'ಕರ್ವ' ನಿರ್ದೇಶಕರ ಜೊತೆಗೆ ಉಪೇಂದ್ರ ಸಿನಿಮಾ
'ಕರ್ವ' ಸಿನಿಮಾದ ಮೂಲಕ ಯಶಸ್ಸು ಪಡೆದಿದ್ದ, ನಿರ್ದೇಶಕ ನವನೀತ್ ಆ ಬಳಿಕ 'ಬಕಾಸುರ' ಚಿತ್ರವನ್ನು ಕೈಗೆತ್ತಿಕೊಂಡರು. ರವಿಚಂದ್ರನ್ ರಿಗೆ ಆಕ್ಷನ್ ಕಟ್ ಹೇಳಿದ್ದ, ಈ ಯುವ ನಿರ್ದೇಶಕ ತಮ್ಮ ಮುಂದಿನ ಸಿನಿಮಾವನ್ನು ಉಪೇಂದ್ರ ಜೊತೆಗೆ ಮಾಡುತ್ತಿದ್ದಾರೆ.
ಸಾಲು ಸಾಲು ಸಿನಿಮಾಗಳಲ್ಲಿ ಉಪೇಂದ್ರ ಬ್ಯುಸಿ ಇದ್ದು, ಆ ಸಾಲಿಗೆ ಮತ್ತೊಂದು ಸಿನಿಮಾ ಸೇರಿಕೊಂಡಿದೆ. ಈ ಚಿತ್ರವನ್ನು 'ಕರ್ವ' ನವನೀತ್ ನಿರ್ದೇಶನ ಮಾಡುತ್ತಿದ್ದಾರೆ. ತರುಣ್ ಶಿವಪ್ಪ ಹಾಗೂ ಮಾನಸ ತರುಣ್ ಈ ಸಿನಿಮಾಗೆ ಬಂಡವಾಳ ಹಾಕುತ್ತಿದ್ದಾರೆ.
ಉಪೇಂದ್ರ ಅವರ ಹುಟ್ಟುಹಬ್ಬದ ವಿಶೇಷವಾಗಿ ಈ ಹೊಸ ಸಿನಿಮಾವನ್ನು ಘೋಷಣೆ ಮಾಡಲಾಗಿದೆ. ಸದ್ಯಕ್ಕೆ, ಈ ಸಿನಿಮಾಗೆ ಪ್ರೊಡಕ್ಷನ್ ನಂಬರ್ 5 ಎಂದು ಹೆಸರಿಡಲಾಗಿದೆ. ಚಿತ್ರದ ಉಳಿದ ತಾರಬಳಗ ಸದ್ಯದಲ್ಲಿಯೇ ತಿಳಿಯಲಿದೆ.

ನವವೀತ್ ಅವರ ಈ ಹೊಸ ಸಿನಿಮಾಗೆ ಅವಿನಾಶ್ ಬಿ ಸಿನಿಮಾಗೆ ಸಂಗೀತ ನೀಡಲಿದ್ದಾರೆ. ಮೋಹನ್ ಕ್ಯಾಮರಾ ವರ್ಕ್ ಇರಲಿದೆ.
'ಹೋಮ್ ಮಿನಿಸ್ಟರ್', 'ರವಿಚಂದ್ರ', 'ಕಬ್ಜ' 'ಬುದ್ದಿವಂತ 2', ನಿರ್ದೇಶಕ ಶಶಾಂಕ್ ಸಿನಿಮಾ, ಜಯರಾಮ್ ಸಿನಿಮಾ ಉಪೇಂದ್ರ ಅವರ ಮುಂದಿನ ಸಿನಿಮಾಗಳಾಗಿವೆ.


Click it and Unblock the Notifications











