ಮತ್ತೆ ನಿಗದಿಯಾಯ್ತು 'ಕವಚ' ಬಿಡುಗಡೆಯ ದಿನಾಂಕ, ಈ ಬಾರಿಯಾದ್ರೂ ಬರುತ್ತಾ ಸಿನಿಮಾ?
'ಕವಚ' ಸಿನಿಮಾ ನೋಡಲು ಶಿವರಾಜ್ ಕುಮಾರ್ ಅಭಿಮಾನಿಗಳು ಕಾಯುತ್ತಲೇ ಇದ್ದಾರೆ. ಆದರೆ, ಸಿನಿಮಾದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗುತ್ತಲೇ ಇದೆ. ಮತ್ತೆ ಇದೀಗ ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಿದೆ.
'ಕವಚ' ಸಿನಿಮಾ ಯುಗಾದಿ ಹಬ್ಬಕ್ಕೆ ರಾಜ್ಯಾದಂತ್ಯ ಬಿಡುಗಡೆಯಾಗುತ್ತಿದೆ. ಏಪ್ರಿಲ್ ಮೊದಲ ವಾರದಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ಮಾಡಿಕೊಂಡಿದೆ. ಪದೇ ಪದೇ ಸಿನಿಮಾದ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗುತ್ತಿದ್ದು, ಈ ಬಾರಿ ಯಾವುದೇ ಸಮಸ್ಯೆ ಆಗದೆ ಇರಲಿ ಎನ್ನುವುದು ಅಭಿಮಾನಿಗಳ ಬಯಕೆಯಾಗಿದೆ.
ಕಳೆದ ಡಿಸೆಂಬರ್ ನಲ್ಲಿ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ, ಕಾರಣಾಂತರಗಳಿಂದ ರಿಲೀಸ್ ಡೇಟ್ ಮುಂದಕ್ಕೆ ಹೋಯ್ತು. ಬಳಿಕ ಜನವರಿಗೆ ಫಿಕ್ಸ್ ಆಗಿದ್ದ ಬಿಡುಗಡೆ ದಿನಾಂಕ ಫೆಬ್ರವರಿಗೆ ಪೋಸ್ಟ್ ಪೋನ್ ಆಯ್ತು. ಆದರೆ, ಇದೀಗ ಏಪ್ರಿಲ್ ತಿಂಗಳಿನಲ್ಲಿ ಸಿನಿಮಾ ಬಿಡುಗಡೆ ಆಗೇ ಆಗುತ್ತದೆಯಂತೆ.

'ಕವಚ' ಮಲೆಯಾಳಂನ 'ಒಪ್ಪಂ' ಚಿತ್ರದ ರಿಮೇಕ್ ಆಗಿದೆ. ಕೃತಿ ಜಯರಾಮ್ ಹಾಗೂ ಇಷಾ ಕೊಪ್ಪಿಕರ್ ನಾಯಕಿರಾಗಿದ್ದಾರೆ. ಜಿವಿಆರ್ ವಾಸು ಚಿತ್ರದ ನಿರ್ದೇಶನ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಿನಿಮಾಗಿದೆ.
ಶಿವರಾಜ್ ಕುಮಾರ್ ಮೊದಲ ಬಾರಿಗೆ ಅಂಧನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ದಶಕಗಳ ಬಳಿಕ ಶಿವಣ್ಣ ರಿಮೇಕ್ ಸಿನಿಮಾ ಮಾಡುತ್ತಿದ್ದಾರೆ.


Click it and Unblock the Notifications











