ನಾಳೆ 'ಕವಚ' ಜೊತೆಗೆ ಬರ್ತಿದೆ 'ಗೌಡ್ರು ಸೈಕಲ್' ಸಿನಿಮಾ
ನಾಳೆ ಶುಕ್ರವಾರ ಹೊಸ ಹೊಸ ಸಿನಿಮಾಗಳು ಚಿತ್ರಮಂದಿರಕ್ಕೆ ಬರುವ ದಿನ. ಈ ವಾರ ಕನ್ನಡದ ಎರಡು ಸಿನಿಮಾಗಳು ಬಿಡುಗಡೆಯಾಗುತ್ತಿವೆ. 'ಕವಚ' ಹಾಗೂ 'ಗೌಡ್ರು ಸೈಕಲ್' ಚಿತ್ರಗಳು ನಾಳೆ ರಿಲೀಸ್ ಆಗುತ್ತಿವೆ.
ಶಿವರಾಜ್ ಕುಮಾರ್ ಮೊದಲ ಬಾರಿಗೆ ಸಿನಿಮಾದಲ್ಲಿ ಅಂಧನ ಪಾತ್ರವನ್ನು ಮಾಡುತ್ತಿದ್ದಾರೆ. ಈ ಚಿತ್ರ ಮಲೆಯಾಳಂನ 'ಒಪ್ಪಂ' ಚಿತ್ರದ ರಿಮೇಕ್ ಆಗಿದೆ. ಈಗಾಗಲೇ ಟ್ರೇಲರ್ ಮತ್ತು ಹಾಡುಗಳು ಒಂದಷ್ಟು ಕುತೂಹಲವನ್ನು ಹುಟ್ಟುಹಾಕಿದೆ. ಜಿ ವಿ ಆರ್ ವಾಸು ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಇಲ್ಲಿದೆ.

ಇಶಾ ಕೊಪ್ಪಿಕರ್, ಕೃತಿಕಾ ಸಿನಿಮಾದ ನಾಯಕಿಯರಾಗಿದ್ದಾರೆ. ರಾಹುಲ್ ಶ್ರೀವತ್ಸವ್ ಕ್ಯಾಮರಾ ಹಿಡಿದಿದ್ದಾರೆ.

'ಗೌಡ್ರು ಸೈಕಲ್' ಸಿನಿಮಾ ಕೂಡ ಈ ವಾರ ತೆರೆಗೆ ಬರುತ್ತಿದೆ. ಹೆಸರೇ ಹೇಳುವಂತೆ ಊರಿನ ಗೌಡರ ಸೈಕಲ್ ಪ್ರೇಮ ಈ ಚಿತ್ರದ ಕಥೆಯಾಗಿದೆ. 'ರಾಮಾ ರಾಮಾ ರೇ' ಖ್ಯಾತಿಯ ನಟಿ ಬಿಂಬಶ್ರೀ ಅಭಿನಯಿಸಿದ್ದಾರೆ. ಶಶಿಕಾಂತ್ ನಾಯಕನಾಗಿದ್ದಾರೆ. ಚಿತ್ರದಲ್ಲಿ ಸಖತ್ ಹಾಸ್ಯ ಇರಲಿದೆ.
English summary
Actor Shivaraj Kumar 'Kavacha' and 'Gowdru Cycle' movie will be releasing tomorrow April 5th.


Click it and Unblock the Notifications