ಕಾಶಿನಾಥ್ ಬಾಯಿಂದ ಆ ಮಾತು ಬಂದಿದ್ದೇಕೆ.? ಇತ್ತೇ ಸಾವಿನ ಮುನ್ಸೂಚನೆ.?
ಸ್ಯಾಂಡಲ್ ವುಡ್ ಪಾಲಿಗೆ ಇಂದು ಕರಾಳ ದಿನ. ಇಡೀ ಚಂದನವನವೇ ಇವತ್ತು ದುಃಖದ ಮಡುವಿನಲ್ಲಿ ಮುಳುಗಿದೆ. ಕಾರಣ, ಕನ್ನಡ ಚಿತ್ರರಂಗದ ಹಿರಿಯ ಕೊಂಡಿ ಕಳಚಿ ಬಿದ್ದಿದೆ.
ಹೃದಯಾಘಾತಕ್ಕೆ ಒಳಗಾಗಿ ಇಂದು ಕನ್ನಡ ಚಿತ್ರರಂಗದ ನಟ, ನಿರ್ದೇಶಕ ಕಾಶಿನಾಥ್ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಬೆಳ್ಳಂಬೆಳಗ್ಗೆಯೇ ಬರಸಿಡಿಲಿನಂತೆ ಬಡಿದ ಕಾಶಿನಾಥ್ ಅಗಲಿಕೆ ಸುದ್ದಿಯಿಂದಾಗಿ ಇಡೀ ಕನ್ನಡ ಚಿತ್ರರಂಗವೇ ಶೋಕ ಸಾಗರದಲ್ಲಿ ಮುಳುಗಿದೆ.
ಕಾಶಿನಾಥ್ : ಪ್ರತಿಭಾವಂತ, ಸ್ವಾಭಿಮಾನಿ ಮತ್ತು ರೆಬೆಲ್
ಇವತ್ತು ಇಹಲೋಕ ತ್ಯಜಿಸಿರುವ ಕಾಶಿನಾಥ್ ಅವರಿಗೆ ಸಾವಿನ ಮುನ್ಸೂಚನೆ ಇತ್ತಾ ಎಂಬ ಅನುಮಾನ ಸದ್ಯ ಕೆಲವರಲ್ಲಿ ಮೂಡಿದೆ. ಅದಕ್ಕೆ ಕಾರಣ ಎರಡೇ ಎರಡು ದಿನಗಳ ಹಿಂದೆ ಕಾಶಿನಾಥ್ ಅವರ ಬಾಯಿಂದ ಬಂದ ಕೆಲ ಮಾತುಗಳು...
ಎರಡು ದಿನಗಳ ಹಿಂದೆ ಕಾಶಿನಾಥ್ ಬಾಯಿಂದ ಬಂದ ಮಾತುಗಳೇನು.? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ಓದಿರಿ...

ಎರಡು ದಿನಗಳ ಹಿಂದೆ ಡಬ್ಬಿಂಗ್ ಮಾಡಿದ್ದ ಕಾಶಿನಾಥ್.!
ನಿಮಗೆಲ್ಲ ಗೊತ್ತಿರುವ ಹಾಗೆ, 'ಓಳ್ ಮುನಿಸ್ವಾಮಿ' ಎಂಬ ಸಿನಿಮಾದಲ್ಲಿ ಕಾಶಿನಾಥ್ ಅಭಿನಯಿಸುತ್ತಿದ್ದರು. 'ಓಳ್ ಮುನಿಸ್ವಾಮಿ' ಚಿತ್ರದ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಮೊನ್ನೆಯಷ್ಟೇ ಡಬ್ಬಿಂಗ್ ಕಾರ್ಯ ಕೂಡ ಮುಗಿದಿತ್ತು. ಎರಡು ದಿನಗಳ ಹಿಂದೆಯಷ್ಟೇ ತಮ್ಮ ಭಾಗದ ಡಬ್ಬಿಂಗ್ ಪೂರ್ಣಗೊಳಿಸಿದ್ದರು ಕಾಶಿನಾಥ್.

ಕಾಶಿನಾಥ್ ಬಾಯಿಂದ ಬಂದ ಕೊನೆಯ ಡೈಲಾಗ್ ಏನ್ ಗೊತ್ತಾ.?
''ಕಂಟೆಂಟ್ ಇದ್ಮೇಲೆ ಕಟೌಟ್ ಯಾಕ್ರೋ ಬೇಕು.? ಗಂಟೆ, ಜಾಗಟೆ, ತಮಟೆ ಎಲ್ಲಾ ರೆಡಿ ಮಾಡಿಕೊಳ್ಳಿ... ಸದ್ಯದಲ್ಲೇ ನಿಮ್ಮೂರಿಗೆ ಬರ್ತಿದ್ದೀನಿ'' - ಇದು ಎರಡು ದಿನಗಳ ಹಿಂದೆ ಡಬ್ಬಿಂಗ್ ಕಾರ್ಯದಲ್ಲಿ ಪಾಲ್ಗೊಂಡಿದ್ದ ಕಾಶಿನಾಥ್ ಬಾಯಿಂದ ಬಂದ ಕೊನೆಯ ಡೈಲಾಗ್.

ಕಾಶೀನಾಥ್ ಬರೆಯಿಸಿದ್ದ ಡೈಲಾಗ್.!
ಅಷ್ಟಕ್ಕೂ, ಈ ಡೈಲಾಗ್ ನಿರ್ದೇಶಕರ ತಲೆಯಲ್ಲಿ ಇರಲಿಲ್ವಂತೆ. ಡೈಲಾಗ್ ಹೀಗೆ ಬರಲಿ ಅಂತ ನಿರ್ದೇಶಕರಿಗೆ ಹೇಳಿ ಬರೆಯಿಸಿದ್ರಂತೆ ಕಾಶಿನಾಥ್.!

ಸಾವಿನ ಮುನ್ಸೂಚನೆ ಇತ್ತಾ.?
''ಗಂಟೆ, ಜಾಗಟೆ, ತಮಟೆ ಎಲ್ಲಾ ರೆಡಿ ಮಾಡಿಕೊಳ್ಳಿ... ಸದ್ಯದಲ್ಲೇ ನಿಮ್ಮೂರಿಗೆ ಬರ್ತಿದ್ದೀನಿ'' ಅಂತ ಹೇಳಿ ಡಬ್ಬಿಂಗ್ ಮುಗಿಸಿದ ಕಾಶಿನಾಥ್ ಅವತ್ತೇ ಆಸ್ಪತ್ರೆಗೆ ದಾಖಲಾದರು. ''ನಿಮ್ಮೂರಿಗೆ ಬರ್ತೀನಿ'' ಅಂತ ಹೇಳಿ ಡಬ್ಬಿಂಗ್ ಸ್ಟುಡಿಯೋದಿಂದ ಹೊರಗೆ ಬಂದಿದ್ದ ಕಾಶಿನಾಥ್ ಈಗ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಇದಕ್ಕೆ ಕಾಕತಾಳೀಯ ಎನ್ನಬೇಕೋ.? ವಿಚಿತ್ರ ಎನ್ನಬೇಕೋ.? ಅಥವಾ ಕಾಶಿನಾಥ್ ಅವರಿಗೆ ಸಾವಿನ ಮುನ್ಸೂಚನೆ ಇತ್ತು ಎನ್ನಬೇಕೋ.?

ಸಹ ನಿರ್ಮಾಪಕ ಹೇಳಿದಿಷ್ಟು.!
''ಡೈಲಾಗ್ ಹೀಗೆ ಬರಲಿ ಅಂತ ನಿರ್ದೇಶಕರಿಗೆ ಹೇಳಿ ಬರೆಯಿಸಿದ್ದರು. ಈ ತರಹ ಡೈಲಾಗ್ ಯಾಕೆ ಬರೆಯಿಸಿದ್ರು ಅಂತ ಗೊತ್ತಿಲ್ಲ. ನಮಗೆ ತುಂಬಾ ಶಾಕ್ ಆಗಿದೆ. ನಂಬಲು ಆಗುತ್ತಿಲ್ಲ. ಡಬ್ಬಿಂಗ್ ಮುಗಿದ್ಮೇಲೆ ಆಸ್ಪತ್ರೆಗೆ ದಾಖಲಾಗಿರುವ ವಿಷಯ ಕೂಡ ನಮಗೆ ಗೊತ್ತಿರಲಿಲ್ಲ'' ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ 'ಓಳ್ ಮುನಿಸ್ವಾಮಿ' ಚಿತ್ರದ ಸಹ ನಿರ್ಮಾಪಕ ಕೇಶವಗೌಡ್ರು.

ಲವಲವಿಕೆಯಿಂದ ಓಡಾಡಿಕೊಂಡು ಇದ್ದರು
ಹಾಗ್ನೋಡಿದ್ರೆ, 'ಓಳ್ ಮುನಿಸ್ವಾಮಿ' ಚಿತ್ರದ ಶೂಟಿಂಗ್ ಹಾಗೂ ಡಬ್ಬಿಂಗ್ ಸಂದರ್ಭದಲ್ಲಿ ಕಾಶಿನಾಥ್ ಲವಲವಿಕೆಯಿಂದಲೇ ಓಡಾಡಿಕೊಂಡು ಇದ್ದರಂತೆ. ಇದ್ದಕ್ಕಿದ್ದಂತೆ ಆಸ್ಪತ್ರೆಗೆ ದಾಖಲಾಗಿ ಸಾವನ್ನಪ್ಪಿರುವ ಸುದ್ದಿ ಎಲ್ಲರನ್ನೂ ದಿಗ್ಭ್ರಾಂತರನ್ನಾಗಿಸಿದೆ.

ವಿದಾಯದ ಸೂಚನೆ ನೀಡಿದ್ರಾ.?
ತಮ್ಮ ಕೊನೆಯ ಡೈಲಾಗ್ ಮೂಲಕ ಕಾಶಿನಾಥ್ ವಿದಾಯದ ಸೂಚನೆ ನೀಡಿದ್ರಾ.? ಡೈಲಾಗ್ ನಲ್ಲೇ ಕೊನೆಯುಸಿರೆಳೆಯುವ ಮುನ್ಸೂಚನೆ ನೀಡಿದ್ರಾ.? ಎಂಬುದಕ್ಕೆ ಉತ್ತರ ಕೊಡಲು ಕಾಶಿನಾಥ್ ನಮ್ಮೊಂದಿಗಿಲ್ಲ. ಇನ್ನೆಂದು ಬಾರದ ಲೋಕಕ್ಕೆ ಕಾಶಿನಾಥ್ ತೆರಳಿದ್ದಾರೆ. ಆದ್ರೆ, ಅವರ ನೆನಪು ಮಾತ್ರ ಅವರ ಸಿನಿಮಾಗಳ ಮೂಲಕ ಹಚ್ಚಹಸಿರಾಗಿದೆ.


Click it and Unblock the Notifications