»   » ನರ್ತಕಿಯಲ್ಲಿ ಕಠಾರಿವೀರ 3ಡಿ ಪ್ರದರ್ಶನ ಆರಂಭ

ನರ್ತಕಿಯಲ್ಲಿ ಕಠಾರಿವೀರ 3ಡಿ ಪ್ರದರ್ಶನ ಆರಂಭ

Posted By:
Subscribe to Filmibeat Kannada

ಕನ್ನಡದ ಮೊಟ್ಟಮೊದಲ ತ್ರಿಡಿ ಚಿತ್ರ ಎಂಬ ಹಣೆಪಟ್ಟಿ ಹೊತ್ತಿರುವ 'ಕಠಾರಿವೀರ ಸುರಸುಂದರಾಂಗಿ' ಚಿತ್ರ ರಾಜ್ಯದಾದ್ಯಂತ ಗುರುವಾರ (ಮೇ10) ತೆರೆಕಂಡಿತ್ತು. ಒಟ್ಟು 170 ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರದ ತ್ರಿಡಿ ಆವೃತ್ತಿ ಕೇವಲ 50 ಪ್ಲಸ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಅವುಗಳಲ್ಲಿ ಬೆಂಗಳೂರಿನ ನರ್ತಕಿ ಚಿತ್ರಮಂದಿರವೂ ಒಂದು.

ಆದರೆ ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲೂ ಕಠಾರಿವೀರ 3ಡಿ ಚಿತ್ರ ಕಾರಣಾಂತರಗಳಿಂದ ಕೈಕೊಟ್ಟಿತ್ತು. ಕೊನೆಗೆ ಬದಲಾದ ವ್ಯವಸ್ಥೆಯಲ್ಲಿ ತ್ರಿಭುವನ್ ಚಿತ್ರಮಂದಿರದಲ್ಲಿ ಪ್ರೇಕ್ಷಕರು 3ಡಿ ಚಿತ್ರವೀಕ್ಷಣೆ ಮಾಡಬೇಕಾಯಿತು.

ಇಂದಿನಿಂದ ಅಂದರೆ ಶುಕ್ರವಾರ (ಮೇ 11) ನರ್ತಕಿಯಲ್ಲಿ 3ಡಿ ಶೋ ಆರಂಭವಾಗಿದೆ. ಬೆಳಗಿನ ಶೋ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ನೆನ್ನೆ ಸ್ಥಗಿತಗೊಂಡಿದ್ದ 3ಡಿ 'ಕಠಾರಿವೀರ' ಚಿತ್ರವನ್ನು ಪ್ರೇಕ್ಷಕರು ಇಂದಿನಿಂದ ನರ್ತಕಿ ಚಿತ್ರಮಂದಿರದಲ್ಲಿ ವೀಕ್ಷಿಸಬಹುದಾಗಿದೆ. (ಒನ್‌ಇಂಡಿಯಾ ಕನ್ನಡ)

English summary
Upendra and Ramya lead Kannada film Katari Veera Surasundarangi 3d version show starts from 11th May in Bangalore Nartaki theater. On Thursday (10th May) the 3d version of the movie cancled due to some technical reasons.
Please Wait while comments are loading...