಗ ಶಿವನಿಗೆ ಸಮರ್ಪಿತವಾದ ಶ್ರೀ ಕಾಶಿ ವಿಶ್ವನಾಥ ದೇವಾಲಯಕ್ಕೆ ನಟಿ ತೆರಳಿದ್ದಾರೆ. ಅಷ್ಟೇ ಅಲ್ಲ, ಕಾಶಿಯಲ್ಲಿ ಪುಣ್ಯಸ್ನಾನ ಮಾಡಿ, ಭಕ್ತರು ಊಟ ಮಾಡಿದ ತಟ್ಟೆಯನ್ನು ಎತ್ತುವ ಮೂಲಕ ಸೇವೆಯಲ್ಲಿ ಭಾಗಿಯಾಗಿದ್ದಾರೆ.

ಇನ್ನೂ ಇದೇ ವಿಡಿಯೋವನ್ನು ನಟಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ, ಇದೇ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ವಿಡಿಯೋ ಶೇರ್ ಮಾಡಿಕೊಂಡ ನಟಿ ಕಾಶಿಯಲ್ಲಿ ಗಂಗಾ ಪುಣ್ಯ ಸ್ನಾನ ಮಾಡಿ, ಸೇವೆ ಮಾಡುವ ಭಾಗ್ಯ ಪಡೆದ ನಾನೇ ಪುಣ್ಯವಂತೆ.. ಹರ ಹರ ಮಹಾದೇವ ಅಂತ ಬರೆದುಕೊಂಡಿದ್ದಾರೆ. ನಾವು ಏನೂ ಪ್ಲ್ಯಾನ್ ಮಾಡಿರಲಿಲ್ಲ ಆದರೆ ದೇವರು ಪ್ರತಿಯೊಬ್ಬರಿಗೂ ಅವರದ್ದೇ ಪ್ಲ್ಯಾನ್ ಮಾಡಿದ್ದಾನೆ' ಎಂದು ಕಾರುಣ್ಯ ಬರೆದುಕೊಂಡಿದ್ದಾರೆ. ನಮ್ಮ ಜೀವನದಲ್ಲಿ ಮಿರಾಕಲ್‌ಗಳು ಆಗುತ್ತದೆ ಅದಕ್ಕೆ ಇದೇ ಸಾಕ್ಷಿಯಾಗಿದೆ. ಮಹಾ ಕುಂಭಮೇಳೆ 2025ರ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿರುವುದು' ಎಂದಿದ್ದಾರೆ ಕಾರುಣ್ಯ.

ಇಷ್ಟೇ ಅಲ್ಲ ಗಂಗಾ, ಯಮುನಾ, ಸರಸ್ವತಿ ಮಾತಾ. ನನ್ನ ಎಲ್ಲಾ ಸರಸ್ವತಿ ಮತ್ತು ಹನುಮಾನ, ಸೀತಾ ಮಂದಿರಕ್ಕೆ ಭೇಟಿ ನೀಡಿದ್ದೀನಿ' ಎಂದು ಕಾರುಣ್ಯ ಸುಮಾರು ಫೋಟೋಗಳನ್ನು ಹಾಕಿದ್ದಾರೆ. ಬನಾರಸಿ, ವಾರಣಾಸಿ, ಕಾಶಿ, ಗಂಗಾ ಮಾತಾ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಪ್ರಯಾಗ್‌ರಾಜ್‌ನಲ್ಲಿ ಸೆರೆ ಹಿಡಿದ ಪ್ರತಿಯೊಂದು ದೃಶ್ಯಗಳನ್ನು ಕಾರುಣ್ಯ ರಾಮ್ ಅಪ್ಲೋಡ್ ಮಾಡಿದ್ದಾರೆ. ಸದ್ಯಕ್ಕೆ ಕಾರುಣ್ಯ ರಾಮ್ ಅವರ ಈ ವಿಡಿಯೋ ನೋಡಿದ ಅಭಿಮಾನಿಗಳು, ಸೂಪರ್ ಅಕ್ಕ, ಧನ್ಯೋಸ್ಮಿ ಹರ ಹರ ಮಹಾದೇವ, ದೇವರು ಆರ್ಶೀವಾದ ನಿಮ್ಮ ಮೇಲೆ ಇದೆ ಕಾರುಣ್ಯ ಅಂತ ಕಾಮೆಂಟ್ಸ್​ ಹಾಕಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X