ರಿಷಬ್ ಶೆಟ್ಟಿ 'ಕಥಾ ಸಂಗಮ' ಬಿಡುಗಡೆ ದಿನಾಂಕ ನಿಗದಿ
ರಿಷಭ್ ಶೆಟ್ಟಿ ನಿರ್ಮಾಣದ ಕಥಾ ಸಂಗಮ ಸಿನಿಮಾದ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಸಿನಿಮಾ ಡಿಸೆಂಬರ್ 6 ರಂದು ತೆರೆಗೆ ಬರಲಿದೆ.
ಸಿನಿಮಾದ ಸೆನ್ಸಾರ್ ಮುಗಿದಿದ್ದು, ಯೂ ಪ್ರಮಾಣ ಪತ್ರ ಸಿಕ್ಕಿದೆ. ಚಿತ್ರದ ಬಿಡುಗಡೆ ದಿನಾಂಕವೂ ಹೊರ ಬಂದಿದೆ. ವರ್ಷಾಂತ್ಯದಲ್ಲಿ ತಮ್ಮ ಕಥೆಯನ್ನು ರಿಭಷ್ ಶೆಟ್ಟಿ ಮತ್ತು ತಂಡ ಹೇಳುತ್ತಿದೆ.
ಕಥಾ ಸಂಗಮದಲ್ಲಿ ಏಳು ಕಥೆಗಳು ಸಂಗಮ ಆಗಿದೆ. ಏಳು ನಿರ್ದೇಶಕರು, ಏಳು ಸಂಗೀತ ನಿರ್ದೇಶಕರು ಹಾಗೂ ಏಳು ಸಿನಿಮಾಟೋಗ್ರಾಫರ್ ಗಳು ಕೆಲಸ ಮಾಡಿದ್ದಾರೆ. ರಿಷಭ್ ಶೆಟ್ಟಿ ಹಾಗೂ ಪ್ರಕಾಶ್ ಹೆಚ್ ಕೆ ಹಾಗೂ ಪ್ರದೀಪ್ ಎನ್ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ಚಿತ್ರ ಬ್ರಹ್ಮ ಪುಟ್ಟಣ್ಣ ಕಣಗಾಲ್ ರಿಗೆ ಸಿನಿಮಾವನ್ನು ಅರ್ಪಿಸಲಾಗಿದೆ.

ನಟ ಕಿಶೋರ್, ಪ್ರಕಾಶ್ ಬೆಳವಾಡಿ, ಅವಿನಾಶ್, ನಟಿ ಹರಿಪ್ರಿಯಾ, ರಾಜ್ ಬಿ ಶೆಟ್ಟಿ, ಯಜ್ಞ ಶೆಟ್ಟಿ, ಪ್ರಮೋದ್ ಶೆಟ್ಟಿ, ಅಮೃತ ನಾಯಕ್ ಸಿನಿಮಾದಲ್ಲಿ ಬೇರೆ ಬೇರೆ ಕಥೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಪಾತ್ರವನ್ನು ರಿಷಭ್ ಅವರೇ ನಿರ್ವಹಿಸಿದ್ದಾರೆ.
ಸಿನಿಮಾ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದ್ದು, ಹೊಸತನದಿಂದ ಕೂಡಿದೆ. ದೊಡ್ಡ ಮಟ್ಟದ ಮೆಚ್ಚುಗೆ ಟ್ರೇಲರ್ ಗೆ ಸಿಕ್ಕಿದೆ..


Click it and Unblock the Notifications











