twitter
    For Quick Alerts
    ALLOW NOTIFICATIONS  
    For Daily Alerts

    ಶತಕ ಪೂರೈಸಿ ಅಚ್ಚರಿ ಮೂಡಿಸಿದ ಕಾಶಿನಾಥ್ ಚಿತ್ರ

    By Rajendra
    |

    Kashinath 12 AM still
    ಹೊಸತನದಿಂದ ಕೂಡಿದ ಕಥೆ, ಉತ್ತಮ ಮನರಂಜನಾತ್ಮಕ ಅಂಶಗಳುಳ್ಳ ಚಿತ್ರಗಳನ್ನು ಕನ್ನಡ ಚಿತ್ರರಸಿಕರು ಕೈಹಿಡಿಯುತ್ತಾರೆ ಎಂಬುದನ್ನು ಕಾಶಿನಾಥ್ ಅಭಿನಯದ '12 AM ಮಧ್ಯರಾತ್ರಿ' ಚಿತ್ರ ನಿರೂಪಿಸಿದೆ. ಚಿತ್ರದಲ್ಲಿ ಹೇಳಿಕೊಳ್ಳುವಂತಹ ಸ್ಟಾರ್ ನಟರಿಲ್ಲದಿದ್ದರೂ ಚಿತ್ರ ಶತಕ ಪೂರೈಸಿದೆ.

    ಚಿತ್ರಮಂದಿರ ಸಮಸ್ಯೆ, ಪರಭಾಷಾ ಚಿತ್ರಗಳ ತೀವ್ರ ಪೈಪೋಟಿಗಳ ನಡುವೆ '12 AM' ಚಿತ್ರ ಗೆದ್ದಿದೆ. ಕಾಶಿನಾಥ್ ಅವರ ಗರಡಿಯಲ್ಲಿ ಬಂದಂತಹ ನಿರ್ದೇಶಕ ಕಾರ್ತಿಕ್ ಆಕ್ಷನ್ ಕಟ್ ನಲ್ಲಿ ಮೂಡಿಬಂದಿರುವ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ '12 AM ಮಧ್ಯರಾತ್ರಿ'.

    ಇದೇ ಚಿತ್ರ ಈಗ ತೆಲುಗಿನಲ್ಲಿ 'ಅಮಾವಾಸ್ಯ ರಾತ್ರಿ' ಹಾಗೂ ತಮಿಳಿನಲ್ಲಿ 'ನಡುನೀಸಿ ಆವಿಗಳ್' ಎಂಬ ಶೀರ್ಷಿಕೆಯಲ್ಲಿ ಡಬ್ ಆಗುತ್ತಿವೆ. ಬೆಂಗಳೂರಿನ ದೊರೆಸಾನಿ ಪಾಳ್ಯದ ವೆಂಕಟೇಶ್ವರ ಹಾಗೂ ಹೆಸರುಗಟ್ಟದ ಎಸ್ಎಲ್ಎನ್ ಚಿತ್ರಮಂದಿರಗಳಲ್ಲಿ 12 AM ಚಿತ್ರ ನೂರು ದಿನ ಪೂರೈಸಿದೆ.

    ವಿ ಮನೋಹರ್ ಅವರ ಸಂಗೀತ ಇರುವ ಈ ಚಿತ್ರದ ಒಟ್ಟು 50 ದಿನಗಳ ಚಿತ್ರೀಕರಣದಲ್ಲಿ 35 ದಿನಗಳನ್ನು ರಾತ್ರಿಯಲ್ಲೇ ಚಿತ್ರೀಕರಿಸಿರುವುದು ವಿಶೇಷ. ಕಾಶಿನಾಥ್ ಅವರ ಪುತ್ರ ಅಲೋಕ್ ಈ ಚಿತ್ರದ ಮೂಲಕ ಅಭಿಮನ್ಯು ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. (ಒನ್ಇಂಡಿಯಾ ಕನ್ನಡ)

    English summary
    Kannada horror film 12 AM Midnight completes 100 days. Kannada films actor and director Kashinath claims that 12 AM Midnight dubbed to Telugu and Tamil languages also.
    Tuesday, November 27, 2012, 12:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X