ರಾಜರ ಹಿರಿಮಗನಿಗಾಗಿ ಹಾಡು ಹಾಡಿದ ಅಂಧ ಮಕ್ಕಳು
ರಾತ್ರಿ ಐದು ನಿಮಿಷ ಕರೆಂಟ್ ಹೋದರೆನೇ ನಮಗೆ ಏನ್ ಮಾಡಬೇಕು ಅಂತ ತಿಳಿಯಲ್ಲ. ಯಾವಾಗ ಕತ್ತಲು ಕಳೆದು ಬೆಳಕು ಬರುತ್ತೋ ಅಂತ ಕಾಯುತ್ತೇವೆ. ಆದರೆ, ಕೆಲವರು ಜೀವನ ಪೂರ್ತಿ ಕತ್ತಲೆಯಲ್ಲಿ ಇರಬೇಕಾಗುತ್ತದೆ.
ನಟ ಶಿವರಾಜ್ ಕುಮಾರ್ ಈಗ ಕತ್ತಲ ಜೀವನದ ಅನುಭವ ಪಡೆದಿದ್ದಾರೆ. ಅರ್ಥಾತ್ ಅವರು 'ಕವಚ' ಸಿನಿಮಾದಲ್ಲಿ ಅಂಧನ ಪಾತ್ರ ಮಾಡಿದ್ದಾರೆ. ಶಿವಣ್ಣನ ವೃತ್ತಿ ಜೀವನದ ಮತ್ತೊಂದು ಮಹತ್ವದ ಪಾತ್ರದ ಸಿನಿಮಾ ಇದಾಗಿದೆ.
ಅಂದಹಾಗೆ, ನಿನ್ನೆ ಈ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಅಂಧ ಮಕ್ಕಳ ಜೊತೆಗೆ ಶಿವಣ್ಣ ಕೆಲ ಕಾಲ ಕಳೆದರು. ಮುಂದೆ ಓದಿ...

'ಕವಚ' ಟೀಸರ್ ರಿಲೀಸ್
ಶಿವಣ್ಣನ 'ಕವಚ' ಸಿನಿಮಾದ ಟೀಸರ್ ನಿನ್ನೆ ಬಿಡುಗಡೆಯಾಗಿದೆ. ಬೆಂಗಳೂರಿನ ಜಿ ಪಿ ನಗರದ ರಮಣ ಮಹರ್ಷಿ ಅಂಧ ಶಾಲೆಯಲ್ಲಿ ಟೀಸರ್ ಅನಾವರಣ ಮಾಡಲಾಗಿದೆ. ಶಿವಣ್ಣ ಸೇರಿದಂತೆ ಇಡೀ ಚಿತ್ರತಂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು. ನಟ ಧನಂಜಯ್ ಕೂಡ ಹಾಜರಿದ್ದರು.

ರಾಜರ ಹಿರಿಮಗನಿಗಾಗಿ ಹಾಡು
ಶಿವಣ್ಣ ತಮ್ಮ ಶಾಲೆಗೆ ಬಂದಿದ್ದು, ಅಲ್ಲಿನ ಅಂಧ ಮಕ್ಕಳಿಗೆ ಬಹಳ ಖುಷಿ ನೀಡಿತ್ತು. ಶಿವರಾಜ್ ಕುಮಾರ್ ಅವರಿಗೆ ಅವರ ನಟನೆಯ 'ವಜ್ರಕಾಯ' ಸಿನಿಮಾದ 'ಉಸಿರೇ ಉಸಿರೇ...' ಹಾಡು ಹಾಡುವ ಮೂಲಕ ಶುಭಾಶಯ ತಿಳಿಸಿದರು. ಮಕ್ಕಳ ಹಾಡು ಶಿವಣ್ಣನಿಗೆ ಸಂತೋಷ ನೀಡಿತು.

ಮೊದಲ ಬಾರಿಗೆ ಅಂಧನ ಪಾತ್ರ
ಶಿವರಾಜ್ ಕುಮಾರ್ ಈ ಸಿನಿಮಾದ ಮೂಲಕ ಮೊದಲ ಬಾರಿಗೆ ಅಂಧನ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾ ಮಲೆಯಾಳಂ ಭಾಷೆಯ 'ಒಪ್ಪಂ' ಸಿನಿಮಾದ ರಿಮೇಕ್ ಆಗಿದೆ. ಶಿವರಾಜ್ ಕುಮಾರ್ 14 ವರ್ಷದ ಬಳಿಕ ರಿಮೇಕ್ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ.
ಜಿ ವಿ ಆರ್ ವಾಸು ನಿರ್ದೇಶನ
ಜಿ ವಿ ಆರ್ ವಾಸು ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಹೆಚ್ ಎಂ ಎ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಶಿವರಾಜ್ ಕುಮಾರ್ ಜೊತೆಗೆ ಇಶಾ ಕೊಪಿಕರ್, ಕೃತಿಕ, ವಸಿಷ್ಟ, ಜಯಪ್ರಕಾಶ್, ರವಿ ಕಾಳೆ ಕಾಣಿಸಿಕೊಂಡಿದ್ದಾರೆ. ಚಿತ್ರದ ಟೀಸರ್ ಶಿವಣ್ಣ ಅಭಿಮಾನಿಗಳಿಗೆ ಇಷ್ಟವಾಗಿದೆ.


Click it and Unblock the Notifications











