ಅಂತೂ ಕಾಶಿನಾಥ್ ವಯಸ್ಸು ಗೊತ್ತಾಯ್ತು: ಜನ್ಮ ದಿನಾಂಕ ಜಗಜ್ಜಾಹೀರಾಯ್ತು.!

By Harshitha

Recommended Video

ಅಂತೂ ಕಾಶಿನಾಥ್ ವಯಸ್ಸು ಗೊತ್ತಾಯ್ತು | Filmibeat Kannada

'ಅನುಭವ', 'ಲವ್ ಟ್ರೇನಿಂಗ್', 'ಅಜಗಜಾಂತರ'... ಹೀಗೆ ಭಿನ್ನ ವಿಭಿನ್ನ ಸಿನಿಮಾಗಳನ್ನ ಸ್ಯಾಂಡಲ್ ವುಡ್ ಸಿನಿ ಪ್ರಿಯರಿಗೆ ನೀಡಿ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದ ಕಾಶಿನಾಥ್ ಈಗ ನೆನಪು ಮಾತ್ರ.

ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಕಾಶಿನಾಥ್ ನಿನ್ನೆ ಬೆಳಗ್ಗೆ ಹೃದಯಾಘಾತದಿಂದ ಕೊನೆಯುಸಿರೆಳೆದರು. ಕಾಶಿನಾಥ್ ಅವರದ್ದು ಸಾಯುವ ವಯಸ್ಸಲ್ಲ ಅಂತ ಹಲವು ಕಲಾವಿದರು ಕೂಡ ಮಮ್ಮಲ ಮರುಗಿದರು.

ಅಷ್ಟಕ್ಕೂ, ಕಾಶಿನಾಥ್ ಅವರಿಗೆ ಎಷ್ಟು ವಯಸ್ಸಾಗಿತ್ತು ಅಂತ ಕೇಳಿದ್ರೆ ಸ್ಯಾಂಡಲ್ ವುಡ್ ಮಂದಿ ಬಳಿ ಸ್ಪಷ್ಟ ಉತ್ತರ ಇರಲಿಲ್ಲ. ಯಾಕಂದ್ರೆ, ಕಾಶಿನಾಥ್ ಎಂದೂ ಹುಟ್ಟುಹಬ್ಬ ಆಚರಿಸಿಕೊಂಡವರೇ ಅಲ್ಲ.! ಯಾರ ಬಳಿಯೂ ತಮ್ಮ ವಯಸ್ಸು ಹಾಗೂ ಜನ್ಮದಿನಾಂಕವನ್ನ ಹೇಳಿಕೊಂಡವರೂ ಅಲ್ಲ.!

ಜನ್ಮದಿನಾಂಕ ಬಹಿರಂಗ ಮಾಡಿರಲಿಲ್ಲ

ಜನ್ಮದಿನಾಂಕ ಬಹಿರಂಗ ಮಾಡಿರಲಿಲ್ಲ

ಜೀ ಕನ್ನಡ ವಾಹಿನಿಯ ಜನಪ್ರಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲೂ ಕಾಶಿನಾಥ್ ತಮ್ಮ ಜನ್ಮದಿನಾಂಕವನ್ನ ಬಹಿರಂಗ ಪಡಿಸಿರಲಿಲ್ಲ.

ಹುಟ್ಟುಹಬ್ಬ ಆಚರಿಸುತ್ತಿರಲಿಲ್ಲ ಕಾಶಿನಾಥ್

ಹುಟ್ಟುಹಬ್ಬ ಆಚರಿಸುತ್ತಿರಲಿಲ್ಲ ಕಾಶಿನಾಥ್

''ಹುಟ್ಟುಹಬ್ಬ ಆಚರಿಸಿಕೊಂಡರೆ ಒಂದು ವರ್ಷ ಆಯಸ್ಸು ಕಮ್ಮಿಯಾಗುತ್ತೆ ಅಂತ ಖುಷಿ ಪಡ್ಬೇಕಾ.? ಅಥವಾ ವಯಸ್ಸು ಜಾಸ್ತಿ ಅಂತ ಖುಷಿ ಪಡ್ಬೇಕಾ.? ಮತ್ಯಾಕೆ ಬರ್ತಡೇ.?'' ಎನ್ನುತ್ತಿದ್ದ ಕಾಶಿನಾಥ್ ಅವರ ಜನ್ಮದಿನಾಂಕ ಇದೀಗ ಜಗಜ್ಜಾಹೀರಾಗಿದೆ.

ಕಾಶಿನಾಥ್ ಹುಟ್ಟಿದ್ದು ಯಾವಾಗ.?

ಕಾಶಿನಾಥ್ ಹುಟ್ಟಿದ್ದು ಯಾವಾಗ.?

ಕಾಶಿನಾಥ್ ಅವರ ಜನ್ಮದಿನಾಂಕ ಮೇ 8, 1951. ಈ ವಿಚಾರ ಜಗಜ್ಜಾಹೀರಾಗಿರುವುದು ಕಾಶಿನಾಥ್ ಅವರ ಡ್ರೈವಿಂಗ್ ಲೈಸೆನ್ಸ್ ನಿಂದ. ಕಾಶಿನಾಥ್ ಅವರ ನಿಧನದ ನಂತರ ಅವರ ಡ್ರೈವಿಂಗ್ ಲೈಸೆನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಾಶಿನಾಥ್ ಅವರ ವಯಸ್ಸೆಷ್ಟು.?

ಕಾಶಿನಾಥ್ ಅವರ ವಯಸ್ಸೆಷ್ಟು.?

ಕಾಶಿನಾಥ್ ಅವರಿಗೆ 65 ವರ್ಷ ಅಂತ ನಿನ್ನೆ ಕೆಲವರು ಹೇಳಿದ್ದರು. ಇನ್ನೂ ಕಾಶಿನಾಥ್ ಅವರಿಗೆ 67 ವರ್ಷ ವಯಸ್ಸಾಗಿತ್ತು ಎಂದು ವರದಿ ಆಗಿತ್ತು. ಆದ್ರೆ, ಕಾಶಿನಾಥ್ ಅವರ ವಯಸ್ಸು 66 ವರ್ಷ, 8 ತಿಂಗಳು. ಚಿತ್ರರಂಗದಲ್ಲಿ ಕಾಶಿನಾಥ್ ಇನ್ನೂ ಸಕ್ರಿಯವಾಗಿ ಇರುವಾಗಲೇ ಇಹಲೋಕ ತ್ಯಜಿಸಿದರು.

More from Filmibeat

English summary
Veteran Kannada Actor, Director Kashinath never celebrated his Birthday. But now after his death, his birth date is revealed in his Driving Licence.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X