For Quick Alerts
  ALLOW NOTIFICATIONS  
  For Daily Alerts

  ಕಾಶಿನಾಥ್ ಗೂ 'ಅ' ಅಕ್ಷರಕ್ಕೂ ಇತ್ತು ಅವಿನಾಭಾವ ಸಂಬಂಧ.!

  By Pavithra
  |
  ಕಾಶೀನಾಥ್ ಗೂ 'ಅ' ಅಕ್ಷರಕ್ಕೂ ಇತ್ತು ಅವಿನಾಭಾವ ಸಂಬಂಧ | Filmibeat kannada

  ಕನ್ನಡ ಸಿನಿಮಾರಂಗದ ಅದ್ಭುತ ನಿರ್ದೇಶಕ ಕಾಶಿನಾಥ್ ಇನ್ನು ಮುಂದೆ ನೆನಪು ಮಾತ್ರ. ಸಾವು ಕಲಾವಿದರ ದೇಹಕಷ್ಟೆ. ಅವರು ಮಾಡಿದ ಸಿನಿಮಾ ಹಾಗೂ ನಟನೆ ಸದಾ ಪ್ರೇಕ್ಷಕರ ಕಣ್ಣು ಮುಂದೆ ಹಾಗೆಯೇ ಉಳಿದುಕೊಳ್ಳುತ್ತವೆ.

  ಕಾಶಿನಾಥ್ ಕನ್ನಡ ಸಿನಿಮಾರಂಗದಲ್ಲಿ ಬದಲಾವಣೆಗೆ ನಾಂದಿ ಹಾಡಿದವರು. ಹೊಸ ರೀತಿಯ ಸಿನಿಮಾಗಳನ್ನ ಪರಿಚಯಿಸಿದವರು. ಕಾಶಿನಾಥ್ ನಿರ್ದೇಶಿಸಿದ ಹಾಗೂ ಅಭಿನಯಿಸಿದ ಚಿತ್ರಗಳನ್ನ ಗಮನಿಸುತ್ತಾ ಹೋದರೆ, ಅನೇಕ ಚಿತ್ರಗಳ ಟೈಟಲ್ 'ಅ' ಅಕ್ಷರದಿಂದಲೇ ಪ್ರಾರಂಭ ಆಗುತ್ತವೆ.

  ಅಷ್ಟೇ ಅಲ್ಲ ಅವರು ಮಕ್ಕಳಿಗೂ 'ಅ' ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನೇ ಇಟ್ಟಿದ್ದಾರೆ. ಮಗ ಅಭಿಮನ್ಯು, ಮಗಳು ಅಮೃತವರ್ಷಿಣಿ. ಸಿನಿಮಾ ಚಿತ್ರೀಕರಣ ಮಾಡುವಾಗ, ಸಿನಿಮಾವನ್ನ ತೆರೆಗೆ ತರುವಾಗ ಶಾಸ್ತ್ರ ಕೇಳುವ ಪದ್ದತಿ ನಮ್ಮಲ್ಲಿ ಇಂದಿಗೂ ಇದೆ. ಹಾಗಾದ್ರೆ, ಕಾಶಿನಾಥ್ ಕೂಡ ಶಾಸ್ತ್ರ ಕೇಳಿ ಸಿನಿಮಾಗಳಿಗೆ 'ಅ' ಅಕ್ಷರದಿಂದ ಹೆಸರು ಇಡುತ್ತಿದ್ರಾ? ಅಂತ ಪ್ರಶ್ನೆ ಮಾಡಿದರೆ ನಿಜಕ್ಕೂ ಇಲ್ಲ.

  ಕಾಶಿನಾಥ್ ಸಂಸ್ಕೃತವನ್ನ ಚೆನ್ನಾಗಿ ಓದಿಕೊಂಡಿದ್ದರು. ಸಂಸ್ಕ್ರತದಿಂದ ಕನ್ನಡಕ್ಕೆ ಬಂದ ಸಾಕಷ್ಟು ಪದಗಳು 'ಅ' ಅಕ್ಷರದಿಂದ ಪ್ರಾರಂಭವಾಗುತ್ತವೆ. ಅದಷ್ಟೇ ಅಲ್ಲದೆ 'ಅ' ಅಕ್ಷರ ಎಲ್ಲರಿಗೂ ಪರಿಚಯವಾಗಿರುತ್ತೆ. ಇದೇ ಕಾರಣದಿಂದ ಕಾಶಿನಾಥ್ ನಿರ್ದೇಶನದ ಚಿತ್ರಗಳು 'ಅ' ಇಂದ ಪ್ರಾರಂಭವಾಗುತ್ತಿದ್ದವು. ಹೀಗಂತ ಸಂದರ್ಶನವೊಂದರಲ್ಲಿ ಕಾಶಿನಾಥ್ ಹೇಳಿದ್ದರು

  ಆದರೆ ಕಾಶಿನಾಥ್ ನಿರ್ದೇಶನದ ಕೊನೆಯ ಸಿನಿಮಾಗೆ ಮಾತ್ರ 12 AM ಎಂದು ಟೈಟಲ್ ಇಟ್ಟಿದ್ದರು. ಒಟ್ಟಾರೆ ಸಾಕಷ್ಟು ವಿಭಿನ್ನತೆಯನ್ನ ಪರಿಚಯಿಸಿಕೊಟ್ಟ ನಟ, ನಿರ್ದೇಶಕ ಇನ್ನು ಮುಂದೆ ನೆನಪು ಮಾತ್ರ.

  English summary
  Veteran Actor, Director Kashinath passes away in Bengaluru today (January 18th). Kashinath directed Most of the films with the title started with letter A.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X