ಡಿಸೆಂಬರ್ 24 ರಂದು ಕಾಸರಗೋಡು ಚಿನ್ನಾರ ಅಭಿನಂದನಾ ಕಾರ್ಯಕ್ರಮ
ರಂಗಕರ್ಮಿ, ಸಿನಿಮಾ ನಟ, ಸಂಘಟಕ ಕಾಸರಗೋಡು ಚಿನ್ನಾ ಅವರು 60ರ ಹರೆಯದಲ್ಲಿದ್ದು, ಅವರ ಅಭಿನಂದನಾ ಕಾರ್ಯಕ್ರಮ ಡಿಸೆಂಬರ್ 24ರಂದು ಮಂಗಳೂರಿನ ಪುರಭವನದಲ್ಲಿ ಜರುಗಲಿದೆ. ಇತ್ತೀಚೆಗಷ್ಟೇ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕೆನರಾ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಖ್ಯಾತ ಸಾಹಿತಿ ಡಾ.ನಾ.ದಾಮೋದರ್ ಶೆಟ್ಟಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.
ಕಾಸರಗೋಡು ಚಿನ್ನಾರ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಅಭಿನಯಿಸಿದ ಸಿನಿಮಾಗಳ ಪ್ರದರ್ಶನ, ವಿಚಾರಗೋಷ್ಠಿ, ಸಂವಾದ, ಗೀತ ಝೇಂಕಾರ, ಚಿನ್ನಾ ಜೊತೆ ಲಘು ನಿಮಿಷ, ಅಭಿನಂದನಾ ಕಾರ್ಯಕ್ರಮ ಹೀಗೆ ವೈವಿದ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಸಿನಿಮಾ ನಿರ್ಮಾಪಕ ಟಿಎ ಶ್ರೀನಿವಾಸ್, ಶಶಿರಾಜ್ ಕಾವೂರು, ಕುಂಬ್ಲೆ ನರಸಿಂಹ ಪ್ರಭು, ಗೀತಾಕಿಣಿ, ಪುಷ್ಪಲತಾ ಭಟ್, ಸತ್ಯನಾರಾಯಣ, ವಿಠಲಕುಡ್ವ, ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ, ವೇಣು ಶರ್ಮಾ, ಸ್ಮಿತಾ ಶೆಣೈ, ವಿಜಯ ಕುಮಾರ್ ಕೊಡಿಯಾಲ್ ಬೈಲ್, ಲಕ್ಷ್ಮಣ್ ಕುಮಾರ್ ಮಲ್ಲೂರು ಮೊದಲಾದವರು ಉಪಸ್ಥಿತರಿದ್ದರು.
ಕಾಸಗೋಡು ಚಿನ್ನಾ, ಇವರ ಮೂಲ ಹೆಸರು ಸುಜೀರ್ ಶ್ರೀನಿವಾಸ್ ರಾವ್. ಎಲ್ಲರೂ ಇವರನ್ನ ಕಾಸಗೋಡು ಚಿನ್ನಾ ಎಂದು ಕರೆಯುತ್ತಾರೆ. ಚಿನ್ನಾ ಅವರು ಖ್ಯಾತ ರಂಗಭೂಮಿ ಕಲಾವಿದರು. ನಿರ್ದೇಶಕರು, ಸಿನಿಮಾ ನಟರು ಕೂಡ ಹೌದು. ಕನ್ನಡ, ಕೊಂಕಿಣಿ, ತುಳು, ಮಲಯಾಳಂ ಭಾಷೆಗಳಲ್ಲಿ ಸುಮಾರು 400ಕ್ಕೂ ಅಧಿಕ ನಾಟಕಗಳಲ್ಲಿ ನಟಿಸಿದ್ದಾರೆ.


Click it and Unblock the Notifications











