ಟ್ರೆಂಡಿಂಗ್ 1: ರಿಷಬ್ ಶೆಟ್ಟಿ 7 ಕಥೆಗಳ ಸಂಗಮ, ಹೃದಯಂಗಮ
'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಎಂಬ ಸದಭಿರುಚಿಯ ಸಿನಿಮಾ ಮಾಡಿದ್ದ ರಿಷಭ್ ಶೆಟ್ಟಿ ಈಗ ಏಳು ಕಥೆಗಳನ್ನು ಹೇಳುತ್ತಿದ್ದಾರೆ. ಅವರ ಮುಂದಿನ ಸಿನಿಮಾ 'ಕಥಾ ಸಂಗಮ' ಟ್ರೇಲರ್ ನಿನ್ನೆ (ನವೆಂಬರ್ 4) ಬಿಡುಗಡೆಯಾಗಿದೆ.
ಚಿತ್ರದ ಟ್ರೇಲರ್ ಗೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ. ಯೂಟ್ಯೂಬ್ ನಲ್ಲಿ 15 ಗಂಟೆಗಳಲ್ಲಿ 1 ಲಕ್ಷ 50 ಸಾವಿರಕ್ಕೂ ಹೆಚ್ಚಿನ ವೀಕ್ಷಣೆ ಪಡೆದುಕೊಂಡಿದೆ. ಟ್ರೇಲರ್ ಟ್ರೆಂಡಿಂಗ್ ಒನ್ ಸ್ಥಾನವನ್ನು ಏರಿದೆ. ತುಂಬ ಒಳ್ಳೆಯ ಕಾಮೆಂಟ್ಸ್ ಗಳು ಟ್ರೇಲರ್ ಗೆ ಬರುತ್ತಿದೆ. ಮೇಕಿಂಗ್ ಕ್ವಾಲಿಟಿ ಅದ್ಭುತವಾಗಿದೆ.
ಏಳು ಕಥೆಗಳು ಸಿನಿಮಾದಲ್ಲಿ ಇವೆ. ಏಳು ನಿರ್ದೇಶಕರು ಒಂದೊಂದು ಕಥೆ ಹೇಳಿದ್ದಾರೆ. ಏಳು ಜನ ಕ್ಯಾಮರಾ ಮ್ಯಾನ್ ಗಳು ಕೆಲಸ ಮಾಡಿದ್ದಾರೆ. ಹೆಚ್ ಕೆ ಪ್ರಕಾಶ್, ಪ್ರದೀಪ್ ಎನ್ ಆರ್, ಹಾಗೂ ರಿಷಬ್ ಶೆಟ್ಟಿ ಸಿನಿಮಾಗೆ ಬಂಡವಾಳ ಹಾಕಿದ್ದಾರೆ.

ರಿಷಬ್ ಶೆಟ್ಟಿ ಫಿಲ್ಮ್ಸ್ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣ ಆಗಿದೆ. ರಿಷಭ್ ಈ ಏಳು ಕಥೆಗಳಲ್ಲಿ ಯಾವುದನ್ನು ನಿರ್ದೇಶನ ಮಾಡುತ್ತಿಲ್ಲ, ಬದಲಿಗೆ ಒಂದು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ, ನಟ ಪ್ರಕಾಶ್ ಬೆಳವಾಡಿ, ಕಿಶೋರ್, ಅವಿನಾಶ್, ನಟಿ ಹರಿಪ್ರಿಯಾ, ರಾಜ್ ಬಿ ಶೆಟ್ಟಿ, ಯಜ್ಞ ಶೆಟ್ಟಿ, ಪ್ರಮೋದ್ ಶೆಟ್ಟಿ, ಅಮೃತ ನಾಯಕ್ ಸಿನಿಮಾದಲ್ಲಿ ಬೇರೆ ಬೇರೆ ಕಥೆಗಳಲ್ಲಿ ಕಾಣಿಸಿಕೊಂಡಿದ್ದಾರೆ.
'ಕಥಾ ಸಂಗಮ' ಟ್ರೇಲರ್ ಪ್ರೇಕ್ಷಕರ ನಂಬಿಕೆ ಪಡೆದಿದೆ. ಸಿನಿಮಾದ ಮೇಲೆ ನಿರೀಕ್ಷೆ ಹುಟ್ಟುವಂತೆ ಮಾಡಿದೆ. ಕನ್ನಡದಲ್ಲಿ ಆಗುತ್ತಿರುವ ವಿಭಿನ್ನ ಪ್ರಯೋಗಗಳಿಗೆ ಈ ಸಿನಿಮಾ ಕೂಡ ಸೇರಿಕೊಂಡಿದೆ.


Click it and Unblock the Notifications











