ಸುದೀಪ್ 'ಫ್ಯಾಂಟಮ್' ಸಿನಿಮಾದಲ್ಲಿ ಕತ್ರಿನಾ ಕೈಫ್; ನಿರ್ಮಾಪಕ ಜಾಕ್ ಮಂಜು ಹೇಳಿದ್ದೇನು?

ಸ್ಯಾಂಡಲ್ ವುಡ್ ನ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಸಿನಿಮಾ ಕೂಡ ಒಂದು. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಕೊನೆ ಹಂತದ ಚಿತ್ರೀಕರಣಕ್ಕೆ ಸಜ್ಜಾಗಿದೆ. ಈ ನಡುವೆ ಚಿತ್ರದಿಂದ ಬಿಗ್ ಬ್ರೇಕಿಂಗ್ ಸುದ್ದಿಯೊಂದು ಹರಿದಾಡುತ್ತಿದ್ದಾರೆ.

ಬಾಲಿವುಡ್ ನ ಖ್ಯಾತ ನಟಿ ಕತ್ರೀನಾ ಕೈಫ್ ಸುದೀಪ್ ಜೊತೆ ನಟಿಸಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಬಾಲಿವುಡ್ ಅಥವಾ ಬೇರೆ ಬೇರೆ ಭಾಷೆಯ ಸ್ಟಾರ್ ನಟಿಯರು ಕನ್ನಡಕ್ಕೆ ಎಂಟ್ರಿ ಕೊಡುತ್ತಾರೆ ಎನ್ನುವ ಸುದ್ದಿ ಕೇಳಿಬರುತ್ತಿರುವುದು ಹೊಸದೇನಲ್ಲ. ಆಗಾಗ ಟಾಪ್ ನಟಿಮಣಿಯರ ಹೆಸರುಗಳು ಗಾಂಧಿನದರದ ಗಲ್ಲಿಗಳಲ್ಲಿ ಸುದ್ದು ಮಾಡುತ್ತಿರುತ್ತೆ. ಇದೀಗ ಕತ್ರಿನಾ ಬರ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಮುಂದೆ ಓದಿ..

ಫ್ಯಾಂಟಮ್ ಸಿನಿಮಾದ ವಿಶೇಷ ಹಾಡಿನಲ್ಲಿ ಕತ್ರಿನಾ

ಫ್ಯಾಂಟಮ್ ಸಿನಿಮಾದ ವಿಶೇಷ ಹಾಡಿನಲ್ಲಿ ಕತ್ರಿನಾ

ಕತ್ರಿನಾ ಕೈಫ್ ಹೆಸರು ಬಲವಾಗಿ ಕೇಳಿಬರುತ್ತಿದೆ. ಫ್ಯಾಂಟಮ್ ಸಿನಿಮಾದ ವಿಶೇಷ ಹಾಡಿಗಾಗಿ ಕತ್ರಿನಾ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡ್ತಿದ್ದಾರೆ ಎಂದು ಹೇಳಲಾಗುತ್ತಿದೆ. ವಿಶೇಷ ಹಾಡಿಗಾಗಿ ಬೆಂಗಳೂರಿನಲ್ಲಿ ಅದ್ದೂರಿ ಸೆಟ್ ನಿರ್ಮಾಣ ಮಾಡಲಾಗುತ್ತಂತೆ. ಈ ಹಾಡಿನಲ್ಲಿ ಕತ್ರಿನಾ ಹೆಜ್ಜೆ ಹಾಕಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

ಕತ್ರಿನಾ ಬರದಿದ್ದರೆ ನೋರಾ ಫತೇಹಿ ಎಂಟ್ರಿ

ಕತ್ರಿನಾ ಬರದಿದ್ದರೆ ನೋರಾ ಫತೇಹಿ ಎಂಟ್ರಿ

ಸಿನಿಮಾತಂಡ ಕತ್ರಿನಾ ಮತ್ತು ನೋರಾ ಫತೇಹಿ ಅವರನ್ನು ಸಂಪರ್ಕ ಮಾಡಿದ್ದಾರಂತೆ. ಇಬ್ಬರಲ್ಲಿ ಒಬ್ಬರು ಫ್ಯಾಂಟಮ್ ಸಿನಿಮಾದ ವಿಶೇಷ ಹಾಡಿಗೆ ಹೆಜ್ಜೆ ಹಾಕುವುದು ಖಚಿತ ಎನ್ನುತ್ತಿವೆ ಮೂಲಗಳು. ಕತ್ರಿನಾ ಕೈಫ್ ಡೇಟ್ ಹೊಂದಾಣಿಕೆ ಆಗದಿದ್ದರೆ ನೋರಾ ಫತೇಹಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ನಿರ್ಮಾಪಕರು ಹೇಳಿದ್ದೇನು?

ನಿರ್ಮಾಪಕರು ಹೇಳಿದ್ದೇನು?

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರ್ಮಾಪಕ ಜಾಕ್ ಮಂಜು, ಕತ್ರಿನಾ ಜೊತೆ ಮಾತುಕತೆ ನಡೆಸಿರುವುದಾಗಿ ಹೇಳಿದ್ದಾರೆ. ಕತ್ರಿನಾ ಡೇಟ್ ಹೊಂದಾಣಿಕೆ ಆಗದಿದ್ದರೆ ನೋರಾ ಫತೇಹಿ ಕರೆತರಲು ಪ್ರಯತ್ನ ಮಾಡುತ್ತಿರುವುದಾಗಿ ಹೇಳಿದ್ದಾರೆ.

Recommended Video

Sudeep, Vivek Oberoi ಕೈ ತಪ್ಪಿದ Muttappa Rai ಸಿನಿಮಾ | MR | Filmibeat Kannada
ಕೊನೆಯ ಹಂತದ ಚಿತ್ರೀಕರಣಕ್ಕೆ ಸಿದ್ಧತೆ

ಕೊನೆಯ ಹಂತದ ಚಿತ್ರೀಕರಣಕ್ಕೆ ಸಿದ್ಧತೆ

ಫ್ಯಾಂಟಮ್ ಸಿನಿಮಾದ ಚಿತ್ರೀಕರಣ ಸುಮಾರು 3 ತಿಂಗಳಿಂದ ಹೈದರಾಬಾದ್ ನಲ್ಲಿ ನಡೆಯುತ್ತಿತ್ತು. ಇತ್ತೀಚಿಗೆಷ್ಟೆ ಚಿತ್ರದ ಕ್ಲೈಮ್ಯಾಕ್ಸ ಚಿತ್ರೀಕರಣ ಮುಗಿಸಿ ವಾಪಸ್ ಆಗಿರುವ ಸಿನಿಮಾತಂಡ ಇದೀಗ ಕೇರಳದ ಕಡೆ ಹೊರಟಿದ್ದಾರೆ. ಡಿಸೆಂಬರ್ ಮೊದಲವಾರದಿಂದ ಕೊನೆಯ ಹಂತದ ಚಿತ್ರೀಕರಣ ಪ್ರಾರಂಭವಾಗಲಿದೆ.

More from Filmibeat

English summary
Bollywood Actress Katrina Kaif likely to play in Sudeep starrer phantom movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X