ಕಾಸರಗೋಡು ಚಿನ್ನಾ ತಾರಾಲೋಕ ಚಲನಚಿತ್ರೋತ್ಸವಕ್ಕೆ ಚಾಲನೆ
ಜನಪ್ರಿಯ ರಂಗಕರ್ಮಿ, ನಿರ್ದೇಶಕ, ಗಡಿನಾಡ ಪ್ರತಿಭೆ ಕಾಸರಗೋಡು ಚಿನ್ನಾ ಅವರ ಅರವತ್ತು ವರ್ಷ ಸಂಭ್ರಮದ ಹಿನ್ನಲೆಯಲ್ಲಿ 'ಕಾಸರಗೋಡು ಚಿನ್ನಾ ತಾರಾಲೋಕ ಚಲನಚಿತ್ರೋತ್ಸವ' ಕಾರ್ಯಕ್ರಮ ನಡೆಸಲಾಗುತ್ತಿದೆ. ಇತ್ತೀಚಿಗಷ್ಟೆ ಮಂಗಳೂರಿನಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
ಕನ್ನಡ ಚಿತ್ರರಂಗದ ಹೆಸರಾಂತ ಪೋಷಕ ನಟ ಸುಂದರ್ ರಾಜ್ ಈ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಗಾಟನೆ ಮಾಡಿದರು. ನಂತರ ಮಾತನಾಡಿದ ಅವರು ''ಕಾಸರಗೋಡು ಚಿನ್ನಾ ಅವರು ಅಪರಂಜಿ ಚಿನ್ನ. ಚಿನ್ನಾರವರಲ್ಲಿ ಬಹುಗುಣಗಳು ಇತ್ತು. ಹಾಸ್ಯ ಪ್ರವೃತ್ತಿ, ರಂಗಭೂಮಿ, ದೈವ ಭಕ್ತಿ, ಸಾಹಿತ್ಯ, ಹೀಗೆ ಅವರಿಂದ ಕಲಿಯಬೇಕಾದುದ್ದು ತುಂಬ ಇದೆ ಎಂದು ಹೇಳಿದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಲಕುಮಿ ತಂಡದ ಕಿಶೋರ್ ಡಿ ಶೆಟ್ಟಿ '' ಕಾಸರಗೋಡು ಅವರು ಕನ್ನಡ ಮತ್ತು ತುಳು ಚಿತ್ರರಂಗದಲ್ಲಿ ಅಪೂರ್ವ ಸಾಧನೆ ಮಾಡಿದ್ದಾರೆ. ಅವರ ಜೊತೆ ಕೆಲಸ ಮಾಡುವುದು ಡಿಗ್ರಿ ಪಡೆದಂತೆ'' ಎಂದು ಹೊಗಳಿದರು.
ಉಳಿದಂತೆ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ವಿ.ಮನೋಹರ್, ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್, ಶ್ರೀ ಧರ್, ರಾಜೇಶ್ ಬ್ರಹ್ಮಾವರ, ರಿಚಾರ್ಡ್ ಕ್ಯಾಸ್ಟಲಿನೋ, ದಾಮೋದರ್ ಶೆಟ್ಟಿ ಮತ್ತು ಜಗನ್ನಾಥ್ ಶೆಟ್ಟಿ ಭಾಗಿಯಾಗಿದ್ದರು.


Click it and Unblock the Notifications











