For Quick Alerts
  ALLOW NOTIFICATIONS  
  For Daily Alerts

  6-5=2 ಚಿತ್ರ ತಂಡದಿಂದ ಮತ್ತೊಂದು ಹೊಸ ಕೊಡುಗೆ

  By Suneetha
  |

  2013 ರಲ್ಲಿ ಪ್ರೇಕ್ಷಕರಲ್ಲಿ ಭಯ ಮೂಡಿಸುವಂತಹ 6-5=2 ಎಂಬ ವಿಭಿನ್ನ ಹೆಸರಿನ ಸಿನಿಮಾ ಮಾಡಿ ರಾತ್ರೋ ರಾತ್ರಿ ಸ್ಟಾರ್ ಅಲ್ಲದವರು ಸ್ಟಾರ್ ಆಗಿದ್ದು ಹಳೇ ಸುದ್ದಿ. ನಿಜ ದೃಶ್ಯಗಳನ್ನು ಒಳಗೊಂಡಿದ್ದ ಸಿನಿಮಾ ಒಂದೇ ದಿನದಲ್ಲಿ ಸೂಪರ್ ಹಿಟ್ ಆಗಿತ್ತು.

  ಚಿತ್ರದ ಹೀರೋ ಯಾರು, ಹಿರೋಯಿನ್ ಯಾರು, ಏನು, ಎತ್ತ, ಅಂತ ಗೊತ್ತಿಲ್ಲದೆ ಪ್ರೇಕ್ಷಕರು ಸಿನಿಮಾ ನೋಡಿದ್ದೇ ನೋಡಿದ್ದು. ಒಟ್ನಲ್ಲಿ ಎಲ್ಲೆಡೆ ಸಿನಿಮಾ ಹೌಸ್ ಫುಲ್ ಆಗಿ ಓಡ್ತಾ ಇತ್ತು. ನೋಡುತ್ತಿದ್ದಂತೆ ಆ ಸಿನಿಮಾ ಕೂಡ 2013 ರ ಸೂಪರ್ ಹಿಟ್ ಸಿನಿಮಾಗಳ ಸಾಲಿಗೆ ಸೇರ್ಪಡೆ ಆಯ್ತು.['6-5=2' ವಿಮರ್ಶೆ: ಮೀಟರ್ ಇರುವವರಿಗೆ ಮಾತ್ರ]

  ಇದೀಗ ಅದೇ ಚಿತ್ರತಂಡದವರು ಮತ್ತೊಂದು ಸಿನಿಮಾ ಮಾಡುವ ಮೂಲಕ ಮತ್ತೆ ಪ್ರೇಕ್ಷಕರನ್ನು ಕಮಾಲ್ ಮಾಡಲು ಹೊರಟಿದ್ದಾರೆ. ಈ ಬಾರಿ ಈ ಚಿತ್ರತಂಡ ಮಾಡುತ್ತಿರುವ ಸಿನಿಮಾದ ಹೆಸರು 'ಕರ್ವ'.

  ಅದೇ 6-5=2 ಸಿನಿಮಾದ ನಿರ್ಮಾಪಕ ಕೃಷ್ಣ ಚೈತನ್ಯ ಅವರು ಬಂಡವಾಳ ಹಾಕಿ ಅದೇ ನಿರ್ದೇಶಕ ನವನೀತ್ ಅವರು ಆಕ್ಷನ್-ಕಟ್ ಹೇಳಲಿರುವ 'ಕರ್ವ' ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದೆ.[6-5=2 ಚಿತ್ರದ ನಿಜವಾದ ಛಾಯಾಗ್ರಾಹಕ ಕಣ್ಣೀರು]

  ಅಂದಹಾಗೆ ಚಿತ್ರದ ತಾರಾಗಣದಲ್ಲಿ ಯಾರ್ಯಾರು ಪ್ರಮುಖ ಪಾತ್ರ ವಹಿಸುತ್ತಾರೆ ಅನ್ನೋದರ ಬಗ್ಗೆ ಚಿತ್ರತಂಡ ಇನ್ನೂ ಮಾಹಿತಿ ಬಿಟ್ಟುಕೊಟ್ಟಿಲ್ಲ. ಒಟ್ನಲ್ಲಿ 'ಕರ್ವ' ಮೂಲಕ ಮತ್ತೊಮ್ಮೆ ಪ್ರೇಕ್ಷಕರಿಗೆ ಚಳಿ ಜ್ವರ ಹಿಡಿಸಲು ನಿರ್ದೇಶಕ ನವನೀತ್ ಅವರು ನಿರ್ಧರಿಸಿದ್ದಾರೆ ಅಂತಾಯ್ತು.

  English summary
  Another mystery thriller film from the makers of 6-5=2. The movie name is Karvva. Directed by Navaneeth. Produced by Krishna Chaithanya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X